PSI ನೇಮಕಾತಿ ಅಕ್ರಮ, ಹಾಸನದಲ್ಲೂ ಸಿಐಡಿ ತನಿಖೆ, ಡೀಲ್ ಮಾಸ್ಟರ್ ಕೌನ್ಸಿಲರ್ ಅರೆಸ್ಟ್

May 10, 2022, 1:04 PM IST

ಹಾಸನ, (ಮೇ.10): PSI ನೇಮಕಾತಿ ಅಕ್ರಮ ಪ್ರಕರಣವನ್ನು ಸಿಐಡಿ ತನಿಖೆ ಚುರುಕುಗೊಳಿಸಿದ್ದು, ಮತ್ತಷ್ಟು ಕರ್ಮಕಾಂಡ ಬಯಲಾಗ್ತಿವೆ. ಈಗಾಗಲೇ ಹಲವರನ್ನು ಬಂಧಿಸಿರುವ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

PSI ನೇಮಕಾತಿ ಹಗರಣ: ಕಿಂಗ್‌ಪಿನ್‌ ಆರ್‌ಡಿ ಪಾಟೀಲ್‌ಗೆ ಸಿಐಡಿ ಮತ್ತೊಂದು ಶಾಕ್‌

ಇನ್ನು ಹಾಸನದಲ್ಲೂ ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆದಿದ್ದು, ಡೀಲ್ ಮಾಡ್ತಿದ್ದ ಕೌನ್ಸಿಲರ್ ನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಡೀಲ್ ಮಾಡಿಸಿದ ಆರೋಪದ ಮೇಲೆ ಕೌನ್ಸಿಲರ್ ಬಂಧನವಾಗಿದ್ದು ವಿಚಾರಣೆ ಮಾಡುತ್ತಿದ್ದಾರೆ.