ನಟಿ ಶ್ವೇತಾ ಪ್ರಸಾದ್ ಮತ್ತು ಆರ್‍ಜೆ ಪ್ರದೀಪ್ ಅವರು ತಮ್ಮ ಜೀವನದ ಕೆಲವೊಂದು ರಹಸ್ಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಏನದು?
'ರಾಧಾ ರಮಣ' ಸೀರಿಯಲ್ ಎಂದಾಕ್ಷಣ ನೆನಪಿಗೆ ಬರುವುದು, ಮುಗ್ಧ ಮನಸ್ಸಿನ, ಸಿಂಪಲ್ ಹುಡುಗಿ ಆರಾಧನಾ. ಈ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಶ್ವೇತಾ ಪ್ರಸಾದ್. ಕಿರುತೆರೆಯಲ್ಲಿ ಗುರುತಿಸಿಕೊಂಡು, ಸಾಕಷ್ಟು ಪ್ರಚಾರದಲ್ಲಿ ಇರುವಾಗಲೇ, 'ರಾಧಾ ರಮಣ' ಸೀರಿಯಲ್ ಬಳಿಕ ಕಿರುತೆರೆಯಿಂದ ಸ್ವಲ್ಪ ದೂರವೇ ಇರುವ ನಟಿ, ಸದ್ಯ ತಮ್ಮದೇ ಆದ ಎನ್‌ಜಿಓ ಶುರು ಮಾಡಿಕೊಂಡಿದ್ದಾರೆ. ಇದರ ಜೊತೆಜೊತೆಗೇನೆ ಇತ್ತೀಚೆಗಷ್ಟೇ ತೆರೆಕಂಡಿರುವ 'ಮರ್ಯಾದೆ ಪ್ರಶ್ನೆ' ಎಂಬ ಸಿನಿಮಾದ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವ ಶ್ವೇತಾ ಪ್ರಸಾದ್, ತಮ್ಮ ಪತಿ ರೇಡಿಯೋ ಜಾಕಿ (RJ) ಪ್ರದೀಪ್ ಜೊತೆ ಕೀರ್ತಿ ನಾರಾಯಣ ಷೋನಲ್ಲಿ ಕಾಣಿಸಿಕೊಂಡು ತಮಾಷೆಯ ಮಾತುಕತೆ ನಡೆಸಿದ್ದಾರೆ.
ಇದರಲ್ಲಿ ಕೀರ್ತಿ ಅವರು, ಮದುವೆಯಾದ ಇಷ್ಟ ವರ್ಷಗಳಲ್ಲಿ ಪ್ರದೀಪ್‌ಗೋಸ್ಕರ ಶ್ವೇತಾ ಚೇಂಜ್ ಆಗಬೇಕಿತ್ತು. ಅವರು ಚೇಂಜೇ ಮಾಡಿಕೊಂಡಿಲ್ಲ ಎನ್ನುವುದು ಯಾವುದು ಇದೆ ಎಂದಾಗ ಪ್ರದೀಪ್ ಅವರು ಸಿಟ್ಟು ಎಂದರು. ಆಗ ಶ್ವೇತಾ ಅವರಿಗೆ ನಿಜಕ್ಕೂ ಸಿಟ್ಟು ಬಂತು. ನನಗೆ ಸಿಟ್ಟಿದ್ಯಾ ಎಂದು ಸಿಟ್ಟಿನಿಂದಲೇ ಕೇಳಿದರು. ಕೋಪದ ಜೊತೆ ಏನೋ ಆಗಿರುತ್ತೆ, ಅವಳು ಅದನ್ನು ಅರ್ಥ ಮಾಡಿಕೊಳ್ಳೋದು ಬೇರೆ ಎಂದರು. ಇದಕ್ಕೆ ಶ್ವೇತಾ ಸಮ್ಮತಿಸಿದರು. ಕೊನೆಗೆ ಇದೇ ಪ್ರಶ್ನೆಯನ್ನು ಶ್ವೇತಾ ಅವರ ಮುಂದಿಟ್ಟಾಗ, ಪ್ರದೀಪ್ ಸಣ್ಣಗಾಗಬೇಕು ಎಂದಿದ್ದೆ, ಅದನ್ನು ಅವರು ಪಾಲಿಸಿದ್ದಾರೆ. ಚೇಂಜ್ ಎಲ್ಲಾ ಅವರಿಗೆ ಅಂತ ಮಾಡಿಕೊಂಡಿದ್ದಾರೆ ಎನ್ನುತ್ತಲೇ ಇದೇ ವೇಳೆ ಹಾಸ್ಯದ ರೂಪದಲ್ಲಿ ಪತಿಯ ಮರ್ಯಾದೆಯನ್ನೂ ತೆಗೆದರು! ಅದೇನೆಂದರೆ, ಮಾಮೂಲಿ ಥರ ಹುಡುಗಿಯರನ್ನು ನೋಡ್ತಾನೆ, ಅದೇನು ಬಿಡಿ ಯಾರೂ ಚೇಂಜ್ ಆಗಲ್ಲ ಎಂದಾಗ ಪ್ರದೀಪ್ ಅಯ್ಯೋ ನನ್ನ ಮರ್ಯಾದೆ ತೆಗೆದ್ಯಾ ಎಂದು ನಾಚಿಕೊಂಡಿದ್ದಾರೆ!
