Blackmail: ಕೃತ್ಯಕ್ಕೆ ಇಂಡಿ ಶಾಸಕರ ಪುತ್ರಿಯ ಸಿಮ್‌ ಬಳಕೆ, ಶಾಸಕರಿಂದ ಸ್ಪಷ್ಟನೆ

Jan 10, 2022, 3:51 PM IST

ಬೆಂಗಳೂರು (ಜ. 10): ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ (ST Somashekhar) ಪುತ್ರ ನಿಶಾಂತ್‌ ಅವರದ್ದು ಎಂದು ಹೇಳಲಾದ ಅಶ್ಲೀಲ ವಿಡಿಯೋ ಹಾಗೂ ಫೋಟೋ ಕಳುಹಿಸಿ ಭಾರೀ ಮೊತ್ತದ ಹಣಕ್ಕೆ ಬ್ಲ್ಯಾಕ್‌ಮೇಲ್‌ (Blackmail) ಮಾಡಿರುವ ಪ್ರಕರಣ ನಡೆದಿದೆ. ಈ ಸಂಬಂಧ ಖ್ಯಾತ ಜ್ಯೋತಿಷಿ (Astrology) ಚಂದ್ರಶೇಖರ ಸ್ವಾಮೀಜಿ ಅವರ ಪುತ್ರ ರಾಹುಲ್‌ ಭಟ್‌ (25) ಎಂಬಾತನನ್ನು ಬಂಧಿಸಿದ್ದಾರೆ.

Blackmail: ಸೋಮಶೇಖರ್ ಪುತ್ರನ ಬ್ಲ್ಯಾಕ್ ಮೇಲ್‌ ಕೇಸ್‌ನಲ್ಲಿ ಶಾಸಕರ ಪುತ್ರಿಯ ಹೆಸರು, ಸಿಮ್ ಕೊಟ್ಟಿದ್ದೇ ತಪ್ಪಾಯ್ತು!

ಈಗ ರಾಹುಲ್‌ ಭಟ್‌ನನ್ನು ಬಂಧಿಸಿದ ಪೊಲೀಸರು, ಆತನನ್ನು ಐದು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ಅಲ್ಲದೆ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರ ಮಗಳ ಸಿಮ್‌ಕಾರ್ಡನ್ನು ಬ್ಲ್ಯಾಕ್‌ಮೇಲ್‌ಗೆ ಬಳಸಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

'ಸದ್ಯ ನನ್ನ ಮಗಳು ಅಮೆರಿಕದಲ್ಲಿದ್ದಾಳೆ.  ಅಲ್ಲಿಗೆ ಹೋಗುವಾಗ ಸ್ನೇಹಿತ ರಾಕೇಶ್‌ ಅಣ್ಣಪ್ಪನಿಗೆ ಸಿಮ್‌ ಕೊಟ್ಟು ತೆರಳಿದ್ದಳು. ಇದೀಗ ಆ ಸಿಮ್‌ ಕಾರ್ಡ್‌ ಸಚಿವರ ಪುತ್ರನ ಬ್ಲ್ಯಾಕ್‌ ಮೇಲ್‌ಗೆ ಬಳಕೆಯಾಗಿದೆ' ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.