ಅವನನ್ನ ಮುಗಿಸಲೇ ಗಣಪತಿ ಇಟ್ಟಿದ್ರಾ ? ಡ್ಯಾನ್ಸ್ ಮಾಡಬೇಡಿ ಅಂದಿದ್ದೇ ತಪ್ಪಾಯ್ತ ?

Oct 10, 2023, 3:31 PM IST

ಅದು ಗಣೇಶನ ಮೆರವಣಿಗೆ. ಇಡೀ ಏರಿಯಾದವರು ಸೇರಿ ಒಂದು ದಿನ ಮಟ್ಟಿಗೆ ಗಣೇಶನನ್ನ ಕೂರಿಸಿ ರಾತ್ರಿ ಡಿ.ಜೆ, ಕುಣಿತದೊಂದಿಗೆ ಗಣೇಶನ ವಿಸರ್ಜನೆಗೆ ತೆರಳುತ್ತಿದ್ರು. ಆದ್ರೆ ಇನ್ನೇನು ಗಣೇಶ(Ganesha) ಕೆರೆಯ ಬಳಿ ಹೋಗಬೇಕು. ಅಷ್ಟರಲ್ಲೇ ಅದೇ ಮೆರವಣಿಗೆಯಲ್ಲಿ ಒಂದು ಹೆಣ ಬಿದ್ದಿತ್ತು. ರಕ್ತದ ಕೋಡಿ ಹರಿದಿತ್ತು. ಇನ್ನೂ ಚಿಕ್ಕ ವಯಸ್ಸಿನ ಹುಡುಗ ಆ ಶ್ರೀನಿವಾಸ. ಜೀವನದಲ್ಲಿ ಆತ ನೋಡುವುದು ತುಂಬಾ ಇತ್ತು. ಅಷ್ಟರಲ್ಲೇ ಆತ ಉಸಿರು ಚೆಲ್ಲಿ ಮಲಗಿದ್ದಾನೆ. ಅದರಲ್ಲೂ ತನ್ನ ತಾಯಿಯೇ ಎದುರೇ ಆತ ಪ್ರಾಣಬಿಟ್ಟಿದ್ದು ನಿಜಕ್ಕೂ ದುರಂತ. ಆದ್ರೆ ಈ ಶ್ರಿನಿವಾಸ ಕೊಲೆಯಾಗಿದ್ದು(Murder) ಮಾತ್ರ ಒಂದು ಸಿಲ್ಲಿ ರೀಸನ್‌ಗೆ . ಗಣೇಶನ ಮೆರವಣಿಗೆ ಈತನ ಮನೆಯ ಎದುರು ಬಂದಾಗ ಅಲ್ಲಿ ಡ್ಯಾನ್ಸ್ ಮಾಡಬೇಡಿ ಅಂದಿದ್ದ ಅಷ್ಟೇ.. ತಲ್ವಾರ್ ಮಚ್ಚುಗಳು ಹೊರಬಂದಿದ್ವು. ಎಣ್ಣೆ ಏಟಲ್ಲಿದ್ದ ಹುಡುಗರು ಅವನ ಮೇಲೆ ಮಚ್ಚಿನೇಟು ಹಾಕೇ ಬಿಟ್ರು. ವಿನಯ್ ಆ್ಯಂಡ್ ಗ್ಯಾಂಗ್ ಗಣೇಶನನ್ನ ಕೂರಿಸಿದ್ದೇ ಶ್ರೀನಿವಾಸನನ್ನ ಎತ್ತೋಕೆ ಅಂತ ಶ್ರೀನಿವಾಸನ ತಾಯಿ ಹೆಳ್ತಿದ್ದಾರೆ. ಗಣೇಶನ ಮೆರವಣಿಗೆ(Ganesha procession) ಟೈಂನಲ್ಲಿ ಶ್ರೀನಿವಾಸ ಅಲಿಯಾಸ್ ಸೀನಾ ಮರ್ಡರ್ ಆದ. ವಿನಯ್ ಅ್ಯಂಡ್ ಗ್ಯಾಂಗ್ ಅವನ ತಾಯಿಯ ಎದುರಲ್ಲೇ ಅವನ ಕಥೆ ಮುಗಿಸಿತು..ಆದ್ರೆ ಈ ಕೊಲೆಯ ಹಿಂದಿನ ಕಾರಣ ತಿಳಿಯ ಹೊರಟೆ ನಮಗೆ ಗೊತ್ತಾಗಿದ್ದು ತಿಂಗಳ ಹಿಂದಿನ ಗಲಾಟೆ. ತಿಂಗಳ ಹಿಂದೆ ಇದೇ ಶ್ರೀನಿವಾಸ ತನ್ನ ಏರಿಯಾದಲ್ಲಿ ಗಣೇಶ ಕೂರಿಸಿದ್ದ.. ಆಗ ಮೆರವಣಿಗೆ ಟೈಂನಲ್ಲಿ ಶ್ರೀನಿವಾಸ ವಿನಯ್ ಮನೆ ಎದುರು ಹೋಗಿ ಡ್ಯಾನ್ಸ್ ಮಾಡಿದ್ದ. ಆಗ ರೌಡಿ ಶೀಟರ್ ಆಗಿದ್ದ ವಿನಯ್ ನನ್ನ ಮನೆ ಎದುರು ಡ್ಯಾನ್ಸ್ ಮಾಡಬೇಡ ಅಂದಿದ್ದ. ಇದೇ ವಿಚಾರಕ್ಕೆ ಆವತ್ತು ಇಬ್ಬರ ನಡುವೆ ಗಲಾಟೆಯಾಗಿತ್ತು. ಆದ್ರೆ ಯಾವಾಗ ವಿನಯ್ ಟೀಂ ಶ್ರೀನಿವಾಸನ ಮನೆ ಮುಂದೆ ಬಂದು ಕುಣಿದ್ರೋ ಸೀನಾ ಆವಾಜ್ ಹಾಕಿದ. ಇ ದೇ ಸಮಯಕ್ಕೆ ಕಾದು ಕುಳಿತಿದ್ದ ಎದುರಾಳಿಗಳು ಮಚ್ಚು, ತಲ್ವಾರ್ ಹಿಡಿದು ಬಂದೇ ಬಿಟ್ರು.

ಇದನ್ನೂ ವೀಕ್ಷಿಸಿ:  ಸುತ್ತಲೂ ಶತ್ರುಕೋಟೆ.. ಮಧ್ಯದಲ್ಲಿ ಅಲುಗಾಡದೆ ನಿಂತಿದೆ ಒಂಟಿ ಇಸ್ರೇಲ್..!