Fashion
ದಿನ ಬಳಕೆಗೆ ಸಿಂಪಲ್ ಆಗಿರುವುದರ ಜೊತೆ ನೋಡುವುದಕ್ಕೂ ಚಂದ ಕಾಣುವ ಸ್ಟೈಲ್ ಆಗಿರುವ ಬೆಳ್ಳಿ ಕಾಲ್ಗೆಜ್ಜೆಗಳ ಹೊಸ ಡಿಸೈನ್‌ಗಳು ಇಲ್ಲಿವೆ.
ವಿವಾಹಿತ ಮಹಿಳೆಯರಿಂದ ಹಿಡಿದು ಯುವತಿಯರವರೆಗೆ ತಮ್ಮ ಪಾದಗಳ ಸೌಂದರ್ಯ ಹೆಚ್ಚಿಸಲು ಬೆಳ್ಳಿ ಕಾಲ್ಗೆಜ್ಜೆ ಧರಿಸುತ್ತಾರೆ. ನಿಮ್ಮ ದಿನನಿತ್ಯದ ಬಟ್ಟೆಗೆ ಈ ರೀತಿಯ ಬೆಳ್ಳಿ ಕಾಲ್ಗೆಜ್ಜೆ ಸೂಟ್ ಆಗುತ್ತೆ.
ದಿನನಿತ್ಯದ ಉಡುಗೆಗೆ ನೀವು ಚೈನ್ ಶೈಲಿಯ ಈ ಹೂವಿನ ಡಿಸೈನ್‌ನ ಕಾಲ್ಗೆಜ್ಜೆ ಧರಿಸಬಹುದು. ಸರಳ ಹೂವಿನ ವಿನ್ಯಾಸದಲ್ಲಿಯೂ ಇವು ಲಭ್ಯವಿದೆ.
2024 ರಲ್ಲಿ ಈ ಸಿಂಪಲ್ ಕಾಲ್ಗೆಜ್ಜೆ ಟ್ರೆಂಡ್‌ನಲ್ಲಿದೆ. ನೀವು ಅದ್ದೂರಿ ಆಭರಣ ಧರಿಸುವುದನ್ನು ಇಷ್ಟಪಡದಿದ್ದರೆ ಈ ಆಯ್ಕೆ ನಿಮಗೆ ಬೆಸ್ಟ್
ಕುಂದನ್-ಬೆಳ್ಳಿ ಪಾಯಲ್ ದಿನನಿತ್ಯದ ಉಡುಗೆಯ ಜೊತೆಗೆ ಯಾವುದೇ ಸಮಾರಂಭದಲ್ಲೂ ಧರಿಸಬಹುದು. ಈ ಪಾಯಲ್‌ನಲ್ಲಿ ಮುತ್ತುಗಳ ಜೊತೆಗೆ ಕಲ್ಲು ಮತ್ತು ಮಾಣಿಕ್ಯದ ಕೆಲಸವೂ ಇದೆ.
ಬಣ್ಣಬಣ್ಣದ ಈ ಅಲಂಕಾರಿಕ ಗೆಜ್ಜೆ ಪಾದಗಳ ಸೌಂದರ್ಯ ಹೆಚ್ಚಿಸುತ್ತದೆ. ನೀವು ಈ ಕಲ್ಲುಗಳನ್ನು ಬಯಸದಿದ್ದರೆ, ಸರಳವಾದ ವಿವಿಧ ವಿನ್ಯಾಸಗಳಲ್ಲಿ ಇವು ಲಭ್ಯವಿದೆ.
ಮೀನಾಕರಿ ಕಾಲ್ಗೆಜ್ಜೆಗೆ ಯಾವುದೇ ಹೋಲಿಕೆ ಇಲ್ಲ. ಇದು ಕಮಲದ ಹೂವಿನ ವಿನ್ಯಾಸದಲ್ಲಿ ಬರುತ್ತದೆ, ಇದು ಪಾದಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಗೆಜ್ಜೆ, ಚೈನ್ ಪಾಯಲ್ ಧರಿಸಿ ಬೇಸರಗೊಂಡಿದ್ದರೆ ಇದನ್ನು ಆರಿಸಿ.
ನೀವು ಹೊರಗೆ ದುಡಿಯುವ ಮಹಿಳೆಯಾಗಿದ್ದರೆ ಈ ಸಿಂಪಲ್ ಡಿಸೈನ್ ಗೆಜ್ಜೆ ಧರಿಸಬಹುದು. ಇದನ್ನು ಸೀರೆ-ಸೂಟ್ ಯಾವುದರ ಜೊತೆಗೂ ಧರಿಸಬಹುದು.