ಬಿಗ್ ಬಾಸ್ ಗೆ ಹೋಗ್ತೀರಾ ಅಂದ್ರೆ… “ಚಾನ್ಸೇ ಇಲ್ಲ, ನನಗೆ ನಾನೆ ಬಾಸು” ಅಂದ್ರು ನಟಿ ಹರಿಪ್ರಿಯಾ

First Published | Sep 27, 2024, 8:32 AM IST

ಬಿಗ್ ಬಾಸ್ ಸೀಸನ್ 11 ಶುರುವಾಗೋದಕ್ಕೆ ಕ್ಷಣಗಣನೆ ಶುರುವಾಗಿದ್ದು, ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಬಿಗ್ ಬಾಸ್ ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹರಡುತ್ತಿರೋ ನಡುವೆ ನನಗೆ ನಾನೆ ಬಾಸು ಅಂದ್ರು ನಟಿ. 
 

ಬಿಗ್ ಬಾಸ್ ಸೀಸನ್ 11 (Bigg Boss Season 11)  ಆರಂಭವಾಗೋದಕ್ಕೆ ಕ್ಷಣಗಣನೆ ಆರಂಭವಾಗಿದೆ.  ಪ್ರೀಮಿಯರ್ ಸೆಪ್ಟೆಂಬರ್ 29 ಸಂಜೆ 6 ಗಂಟೆಗೆ ಪ್ರಸಾರವಾಗಲಿದ್ದು, ಸೆಪ್ಟೆಂಬರ್‌ 28 ರಂದು ‘ರಾಜಾ ರಾಣಿ’ ಗ್ರ್ಯಾಂಡ್ ಫಿನಾಲೆ ವೇಳೆ ಸ್ಪರ್ಧಿಗಳ ಹೆಸರು  ರಿವೀಲ್ ಮಾಡಲಾಗುತ್ತೆ ಎಂದು ಈಗಾಗಲೇ ಕಿಚ್ಚ ಸುದೀಪ್​ ಹೇಳಿದ್ದಾರೆ. ಅಲ್ಲದೇ ಈಗಾಲೇ ಕೆಲವೊಂದಿಷ್ಟು ಮಂದಿಯ ಹೆಸರುಗಳು ಸಹ ಕೇಳಿ ಬರ್ತಿದೆ. 
 

ಈಗಾಗಲೇ ಬಿಡುಗಡೆಯಾಗಿರುವ ಬಿಗ್ ಬಾಸ್ ಸೀಸನ್ 11 ರ ಪ್ರೊಮೋದಲ್ಲಿ ಒಂದಷ್ಟು ಬ್ಲರ್ ಫೋಟೊಗಳು ಕಾಣಿಸಿಕೊಂಡಿದ್ದು, ಯಾರು ಅನ್ನೋದು ಸ್ಪಷ್ಟವಾಗಿ ಕಾಣಿಸೋದಿಲ್ಲ, ಹಾಗಾಗಿ ವೀಕ್ಷಕರು ಒಂದಷ್ಟು ಸೆಲೆಬ್ರಿಟಿಗಳ ಹೆಸರನ್ನು ತಾವಾಗಿಯೇ ಊಹಿಸಿಕೊಂಡಿದ್ದು, ಅವರೇ ಬರುತ್ತಾರೆ ಎಂದು ಅಂದುಕೊಂಡಿದ್ದಾರೆ. 
 

Tap to resize

ಸ್ಯಾಂಡಲ್ ವುಡ್ ಎವರ್ ಗ್ರೀನ್ ನಟಿ ಪ್ರೇಮಾ, ಕಿರಣ ರಾಜ್, ಅಮೂಲ್ಯ ಭಾರಧ್ವಜ್, ಹರೀಶ್ ನಾಗರಾಜ್, ಮಾನಸ ತಕಾಲಿ ಸಂತೋಷ್, ಗೌತಮಿ ಜಾಧವ್, ಪ್ರಿಯಾ ಶಠಮರ್ಷಣ, ಐಶ್ವರ್ಯ ರಂಗರಾಜನ್, ಅದ್ವಿತಿ ಮತ್ತು ಅಶ್ವಿತಿ ಶೆಟ್ಟಿ , ರೀಲ್ಸ್ ರೇಷ್ಮಾ, ಚಂದ್ರಪ್ರಭಾ, ರಾಘವೇಂದ್ರ, ಜಾಹ್ನವಿ, ಶರ್ಮಿತಾ ಗೌಡ, ತ್ರಿವಿಕ್ರಮ್, ಸುಕೃತಾ ನಾಗ್ ಜೊತೆ ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಹೆಸರು ಕೂಡ ಕೇಳಿ ಬರ್ತಿದೆ.