ಅನುಷಾ ಜೊತೆಗಿನ ಸಂಬಂಧ ಎಂಥದ್ದು? ಮದುವೆ ಮುರಿದು ಬಿದ್ದದ್ದು ಯಾಕೆ? ಬಿಗ್‌ಬಾಸ್ ಧರ್ಮ ಓಪನ್ ಮಾತು ಕೇಳಿ...
ಇನ್ನು ಶ್ವೇತಾ ಮತ್ತು ಪ್ರದೀಪ್ ದಂಪತಿ ಕುರಿತು ಹೇಳುವುದಾದರೆ, ಈಗ ಶ್ವೇತಾ ಅವರು ನಿರ್ಮಾಪಕಿ ಆಗಿರುವ ಮರ್ಯಾದೆ ಪ್ರಶ್ನೆ' ಸಿನಿಮಾಕ್ಕೆ ಕಥೆ ಬರೆದಿದ್ದಾರೆ. ಮಧ್ಯಮ ವರ್ಗದ ಜನರ ಜೀವನವನ್ನು ಇದರಲ್ಲಿ ಕಟ್ಟಿಕೊಡಲಾಗಿದೆ. ಈ ಚಿತ್ರದಲ್ಲಿ ನಟರಾದ ರಾಜೇಶ್ ಅಡಿಗ, ಶೈನ್ ಶೆಟ್ಟಿ, ತೇಜು ಬೆಳವಾಡಿ, ಸುನಿಲ್ ರಾವ್ ಮುಂತಾದ ಕಲಾವಿದರ ಇದ್ದಾರೆ. ಈ ಮೂಲಕ ಶ್ವೇತಾ ಅವರು, ಕನ್ನಡ ಕಿರುತೆರೆ ಜನಪ್ರಿಯ ನಟಿ, ಸ್ವಂತ ಉದ್ದಿಮೆ ನಡೆಸುತ್ತಿರುವ ಸ್ಟ್ರಾಂಗ್ ಮಹಿಳೆ ಎನ್ನುವ ಜೊತೆಗೆ ಯಶಸ್ವಿ ನಿರ್ಮಾಪಕಿ ಎನ್ನುವ ಬಿರುದು ಕೂಡ ಪಡೆದುಕೊಂಡಿದ್ದಾರೆ.
ಇನ್ನು ಈ ಜೋಡಿಯ ಲವ್‌ಸ್ಟೋರಿ ಕುರಿತು ಹೇಳುವುದಾದರೆ, ಕಾಲೇಜ್ ದಿನಗಳಿಂದ ಶ್ವೇತಾ ಮತ್ತು ಪ್ರದೀಪ್ ಪ್ರೀತಿಸಿ ಮದುವೆ ಮಾಡಿಕೊಂಡಿದ್ದಾರೆ. ಇವರು ಮದುವೆಯಾಗಿ ಹಲವು ವರ್ಷವಾದ್ರೂ ಯಾಕೆ ಮಗು ಮಾಡಿಕೊಂಡಿಲ್ಲ ಅನ್ನುವ ಬಗ್ಗೆ ಪದೇ ಪದೇ ಪ್ರಶ್ನೆ ಕೇಳಲಾಗುತ್ತಿದೆ. ಇದರಿಂದ ರೋಸಿ ಹೋಗಿದ್ದ ಶ್ವೇತಾ ಅವರು ಒಮ್ಮೆ ಸ್ವಲ್ಪ ಗರಂ ಆಗಿಯೇ ಉತ್ತರಿಸಿದ್ದರು. ಮಗು ಮಾಡಿಕೊಳ್ಳುವುದು ಬಿಡುವುದು ಮಹಿಳೆಯರ ಆಯ್ಕೆಯಾಗಿದೆ.ಇದು ನಮ್ಮ ವೈಯಕ್ತಿಕ ವಿಚಾರ, ನಿಮಗೆ ಸಂಬಂಧಿಸಿದಲ್ಲ. ಮಗುವನ್ನು ಪಡೆದುಕೊಳ್ಳುವುದು, ಬಿಡುಗ ಆಯ್ಕೆ ಮಹಿಳೆಗೆ ಬಿಟ್ಟುಬಿಡಿ. ಯಾವಾಗ ಎಲ್ಲಿ, ಹೇಗೆ ಎನ್ನುವುದು ಅವಳಿಗೆ ಗೊತ್ತಿರುತ್ತದೆ ಎಂದಿದ್ದರು.
ನನ್ನಿಂದ್ಲೇ ನೀವ್ ಕಾಸ್ ಮಾಡ್ಕೊಂಡಿರೋದು, ಸಂಬಳನೂ ಸರಿ ಕೊಡ್ದೇ ಎಥಿಕ್ಸ್ ಇಲ್ಲ ಅಂತೀರಾ? ಹಂಸಾ ಗರಂ