ಲುಂಗಿ ಹೋಗಿ ಪ್ಯಾಂಟ್ ಬಂತು, ಸುದರ್ಶನ್ ಭಟ್ ಜೊತೆ ಬೈಕ್ ಏರಿದ ಕೃತಿ, ಮದುವೆ ಡೇಟ್ ಅನೌನ್ಸ್ಡ್

By Roopa Hegde  |  First Published Sep 27, 2024, 7:39 AM IST

ಭಟ್ ಎನ್ ಭಟ್ ಫೇಮ್ ಸುದರ್ಶನ್ ಭಟ್ ಮದುವೆಯಾಗ್ತಿದ್ದಾರೆ. ಭಟ್ ಮತ್ತು ಕೃತಿ ಜೋಡಿ ಜನರ ಗಮನ ಸೆಳೆದಿದೆ. ಅವರ ಪ್ರಿವೆಡ್ಡಿಂಗ್ ಫೋಟೋ ಹಾಗೂ ವಿಡಿಯೋವನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಈ ಬಾರಿ ಸುದರ್ಶನ್ ತಮ್ಮ ಸ್ಟೈಲ್ ಬದಲಿಸಿದ್ದು, ಜೋಡಿ ಮದುವೆ ಡೇಟ್ ಅನೌನ್ಸ್ ಮಾಡಿದ್ದಾರೆ. 
 


ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (Social Media Influencer) ‌ ಜನರಿಗೆ ಮಾದರಿಯಾಗಿರ್ಬೇಕು. ಅದಕ್ಕೆ ಭಟ್ ಎನ್ ಭಟ್ ಯುಟ್ಯೂಬ್ ಚಾನೆಲ್ (Bhat N Bhat Youtube Channel) ಖ್ಯಾತಿಯ ಸುದರ್ಶನ್ ಭಟ್ (Sudarshan Bhatt) ಸ್ಫೂರ್ತಿಯಾಗಿದ್ದಾರೆ. ತಮ್ಮ ಅಡುಗೆ ಮೂಲಕವೇ ಕೋಟ್ಯಾಂತರ ಮನೆ ತಲುಪಿರುವ ಸುದರ್ಶನ್, ಸಂಪ್ರದಾಯಿಕ ಅಡುಗೆ ಹೇಳಿಕೊಡುತ್ತ, ಬಾಯ್ಸ್ ಕೂಡ ರುಚಿಕಟ್ಟಾಗಿ ಅಡುಗೆ ಮಾಡ್ಬಹುದು ಎಂಬುದನ್ನು ಮತ್ತೆ ಸಾಭೀತುಪಡಿಸಿದ್ದಾರೆ. ಈಗ ಮದುವೆ ವಿಷ್ಯದಲ್ಲಿ ಸುದರ್ಶನ್ ಎಲ್ಲರ ಗಮನ ಸೆಳೆದಿದ್ದಾರೆ. ನೋಡಲು ಸಾಧ್ಯವಾಗದ ಬಟ್ಟೆತೊಟ್ಟ, ವಿದೇಶದಲ್ಲೆಲ್ಲೋ ಪ್ರೀ ವೆಡ್ಡಿಂಗ್ ವಿಡಿಯೋ ಶೂಟ್ (Wedding Video Shoot) ಮಾಡಿಸುವ ಜೋಡಿ ಮಧ್ಯೆ ನಮ್ಮ ಭಟ್ ಮತ್ತು ಅವರ ಭಾವಿ ಪತ್ನಿ ಕೃತಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ವೈರಲ್ ಆಗಿದೆ. 

