BDA ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವುದಿಲ್ಲ: ಎಸ್‌ ಆರ್ ವಿಶ್ವನಾಥ್

Jan 27, 2022, 1:19 PM IST

ಬೆಂಗಳೂರು (ಜ.27): ನಕಲಿ ದಾಖಲೆ ಸೃಷ್ಟಿಸಿ ದುಬಾರಿ ಮೌಲ್ಯದ ನಿವೇಶನಗಳನ್ನು ಕಬಳಿಸಿರುವ ಆರೋಪದಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧಿಕಾರಿಗಳ ವಿರುದ್ಧ ಬಿಡಿಎ ಆಯುಕ್ತ ರಾಜೇಶ್ ಗೌಡ (Rajesh Gowda) ವರದಿ ಸಿದ್ಧ ಮಾಡುತ್ತಿದ್ದಾರೆ. ಒಂದು ವಾರದಲ್ಲಿ ಅಧಿಕಾರಿಗಳ ವಿರುದ್ಧ ವರದಿ ಸಲ್ಲಿಕೆಯಾಗಲಿದ್ದು, ಎಸಿಬಿ (ACB) ದಾಳಿಗೆ ಒಳಗಾದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಸಿದ್ದತೆ ನಡೆಸಲಾಗಿದೆ. ಎಸಿಬಿಯು 49 ಕೇಸ್ ದಾಖಲಿಸಲು ಬಿಡಿಎ ಬಳಿ ಅನುಮತಿಯನ್ನು ಕೇಳಿತ್ತು. 

ಹಾಫ್‌ ಹೆಲ್ಮೆಟ್‌ ನಿಷೇಧಿಸುವಂತೆ ಸರ್ಕಾರಕ್ಕೆ ನಿಮ್ಹಾನ್ಸ್‌ ಶಿಫಾರಸು..!

ಹಾಗಾಗಿ ಬಿಡಿಎಗೆ (BDA) ವರದಿ ಸಲ್ಲಿಸಲು ನಗಾರಭಿವೃದ್ಧಿ ಇಲಾಖೆ ಸೂಚಿಸಿತ್ತು. ನಕಲಿ ದಾಖಲೆ ಸೃಷ್ಟಿಸಿ 10ಕ್ಕೂ ಹೆಚ್ಚು ಕಾರ್ನರ್ ಸೈಟ್‌ಗಳನ್ನು ರಿಜಿಸ್ಟರ್ ಮಾಡಿರುವಂತಹ ಪ್ರಕರಣದಲ್ಲಿ 20ಕ್ಕೂ ಹೆಚ್ಚು ಕೆಎಎಸ್ ಅಧಿಕಾರಿಗಳು ಸೇರಿ 70ಕ್ಕೂ ಅಧಿಕ ಅಧಿಕಾರಿಗಳಲ್ಲಿ ಇದೀಗ ಭೀತಿ ಶುರುವಾಗಿದೆ. ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ದೂರು ದಾಖಲಾಗಿ, ಪೊಲೀಸರು ತನಿಖೆ ಕೈಗೊಂಡಿದ್ದರು. ಮಾತ್ರವಲ್ಲದೇ ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವುದಿಲ್ಲ ಎಂದು ಬಿಡಿಎ ಅಧ್ಯಕ್ಷ ಎಸ್‌ ಆರ್ ವಿಶ್ವನಾಥ್ (SR Vishwanath) ಹೇಳಿದ್ದಾರೆ.