ಸೋಶಿಯಲ್ ಮೀಡೀಯಾ ಪೂರ್ತಿಯಾಗಿ ಹರಿಪ್ರಿಯಾ (Haripriya) ಬಿಗ್ ಬಾಸ್ ಗೆ ಬರ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಅಭಿಮಾನಿಗಳು ಸಹ ತಮ್ಮ ನೆಚ್ಚಿನ ನಟಿ ಹರಿಪ್ರಿಯಾರನ್ನು ಇನ್ನು ಮುಂದೆ ಕಿರುತೆರೆಯಲ್ಲಿ ಪ್ರತಿದಿನ ನೋಡಬಹುದು ಎಂದೂ, ಅವರ ಸ್ಪರ್ಧೆ, ಫೈಟ್ ಹೇಗಿರಬಹುದು ಎಂದು ನೋಡೋದಕ್ಕೆ ಕಾಯ್ತಿದ್ದಾರೆ. 
 

ಎಲ್ಲಾ ಕಡೆ ಬಿಗ್ ಬಾಸ್ ಸುದ್ದಿ ಹರಿದಾಡುತ್ತಿರುವ ಸಮಯದಲ್ಲಿ ನಟಿ ಹರಿಪ್ರಿಯಾ ಈ ಕುರಿತು ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದು, ಇದು ನಟಿ ಬಿಗ್ ಬಾಸ್ ಗೆ ಬರೋ ಚಾನ್ಸ್ ಇಲ್ಲ ಅನ್ನೋದನ್ನ ತಿಳಿಸುತ್ತೆ. ಅಷ್ಟಕ್ಕೂ ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ (social media post) ಮಾಡಿ ಹೇಳಿದ್ದೇನು ಗೊತ್ತಾ? ನೀವೇ ನೋಡಿ. 
 

ತಮ್ಮ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಬಿಗ್ ಬಾಸ್ ಸೀಸನ್ 11ಕ್ಕೆ ಹೋಗುವುದರ ಕುರಿತು ಅಭಿಮಾನಿಗಳು ಕೇಳುತ್ತಿರುವ ಪ್ರಶ್ನೆಗೆ ಉತ್ತರಿಸಿದ ಹರಿಪ್ರಿಯಾ… ಇಲ್ಲಪ್ಪಾ, ಇಲ್ಲ ನನಗೆ ನಾನೇ ಬಾಸ್, ನಾನು ನಮ್ಮ ಮನೆ ಬಿಟ್ಟು ಬೇರೆ ಯಾವ ಮನೆಗೂ ಹೋಗೋದಿಲ್ಲ ಎಂದಿದ್ದಾರೆ. ಆ ಮೂಲಕ ಎಲ್ಲಾ ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. 
 

Vasishta-Haripriya

ಅದಕ್ಕೂ ಮುನ್ನ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪತಿ ವಷಿಷ್ಠ ಸಿಂಹ ಜೊತೆಗೆ ಸೇರಿ ಮಾಡಿರುವ ಪೈಂಟಿಂಗ್ ವಿಡೀಯೋ ಹಂಚಿಕೊಂಡಿದ್ದು, ಅದಕ್ಕೂ ಬಿಗ್ ಬಾಸ್ ಕಾಮೆಂಟ್ ಬಂದಾಗ ನಟಿ ಚಾನ್ಸೇ ಇಲ್ಲ. ನಾನು ಎಲ್ಲಿಗೂ ಹೋಗಲ್ಲ ಅಂದಿದ್ದರು. 
 

Latest Videos

click me!