ಬೀದರ್: ಸಚಿವೆ ಖಂಡ್ರೆಗೆ ನೀಡಿದ್ದ ಡೆಡ್‌ಲೈನ್‌ ಅಂತ್ಯ, ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ರೈತರು!

By Girish Goudar  |  First Published Dec 12, 2024, 5:01 PM IST

ಕಾರಂಜಾ ಸಂತ್ರಸ್ತರಿಂದ 15 ದಿನ ಸಚಿವರಿಗೆ ನೀಡಿದ ಗಡುವು ಮುಕ್ತಾಯವಾದ ಹಿನ್ನೆಲೆಯಲ್ಲಿ ಇಂದು ಧರಣಿ ಸ್ಥಳದಲ್ಲೇ ವಿಷ ಸೇವಿಸಿ ರೈತರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿ ಇಬ್ಬರು ರೈತರು ಅಸ್ವಸ್ಥರಾಗಿದ್ದಾರೆ. 


ಬೀದರ್(ಡಿ.12): ಕ್ರಿಮಿನಾಶಕ ಸೇವಿಸಿ ರೈತರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗಡಿ ಜಿಲ್ಲೆ ಬೀದರ್‌ನಲ್ಲಿ ಇಂದು(ಗುರುವಾರ) ನಡೆದಿದೆ. ಈ ಮೂಲಕ ಕಾರಂಜಾ ಸಂತ್ರಸ್ತರ ಹೋರಾಟ ತೀವ್ರ ಸ್ವರೂಪ ಪಡೆದಿದೆ. 

ಕಾರಂಜಾ ಸಂತ್ರಸ್ತರಿಂದ 15 ದಿನ ಸಚಿವರಿಗೆ ನೀಡಿದ ಗಡುವು ಮುಕ್ತಾಯವಾದ ಹಿನ್ನೆಲೆಯಲ್ಲಿ ಇಂದು ಧರಣಿ ಸ್ಥಳದಲ್ಲೇ ವಿಷ ಸೇವಿಸಿ ರೈತರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿ ಇಬ್ಬರು ರೈತರು ಅಸ್ವಸ್ಥರಾಗಿದ್ದಾರೆ. 

Tap to resize

Latest Videos

ಇನ್ನೂ ಮೂರು ವರ್ಷ ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಲ್ಲ: ಸಚಿವ ಈಶ್ವರ ಖಂಡ್ರೆ

ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಕಚೇರಿ ಎದುರು ಸಂತ್ರಸ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತರನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಗರದ ಬ್ರೀಮ್ಸ್ ಆಸ್ಪತ್ರೆಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. 

undefined

ಇಂದು ಪರಿಹಾರಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆಗೆ ಕಾರಂಜಾ ಸಂತ್ರಸ್ತರು ಡೆಡ್‌ಲೈನ್ ನೀಡಿದ್ದರು. ವೈಜ್ಞಾನಿಕ ಪರಿಹಾರಕ್ಕಾಗಿ ಕಳೆದ 890 ದಿನಗಳಿಂದ ರೈತರು ಅನಿರ್ದಿಷ್ಟ ಧರಣಿ ನಡೆಸುತ್ತಿದ್ದಾರೆ. 

'ಮಿಸ್ಟರ್ ಸಿದ್ದರಾಮಯ್ಯ ರೈತರ ಭೂಮಿ ವಾಪಸ್ ಕೊಟ್ರೆ ಸರಿ ಇಲ್ಲದಿದ್ರೆ.., ಸಿಎಂಗೆ ಡೆಡ್‌ಲೈನ್ ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್!

ಬೀದರ್: ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಹೆಸರು ವಿವಾದ ತೀವ್ರ ಸ್ವರೂಪ ಪಡೆಯುತ್ತಲೇ ರೈತರ ಸಂಘಟನೆ ಮುಖಂಡರ ಮೇಲೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸಿಎಂ ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದಿದ್ದರು

2 ಸಾವಿರ ಜನರಿರುವ ಬೀದರ್‌ನ ಇಡೀ ಗ್ರಾಮವೇ ವಕ್ಫ್‌ ಆಸ್ತಿ: 200 ಕುಟುಂಬಕ್ಕೆ ಶಾಕ್!

ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ವಿಚಾರವಾಗಿ ಇಂದು ಬೀದರ್‌ನಲ್ಲಿ ನಡೆದ ಬೃಹತ್ ಪ್ರತಿಭಟನಾ ರಾಲಿಯಲ್ಲಿ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ರೈತರ ಜಮೀನುಗಳನ್ನು ವಾಪಸ್ ಕೊಡಬೇಕು. ಸಿಎಂ ಸಿದ್ದರಾಮಯ್ಯರಿಗೆ ಇದು ಕೊನೆ ಡೆಡ್‌ಲೈನ್. ನ.15 ರಂದು ಕಾವೇರಿಗೆ ರೈತ ಮುಖಂಡರು ಬರುತ್ತೇವೆ. ಅಂದು ಅಧಿಕಾರಿಗಳು ರೈತರ ಜಮೀನುಗಳನ್ನ ವಾಪಸ್ ಕೊಟ್ರೆ ಸರಿ. ಇಲ್ಲವಾದ್ರೆ ವಕ್ಫ ಸೇರಿದ ಜಮೀನುಗಳನ್ನ ನಾವೇ ಸ್ವಾಧೀನ ಪಡೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದರು

ಈ ಹಿಂದೆ ಮಾಡಿದ್ದ ವಕ್ಫ್ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಬೇಕು.‌‌ ನೀವು ವಕ್ಫ್ ಹೆಸರಿನಲ್ಲಿ ಗೂಂಡಾಗಿರಿ ಮಾಡಿ ವಕ್ಫ್ ಟ್ರಸ್ಟ್ ಗೆ ನಮ್ಮ ರೈತರ ಜಮೀನು ಸೇರಿಸಿದ್ದೀರಿ. ವಕ್ಫ್ ನೋಟಿಸ್ ಗಳನ್ನು ವಾಪಸ್ ಪಡೆಯಿರಿ. ಎಲ್ಲೆಲ್ಲಿ ಗೊಂದಲ ಇದೆ ಅಲ್ಲಿ ಮಾತ್ರ ವಾಪಸ್ ಗೆ ನಿರ್ದೇಶನ‌ ಕೊಟ್ಟಂತಿದೆ. ಆದರೆ ಹೇಳೋದನ್ನು ಸ್ವಲ್ಪ ಗಮನವಿಟ್ಟು ಕೇಳಿ. ಈ ಹಿಂದೆ ವಕ್ಫ್ ಬೋರ್ಡ್‌ಗೆ ನೀಡಿದ್ದ ವಿಶೇಷ ಅಧಿಕಾರ ರದ್ದು ಮಾಡಿ. ಮಿಸ್ಟರ್ ಸಿದ್ದರಾಮಯ್ಯನವರೇ ನೀವು ರದ್ದು ಮಾಡದಿದ್ರೆ ರಾಜ್ಯದಲ್ಲಿ ದೊಡ್ಡ ರೈತ ಕ್ರಾಂತಿಯಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯಗೆ ಕೊನೆಯದಾಗಿ ಡೆಡ್‌ಲೈನ್ ನೀಡಿದ್ದರು.

click me!