ಅಂತಿಂಥವನಲ್ಲ ಜಮೀರ್ ಆಪ್ತ; ಕ್ರಿಕೆಟ್‌ ಜೊತೆಯೂ ಶೇಖ್‌ ನಂಟು?

Sep 13, 2020, 11:11 AM IST

ಬೆಂಗಳೂರು (ಸೆ. 13): ಶಾಸಕ ಜಮೀರ್ ಖಾನ್ ಆಪ್ತ ಶೇಖ್ ಅಂತಿಂಥವನಲ್ಲ. ಈತನ ಐಷಾರಾಮಿ ಜೀವನ, ಕೋಟಿಗಟ್ಟಲೇ ವ್ಯವಹಾರವನ್ನು ನೋಡಿದ್ದಾಯ್ತು. ಈಗ ಈತನಿಗೆ ಕ್ರಿಕೆಟ್‌ ನಂಟೂ ಇದೆ ಎಂದು ತಿಳಿದು ಬರುತ್ತಿದೆ. ಪ್ರತಿಷ್ಠಿತ ಲೀಗ್‌ ನಲ್ಲಿ ಶೇಖ್ ಹೂಡಿಕೆ ಮಾಡಿದ್ದಾರೆ ಎಂದು ತಿಳಿದು ಬರುತ್ತಿದೆ.

ಮಾತೆತ್ತಿದರೆ ರೇಪ್ ಕೇಸ್‌ ಹಾಕ್ತೀನಿ ಅಂತಾಳೆ ಈ ಆಂಟಿ; ಹುಷಾರಪ್ಪೋ ಹುಷಾರ್..!

ಅಬುಧಾಬಿ ಟಿ-10 ನಲ್ಲಿ ಹೂಡಿಕೆ ಮಾಡಿದ್ದಾರಂತೆ. ಫಿಕ್ಸಿಂಗ್‌ನಲ್ಲಿ ಸಿಲುಕಿದ್ದ ಬಳ್ಳಾರಿ ಟಸ್ಕರ್ಸ್‌ ಜೊತೆಯೂ ಶೇಖ್‌ಗೆ ಲಿಂಕ್ ಇದೆ ಎನ್ನಲಾಗುತ್ತದೆ. ಟಸ್ಕರ್ಸ್‌ನ ಪ್ರಮುಖ ಸ್ಪಾನ್ಸರ್ ಬೆಲ್ಲೀಸ್ ಕ್ಯಾಸಿನೋ. ಈ ಕ್ಯಾಸಿನೋಗೆ ಶೇಖ್ ಮಾರ್ಕೆಟಿಂಗ್ ಡೈರೆಕ್ಟರ್. ಇಡೀ ಪ್ರಕರಣದಲ್ಲಿ ಕಿಂಗ್ ಪಿನ್ ಆಗಿರುವ ಶೇಕ್‌ಗೆ ಸಿಸಿಬಿ ಹುಡುಕಾಟ ನಡೆಸುತ್ತಿದೆ. ಈತ ಸಿಕ್ಕರೆ ಅನೇಕ ವಿಚಾರಗಳು ಹೊರಬರಲಿವೆ. ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ.!