ನಗುವ ನಯನ ಎನ್ನುತ್ತಾ ಕಣ್ಣಲ್ಲೇ ಮೋಡಿ ಮಾಡಿದ ಮಹಾನಟಿ ಚಂದನಾಗೆ ಸಿಕ್ತು ಭರ್ಜರಿ ಆಫರ್!

First Published | Nov 27, 2024, 3:00 PM IST

ಝೀಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಹಾನಟಿ ರಿಯಾಲಿಟಿ ಶೋನಲ್ಲಿ ಮಿಂಚಿದ ಚಂದನ ಗೌಡ ಇದೀಗ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.  
 

ಕಲರ್ಸ್ ಕನ್ನಡ (Colors Kannada) ವಿಭಿನ್ನ ಕಥೆಗಳನ್ನು ನೀಡೋದ್ರಲ್ಲಿ ಯಾವಾಗ್ಲೂ ಮುಂದಿರುತ್ತೆ. ಹೊಸ ಹೊಸ ಕಥೆಯ ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಇದೀಗ ಹಾರರ್ ಥ್ರಿಲ್ಲರ್ ಜೊತೆ ಜನರಿಗೆ ಮನರಂಜನೆ ನೀಡಲು ತಯಾರಾಗಿ ನಿಂತಿದೆ ಕಲರ್ಸ್ ಕನ್ನಡ. ಸೀರಿಯಲ್ ಹೆಸರು ನೂರು ಜನ್ಮಕೂ.
 

ಗೀತಾ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದಿದ್ದ ನಟ ಧನುಷ್ ಗೌಡ (Dhanush Gowda), ಈ ಧಾರಾವಾಹಿ ನಾಯಕನಾಗಿದ್ರೆ, ಮಿಸ್ ಮಂಗಳೂರು ಕಿರೀಟ ಮುಡಿಗೇರಿಸಿಕೊಂಡಿದ್ದ ಶಿಲ್ಪಾ ಕಾಮತ್ ನಾಯಕಿಯಾಗಿದ್ದಾರೆ. ಆದರೆ ವಿಶೇಷ ಪಾತ್ರ ಅಂದ್ರೆ, ದೆವ್ವದ ಪಾತ್ರದಲ್ಲಿ ಮಹಾನಟಿಯ ಚಂದನ ಗೌಡ ನಟಿಸುತ್ತಿದ್ದಾರೆ. 
 

Tap to resize

ಝೀ ಕನ್ನಡದಲ್ಲಿ ಪ್ರಸಾರವಾಗಿದ್ದ ಜನಪ್ರಿಯ ರಿಯಾಲಿಟಿ ಶೋ ಮಹಾನಟಿಯಲ್ಲಿ (Mahanati reality show) ಸ್ಪರ್ಧಿಯಾಗಿದ್ದ ಚಂದನಾ ಗೌಡ, ತಮ್ಮ ಅದ್ಭುತವಾದ ನಟನೆ, ನೃತ್ಯ, ಎಕ್ಸ್ ಪ್ರೆಶನ್ ಮೂಲಕ ತೀರ್ಪುಗಾರರ ಹಾಗೂ ವೀಕ್ಷಕರ ಮನಸನ್ನು ಕೂಡ ಗೆದ್ದಿದ್ದರು. ಇದೀಗ ಚಂದನಾ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 
 

ತನಗೆ ಯಾರೂ ಏನೇ ಹೇಳಿದ್ರು, ಏನೇ ನೆಗೆಟಿವ್ ಕಾಮೆಂಟ್ ಮಾಡಿದ್ರೂ ನಾನು ನಟಿ ಆಗಿಯೇ ಆಗ್ತೇನೆ ಎಂದು ಕನಸು ಕಂಡಿದ್ದ ಚಂದನಾ (Chandana Gowda), ಇದೀಗ ಕೊನೆಗೂ ತಮ್ಮ ಕನಸನ್ನು ನನಸಾಗಿಸಿದ್ದಾರೆ. ಮೊದಲ ಅವಕಾಶದಲ್ಲೇ ದೊಡ್ಡ ಆಫರ್ ಪಡೆದಿದ್ದು, ದೆವ್ವದ ಪಾತ್ರದಲ್ಲಿ ಮಿಂಚಲಿದ್ದಾರೆ. 
 

ಮಹಾನಟಿ ರಿಯಾಲಿಟಿ ಶೋ ವೇಳೆ ನಗುವ ನಯನ ಹಾಡಿಗೆ ಸುಂದರವಾಗಿ ನಟಿಸುವ ಮೂಲಕ, ಕಣ್ಣುಗಳಲ್ಲೇ ಭಾವನೆಗಳನ್ನು ತೋರ್ಪಡಿಸುವ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. ಈ ಹಾಡಿನ ವಿಡಿಯೋ ಇಂದಿಗೂ ಸೋಶಿಯಲ್ ಮೀಡೀಯಾದಲ್ಲಿ ಸದ್ದು ಮಾಡುತ್ತಿರುತ್ತೆ. 
 

ಇದೀಗ ತಮ್ಮ ಎಕ್ಸ್ ಪ್ರೆಸ್ಸಿವ್ ಕಣ್ಣುಗಳ ಜೊತೆಗೆ ಕಣ್ಣಲ್ಲಿ ರೋಷವನ್ನು ಹೊತ್ತ ದೆವ್ವವಾಗಿ ಚಂದನಾ ಗೌಡ ಎಂಟ್ರಿ ಕೊಡಲಿದ್ದಾರೆ. ಮೊದಲ ಸೀರಿಯಲ್ ಮೂಲಕವೇ ಚಂದನ ಅಬ್ಬರಿಸೋಕೆ ರೆಡಿಯಾಗುತ್ತಿದ್ದಾರೆ. ಸೀರಿಯಲ್ ಯಾವಾಗ ರಿಲೀಸ್ ಆಗಲಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. 
 

ಈಗಾಗಲೇ ಸೀರಿಯಲ್ ಪ್ರೊಮೋ ಹಾಗೂ ಮೇಕಿಂಗ್ ವಿಡೀಯೋ (making video) ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಇದೊಂದು ಲವ್ ಕಮ್ ಹಾರರ್ ಕಥೆಯಾಗಿದೆ. ತನ್ನ ಕೈ ಹಿಡಿಯುವ ಚಿರುವನ್ನು ಚಿರಂಜೀವಿಯನ್ನಾಗಿಸು ಎನ್ನುವ ಮೈತ್ರಿ. ಆದರೆ ತನ್ನ ಪ್ರೀತಿಯನ್ನು ತಾನು ಪಡೆದುಕೊಂಡೇ ತೀರುತ್ತೇನೆ ಎನ್ನುವ ದೆವ್ವದ ನಡುವೆ ನಡೆಯುವ ಕಥೆ ನೂರು ಜನ್ಮಕೂ. ಪ್ರೋಮೊ ಜನರಿಗೆ ಇಷ್ಟವಾಗಿದ್ದು, ಯಾವಾಗ ಬಿಡುಗಡೆಯಾಗುತ್ತೆ ಎಂದು ಕಾಯ್ತಿದ್ದಾರೆ. 
 

Latest Videos

click me!