ಹಾವೇರಿ: ಪತ್ನಿಯನ್ನ ಮನೆಗೆ ಕಳಿಸದ್ದಕ್ಕೆ ಸಿಟ್ಟಿಗೆದ್ದು ಮಾವನ ಅಡಕೆ ತೋಟ ನಾಶ ಮಾಡಿದ ಅಳಿಯ..!

Published : Sep 27, 2024, 07:57 AM IST
ಹಾವೇರಿ: ಪತ್ನಿಯನ್ನ ಮನೆಗೆ ಕಳಿಸದ್ದಕ್ಕೆ ಸಿಟ್ಟಿಗೆದ್ದು ಮಾವನ ಅಡಕೆ ತೋಟ ನಾಶ ಮಾಡಿದ ಅಳಿಯ..!

ಸಾರಾಂಶ

ದೇವೇಂದ್ರಪ್ಪ ಗಾಣಿಗೇರ ಅವರು ತಾಲೂಕಿನ ಆಡೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದು, ತಮ್ಮ ಅಳಿಯ ಬಸವರಾಜ ತನ್ನ ಹೊಲದಲ್ಲಿನ 2 ವರ್ಷದ ಅಡಕೆ ಗಿಡಗಳನ್ನು ಕಡಿದು ಹಾಕಿರುವುದಾಗಿ ಆರೋಪಿಸಿದ್ದಾರೆ. 

ಹಾನಗಲ್ಲ(ಹಾವೇರಿ)(ಸೆ.27):  ಪತ್ನಿಯನ್ನು ತನ್ನ ಮನೆಗೆ ಕಳುಹಿಸದ್ದಕ್ಕೆ ಕುಪಿತಗೊಂಡ ಅಳಿಯನೋರ್ವ ಮಾವನ ಅಡಕೆ ತೋಟವನ್ನೇ ನಾಶಪಡಿಸಿದ ಘಟನೆ ಹಾನಗಲ್ಲ ತಾಲೂಕಿನ ಬಸಾಪುರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 

ದೇವೇಂದ್ರಪ್ಪ ಗಾಣಿಗೇರ ಅವರು ತಾಲೂಕಿನ ಆಡೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದು, ತಮ್ಮ ಅಳಿಯ ಬಸವರಾಜ ತನ್ನ ಹೊಲದಲ್ಲಿನ 2 ವರ್ಷದ ಅಡಕೆ ಗಿಡಗಳನ್ನು ಕಡಿದು ಹಾಕಿರುವುದಾಗಿ ಆರೋಪಿಸಿದ್ದಾರೆ. 

ರಾಣೆಬೆನ್ನೂರು: ಅಂಗನವಾಡಿಯಲ್ಲಿ ಮಕ್ಕಳನ್ನು ಸೊಳ್ಳೆಪರದೆಯಲ್ಲಿ ಕೂರಿಸಿ ಪಾಠ..!

ಬಸವರಾಜ ಸೊರಬದ ಬೈದವಟ್ಟಿ ಗ್ರಾಮದವ. 10 ವರ್ಷ ಹಿಂದೆ ದೇವೇಂದ್ರಪ್ಪರ ಮಗಳ ಜತೆ ವಿವಾಹವಾಗಿದ್ದರು. ಆದರೆ ಗಂಡನ ಕಿರುಕುಳ ತಾಳಲಾರದೇ ಆತನ ಪತ್ನಿ 3 ತಿಂಗಳ ಹಿಂದೆ ತವರಿಗೆ ತೆರಳಿದ್ದರು. ಪತ್ನಿಯನ್ನು ತನ್ನ ಜೊತೆಗೆ ಕಳುಹಿಸುವಂತೆ ಬಸವರಾಜ ಪರಿಪರಿಯಾಗಿ ಕೇಳಿಕೊಂಡರೂ ಮಾವ ಕಳುಹಿಸಿಲ್ಲ ಎನ್ನಲಾಗಿದೆ. ಇದರಿಂದ ಕುಪಿತಗೊಂದ ಬಸವರಾಜ ಸೆ.23ರಂದು ಅಡಕೆ ಮರಗಳನ್ನು ಕಡಿದು ಹಾಕಿದ್ದಾನೆ ಎಂದು ದೂರಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