ಹತ್ಯೆ ಬಗ್ಗೆ ಬೇಸಿಕ್ ಮಾಹಿತಿನೇ ಇಲ್ಲದ ಸೂಲಿಬೆಲೆಗೆ ತಲೆಯೇ ಸರಿ ಇಲ್ಲ: ಮಹದೇವಪ್ಪ ಪುತ್ರ

Jul 11, 2023, 10:19 PM IST

ಮೈಸೂರು (ಜು.11): ಮೈಸೂರಿನಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣ ಸಂಬಂಧ ಮೃತ ವೇಣುಗೋಪಾಲ್ ನಿವಾಸಕ್ಕೆ ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಭೇಟಿ ನೀಡಿ ಮೃತನ ತಾಯಿ, ಪತ್ನಿಗೆ ಸಾಂತ್ವಾನ ಹೇಳಿದರು. ಜೊತೆಗೆ ವೈಯಕ್ತಿಕವಾಗಿ 50 ಸಾವಿರ ಧನಸಹಾಯ ಮಾಡಿದರು. ಇದೇ ವೇಳೆ ಚಕ್ರವರ್ತಿ ಸೂಲಿಬೆಲೆಗೆ  ಸುನೀಲ್ ಬೋಸ್ ತೀಕ್ಷ್ಣ ತಿರುಗೇಟು ನೀಡಿದರು. ಚಕ್ರವರ್ತಿ ಸೂಲಿಬೆಲೆಗೆ ತಲೆ ಸರಿ ಇಲ್ಲ. ಅವರಿಗೆ ಮೊದಲು ಉತ್ತಮ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅಗತ್ಯ ಇದೆ. ಸುಳ್ಳಿನಿಂದಲೇ ಜೀವನ ಕಟ್ಟಿಕೊಂಡಿರುವ ವ್ಯಕ್ತಿ ಅವರು. ಈ‌ ಕೊಲೆ ಪ್ರಕರಣದಲ್ಲೂ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಕೊಲೆ ವಿಚಾರದಲ್ಲಿ ಸೂಲಿಬೆಲೆಗೆ ಪ್ರಾಥಮಿಕ ಮಾಹಿತಿ ಇಲ್ಲ. ಸತ್ತಿರುವ ಯುವಕ ನಾಯಕ ಸಮುದಾಯದ ವ್ಯಕ್ತಿ. ಆದರೆ ಸೂಲಿಬೆಲೆ ಅವರನ್ನ ದಲಿತ ಸಮುದಾಯ ಎಂದು ಸುಳ್ಳು ಹೇಳುತ್ತಾರೆ. ಸುಲಿಬೆಲೆಗೆ ಮೊದಲು ಚಿಕಿತ್ಸೆ ಕೊಡಿಸಿ ಎಂದಿದ್ದಾರೆ.