ಈಗ ಟೀಚರಮ್ಮ ಕೃತಿ ಹಾಗೂ ಸುದರ್ಶನ್ ಭಟ್ ಮತ್ತೊಂದು ಪ್ರೀ ವೆಡ್ಡಿಂಗ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದೆ. ಒಂದು ವಿಡಿಯೋದಲ್ಲಿ ಸುದರ್ಶನ್ ವೃತ್ತಿಗೆ ಆದ್ಯತೆ ನೀಡಿದ್ರೆ ಈ ವಿಡಿಯೋದಲ್ಲಿ ಕೃತಿ ವೃತ್ತಿಗೆ ಮಹತ್ವ ನೀಡಲಾಗಿದೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಇಂಗ್ಲೀಷ್ ಪಾಠ ಹೇಳುವ ಕೃತಿ ನಂತ್ರ ಸ್ಟಾಫ್ ರೂಮ್ ಗೆ ಬಂದು ಡಬ್ಬ ಹುಡುಕ್ತಾರೆ. ಆದ್ರೆ ಬ್ಯಾಗ್ ನಲ್ಲಿ ಡಬ್ಬ ಇರೋದಿಲ್ಲ. ಈ ವೇಳೆ ಸುದರ್ಶನ್ ಭಟ್ ತಮ್ಮ ಸ್ಟೈಲ್ ಚೇಂಜ್ ಮಾಡಿ ಅಲ್ಲಿಗೆ ಬರ್ತಾರೆ. ತಲೆಗೆ ಮುಂಡಾಸ ಸುತ್ತಿಕೊಂಡು, ಲುಂಗಿಯುಡುತ್ತಿದ್ದ ಸುದರ್ಶನ್ ಭಟ್ ಸ್ಟೈಲ್ ಈ ಬಾರಿ ಚೇಂಜ್ ಆಗಿದೆ. ಪ್ಯಾಂಟ್ ಮತ್ತು ಶರ್ಟ್ ನಲ್ಲಿ ಡಿಸೇಂಟ್ ಆಗಿ ಕಾಣುವ ಭಟ್ರು, ಬೈಕ್ ಹತ್ತಿ ಶಾಲೆಗೆ ಬರ್ತಾರೆ. ಅವರ ಜೊತೆ ಘಮಘಮಿಸುವ ಡಬ್ಬ ಕೂಡ ಇರುತ್ತೆ. ಅದನ್ನು ನೋಡಿ ಖುಷಿಯಾಗುವ ಕೃತಿ, ಡಬ್ಬದಲ್ಲಿದ್ದ ಪಲಾವ್ ವಾಸನೆ ತೆಗೆದುಕೊಳ್ತಾರೆ. ಕೊನೆಯಲ್ಲಿ ಸುದರ್ಶನ್ ಭಟ್ ಬೈಕ್ ಏರುವ ಕೃತಿ ಮೇಡಂ, ಶಾಲೆಯಿಂದ ಹೊರಗೆ ಹೋಗ್ತಾರೆ. 

Tap to resize

Latest Videos

undefined

'ಅಮೃತಧಾರೆ' ಯಲ್ಲಿ ಮಹಿಮಾ ಕಾಣಿಸಿಕೊಳ್ಳದಿರುವುದಕ್ಕೆ ಇದೇ ಕಾರಣನಾ?

ವಿಡಿಯೋ ಕೊನೆಯಲ್ಲಿ ಸುದರ್ಶನ್ ಭಟ್ ತಮ್ಮ ಮದುವೆ ಯಾವಾಗ ಎಂಬ ಗುಟ್ಟನ್ನು ಬಿಟ್ಕೊಟ್ಟಿದ್ದಾರೆ. ಇದೇ ಅಕ್ಟೋಬರ್ ನಾಲ್ಕರಂದು ಕೃತಿ ಹಾಗೂ ಸುದರ್ಶನ್ ಭಟ್ ಮದುವೆ ನಡೆಯಲಿದೆ. ಅವರ್ ಡೇಟ್ ಅಂತ 4/10/2024ರ ದಿನಾಂಕ ಬರೆಯಲಾಗಿದೆ. 

