Aug 23, 2023, 11:48 AM IST
ಒಂದು ದುರ್ಘಟನೆ ಇಡೀ ಕುಟುಂಬದ ನಾಶಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಈ ಘಟನೆ ಕಾರಣವಾಗಿದೆ. ಮಗ, ಅಪ್ಪ ಅದೇ ಕೇಸ್‌ನಲ್ಲಿ ಅರೆಸ್ಟ್ ಆಗಿ ಜೈಲು ಪಾಲಾಗಿದ್ದಾರೆ. ಇತ್ತ ಗಂಡ ಮಗ ಇಬ್ಬರೂ ಇಲ್ಲದ ಕಾರಣ ಹೆಂಡತಿ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾಳೆ. ಸಣ್ಣ ವಿಚಾರಕ್ಕೆ ನಡೆದ ಗಲಾಟೆಯೊಂದು ಕೊಲೆಯಲ್ಲಿ(Murder) ಅಂತ್ಯವಾಗಿದೆ. ಈ ಪ್ರಕರಣದಲ್ಲಿ ಮಗ, ಗಂಡ ಜೈಲು ಸೇರಿದ್ರು. ಮೈಸೂರು(Mysore) ನಗರದ ವಿದ್ಯಾನಗರದಲ್ಲಿ ಈ ಘಟನೆ ನಡೆದಿದೆ. ದುಡ್ಡಿಗಾಗಿ ಪೀಡಿಸುತ್ತಿದ್ದ ಬಾಲರಾಜ್ ಎಂಬಾತ ಕೊಲೆಯಾಗಿದ್ದಾನೆ. ತಾಯಿ ಆತ್ಮಹತ್ಯೆ ಮಾಡಿಕೊಂಡ್ರೆ, ಇತ್ತ ಜೈಲಿನಲ್ಲಿದ್ದ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಸದ್ಯ ಕೋಪದ ಕೈಗೆ ಬುದ್ದಿಕೊಟ್ಟ ಮಗ ಅನಾಥವಾಗಿದ್ದಾನೆ.
ಇದನ್ನೂ ವೀಕ್ಷಿಸಿ: ಇಸ್ರೋ ವಿಜ್ಞಾನಿಯಿಂದ ಕ್ಯಾನ್ಸರ್ ರೋಗಿಗಳ ಆರೈಕೆ: ಕಿದ್ವಾಯಿ ಆಸ್ಪತ್ರೆಯಲ್ಲಿ ಚಂದ್ರಯಾನ-3 ಸೈಂಟಿಸ್ಟ್‌ಗಳು !