ನಟನೆಗೆ ಮಾತ್ರವಲ್ಲ, ಬ್ಯುಸಿನೆಸ್’ನಲ್ಲೂ ಸೈ ಎನಿಸಿಕೊಂಡ ಕನ್ನಡ ಕಿರುತೆರೆ ನಟಿಯರಿವರು

First Published | Dec 12, 2024, 5:08 PM IST

ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಜನಪ್ರಿಯ ನಟಿಯರು, ಉದ್ಯಮಿಗಳು ಕೂಡ ಆಗಿದ್ದು, ಆ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ . ಆ ನಟಿಯರು ಯಾರು ಅನ್ನೋದನ್ನು ನೋಡೋಣ. 
 

ಕನ್ನಡ ಕಿರುತೆರೆಯಲ್ಲಿ (Kannada serial actresses) ಗುರುತಿಸಿಕೊಂಡಿರುವ ಹಲವು ನಟಿಯರು, ನಿರೂಪಕಿಯರು ಕೇವಲ ಕಿರುತೆರೆಗಷ್ಟೇ ಸೀಮಿತವಾಗಿ ಉಳಿದಿಲ್ಲ. ಬದಲಾಗಿ ತಮ್ಮದೇ ಆದ ಉದ್ಯಮವನ್ನು ಕೂಡ ನಡೆಸಿಕೊಂಡು ಬರುತ್ತಿದ್ದಾರೆ. ಯಾವ ನಟಿಯರು ಉದ್ಯಮ ಕೂಡ ಮಾಡ್ತಿದ್ದಾರೆ ನೋಡೋಣ. 
 

ಶ್ವೇತಾ ಚೆಂಗಪ್ಪ : (Shwetha Chengappa)
ಕನ್ನಡ ಕಿರುತೆರೆಯ ನಟಿ ನಿರೂಪಕಿ ಶ್ವೇತಾ ಚಂಗಪ್ಪ ತನ್ನದೇ ಆದ ಡಿಸೈನರ್ ಬಟ್ಟೆ ಬ್ರಾಂಡ್ ಅನ್ನು ಸಹ ಹೊಂದಿದ್ದಾರೆ. ತಾರಾ ಡಿಸೈನರ್ ಕ್ಲೋತಿಂಗ್ ಬ್ರಾಂಡ್ ಎನ್ನುವ ಹೆಸರಿನ ಕಂಪನಿ ನಡೆಸುತ್ತಿದ್ದಾರೆ.

Tap to resize

ಶ್ವೇತಾ ಆರ್ ಪ್ರಸಾದ್  (Shwetha Prasad)
ಶ್ರೀರಸ್ತು ಶುಭಮಸ್ತು ಮತ್ತು ರಾಧಾ ರಮಣ ಸೀರಿಯಲ್ ಮೂಲಕ ಇವರು ಜನಮನ ಗೆದ್ದಿದ್ದ ಶ್ವೇತಾ ಆರ್ ಪ್ರಸಾದ್ ನೈಸರ್ಗಿಕ ಮತ್ತು ಸಾವಯವ ಉತ್ಪನ್ನಗಳ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಸಮಾಜ ಸೇವೆಯಲ್ಲೂ ಸಹ ಇವರು ಬ್ಯುಸಿಯಾಗಿದ್ದಾರೆ. 

ದಿವ್ಯಾ ಉರುಡುಗ (Divya Uruduga) : 
ಬಿಗ್ ಬಾಸ್ ಸೀಸನ್ 8 ರ ಮೂಲಕ ಜನಪ್ರಿಯತೆ ಪಡೆದು, ಇದೀಗ ನಿನಗಾಗಿ ಸೀರಿಯಲ್ ನಲ್ಲಿ ಮಿಂಚುತ್ತಿರುವ ದಿವ್ಯಾ ಉರುಡುಗ ನೇಲ್ ಆರ್ಟ್ ಹಾಗೂ ಲ್ಯಾಶ್ ಸ್ಟುಡಿಯೋವನ್ನು ಇತ್ತೀಚೆಗೆ ಶುರು ಮಾಡಿದ್ದಾರೆ. 