ಇನ್ಸ್ಟಾಗ್ರಾಮ್ ನಲ್ಲಿ ಸುದರ್ಶನ್ ಭಟ್ ಮತ್ತು ಕೃತಿ ಇಬ್ಬರೂ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಭಿನ್ನವಾಗಿ ಮೂಡಿಬಂದಿರುವ ಈ ವಿಡಿಯೋಕ್ಕೂ ಜನರು ಮೆಚ್ಚುಗೆ ಸೂಚಿಸಿದ್ದಾರೆ. ನಿಮ್ದು ಲವ್ ಮ್ಯಾರೇಜಾ ಅಥವಾ ಅರೆಂಜ್ ಮ್ಯಾರೇಜಾ ಅಂತಾ ಫಾಲೋವರ್ಸ್ ಪ್ರಶ್ನೆ ಕೇಳಿದ್ದಾರೆ. ಭಟ್ರಿಗೆ ಅಡುಗೆ ಮಾಡೋ ಜೊತೆಗೆ ಇನ್ಮುಂದೆ ಅಕ್ಕೋರಿಗೆ ಊಟಾನೂ ತಗೊಂಡೋಗೋ ಕೆಲಸ ಎಂದು ಇನ್ನೊಬ್ಬರು ಕಾಲೆಳೆದಿದ್ದಾರೆ. ಒಟ್ಟನಲ್ಲಿ ಸುದರ್ಶನ್ ಭಟ್ ಅವರ ಸ್ಟೈಲ್, ವಿಶಿಷ್ಟ್ಯವಾಗಿ ಮೂಡಿಬಂದ ಪ್ರಿವೆಡ್ಡಿಂಗ್ ವಿಡಿಯೋ ಶೂಟ್ ಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಆಗಸ್ಟ್ 23ರಂದು ಕೃತಿ ಮತ್ತು ಸುದರ್ಶನ್ ಎಂಗೇಜ್ಮೆಂಟ್ ನಡೆದಿದ್ದು, ಜೋಡಿ ಮದುವೆ ತಯಾರಿಯಲ್ಲಿ ಬ್ಯುಸಿಯಿದೆ. ಇಬ್ಬರು ನೂರ್ಕಾಲ ಒಟ್ಟಿಗೆ ಬಾಳಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಹಾಗೆಯೇ ಸುದರ್ಶನ್ ಮತ್ತು ಕೃತಿ ಮದುವೆ ಫೋಟೋ, ವಿಡಿಯೋಗೆ ಕಾಯ್ತಿದ್ದಾರೆ. 

Drustibottu : ದೃಷ್ಟಿ ಮೇಲೆ ಕಣ್ಣಿಟ್ಟಿರೋ ಕಿರಾತಕ ಪೊಲೀಸ್ ಆಫೀಸರ್ ಚಂದನವನ ಖ್ಯಾತ ನಟ, ನಿರ್ದೇಶಕರೂ ಹೌದು !

ಸುದರ್ಶನ್ ಭಟ್, ಕಾಸರಗೋಡಿದ ಸೀತಂಗೋಳಿಯವರು. ಕೃತಿ ಕಡಬ ತಾಲೂಕಿನ ಬೆಳಂದೂರಿನವರು. ಖಾಸಗಿ ಶಾಲೆ ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ದಾರೆ. ಭಟ್ ಎನ್ ಭಟ್ ಚಾನೆಲ್ ಯಶಸ್ಸಿಗೆ ಮನೆಯ ಎಲ್ಲ ಸದಸ್ಯರು ಕೆಲಸ ಮಾಡ್ತಿದ್ದಾರೆ. ಕಾನೂನು ಕಲಿತಿರುವ ಸುದರ್ಶನ್ ಭಟ್ ಅಡುಗೆ ಮಾಡಿದ್ರೆ, ಸಹೋದರ ಎಡಿಟಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ಅಕ್ಕ ಕೂಡ ಸಬ್ ಟೈಟಲ್ ಸೇರಿದಂತೆ ಯುಟ್ಯೂಬ್ ಕೆಲಸದಲ್ಲಿ ಸಹಾಯ ಮಾಡ್ತಾರೆ. 

click me!