
ಬಳ್ಳಾರಿ:(ಸೆ.27): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಬಳ್ಳಾರಿ ಜೈಲಿಗೆ ಬಂದು ಬರೋಬ್ಬರಿ ಒಂದು ತಿಂಗಳಾಯ್ತು. ದರ್ಶನ್ ಪರಪ್ಪನ ಅಗ್ರಹಾರಕ್ಕಿಂತ ಬಳ್ಳಾರಿ ಜೈಲಿನಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾನೆ.
ಇಂದು ಮತ್ತೊಮ್ಮೆ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ದರ್ಶನ್ ಮತ್ತೆ ಟೆನ್ಷನ್‌ನಲ್ಲಿದ್ದಾನೆ. ಸತತ ಏಳು ಗಂಟೆಗಳ ಕಾಲ ನಿನ್ನೆ ಐಟಿ ಅಧಿಕಾರಿಗಳ ವಿಚಾರಣೆಯಿಂದ ಸಾಕಷ್ಟು ಬಳಲಿದ್ದಾನೆ ದರ್ಶನ್.
ದರ್ಶನ್‌ಗೆ ಇದೆಲ್ಲಾ ಬೇಕಿತ್ತಾ? ಪ್ರಪಂಚದಲ್ಲಿ ಮಾಡೋಕೆ ಸಾಕಷ್ಟು ಕೆಲಸಗಳು ಇದೆ: 'ಕರಿಯಾ' ನಟಿ ಟಾಂಗ್
ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ಮತ್ತು ನಿನ್ನೆ ಐಟಿ ವಿಚಾರಣೆ ಹಿನ್ನಲೆಯಲ್ಲಿ ರಾತ್ರಿಯಿಡಿ ನಿದ್ದೆ ಮಾಡಿಲ್ವಂತೆ ದರ್ಶನ್. ಇವತ್ತಾದ್ರೂ ಜಾಮೀನು ಸಿಕ್ತದೆಯೋ ಇಲ್ವೋ? ನ್ಯಾಯಾಂಗ ಬಂಧನದ ಅವಧಿ ಮುಂದುವರೆಯುತ್ತದೆಯೋ ಎಂಬುದನ್ನು ಕಾದುನೋಡಬೇಕಿದೆ. ಹೀಗೆ ರಾತ್ರಿ ಪಾಳಯದ ಸಿಬ್ಬಂದಿ ಜೊತೆಗೆ ದರ್ಶನ್ ಚರ್ಚೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