ದೀಪಿಕಾ ದಾಸ್ (Deepika das)
ದೀಪಿಕಾ ದಾಸ್ ಎಷ್ಟೊಂದು ಸ್ಟೈಲಿಶ್ ಹಾಗೂ ಫ್ಯಾಷನ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡ್ತುತ್ತಲೇ ಇರುತ್ತಾರೆ. ಉನ್ನತ ಫ್ಯಾಷನ್ ಸ್ಟೇಟ್ ಮೆಂಟ್ ಗೆ ಹೆಸರುವಾಸಿಯಾದ ದೀಪಿಕಾ ತನ್ನದೇ ಆದ ಫ್ಯಾಷನ್ ಲೇಬಲ್ ಕೂಡ ಹೊಂದಿದ್ದಾರೆ.

ರೂಪಿಕಾ (Roopika) : 
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಹರೀಶನ ಬೇಬಿ ಸಿಂಚಹನಾ ಆಗಿ ನಟಿಸುತ್ತಿರುವ ನಟಿ ರೂಪಿಕಾ, ಒಬ್ಬ ಡ್ಯಾನ್ಸರ್ ಆಗಿದ್ದು, ತಮ್ಮದೇ ಆದ ಗೆಜ್ಜೆ ಡ್ಯಾನ್ಸ್ ಸ್ಟುಡಿಯೋ ಎನ್ನುವ ನೃತ್ಯ ಸಂಸ್ಥೆಯನ್ನೂ ಸಹ ನಡೆಸುತ್ತಿದ್ದಾರೆ. 
 

ಕವಿತಾ ಗೌಡ (Kavitha Gowda) :  
ಪತಿ ಚಂದನ್ ಕುಮಾರ್ ಅವರ ಹೆಜ್ಜೆಗಳನ್ನು ಅನುಸರಿಸಿ, ಕವಿತಾ ಉದ್ಯಮಿಯಾಗಿ ಮಾರ್ಪಟ್ಟಿದ್ದಾರೆ. ನಟಿ ತನ್ನದೇ ಆದ ಸ್ಟುಡಿಯೋ ನಡೆಸುತ್ತಿದ್ದು, ಇದರ ಜೊತೆಗೆ ಸದ್ಯ ತಮ್ಮ ಪತಿ ಜೊತೆ ಹೊಟೇಲ್ ಬ್ಯುಸಿನೆಸ್ ಕೂಡ ನೋಡಿಕೊಳ್ಳುತ್ತಿದ್ದಾರೆ. 

ನಯನಾ ಕೆ.ಎಂ.(Nayana KM)
ನಟಿ, ಮಾಮ್ ಬ್ಲಾಗರ್ ಮತ್ತು ಇನ್’ಫ್ಲ್ಯುಯೆನ್ಸರ್ ಆಗಿರುವ, ನಯನಾ ಈಗ ಉದ್ಯಮಿಯಾಗಿದ್ದಾರೆ.  ನಯನಾ ಸೀರೆ ವ್ಯವಹಾರಕ್ಕೆ ಕಾಲಿಟ್ಟಿದ್ದಾರೆ ಮತ್ತು ಬೆಂಗಳೂರಿನಲ್ಲಿ ಅಂಗಡಿಯನ್ನು ಸಹ ತೆರೆದಿದ್ದಾರೆ. ನಟಿ ತನ್ನ ಅಂಗಡಿಯಲ್ಲಿ ವಿವಿಧ ರೀತಿಯ ಹ್ಯಾಂಡ್ ಲೂಮ್ ಸೀರೆ, ಡಿಸೈನರ್ ಬ್ಲೌಸ್ ಎಲ್ಲವನ್ನೂ ಹೊಂದಿದ್ದಾರೆ. 

ಚೈತ್ರಾ ವಾಸುದೇವನ್  (Chaithra Vasudevan)
ನಿರೂಪಕಿಯಾಗಿರುವ ಚೈತ್ರಾ ವಾಸುದೇವನ್ ಯಶಸ್ವಿ ಉದ್ಯಮಿಯೂ ಹೌದು. ಇವರು ತಮ್ಮದೇ ಆದ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ಹೊಂದಿದ್ದಾರೆ. ಜೊತೆಗೆ ಇವರು ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಕೂಡ ಹೊಂದಿದ್ದಾರೆ. 
 

Latest Videos

click me!