Love and Cheat: ಪ್ರೀತಿಸುತ್ತೇನೆಂದು ನಂಬಿಸಿ, ಮದುವೆ ದಿನ ಯುವತಿಗೆ ಕೈಕೊಟ್ಟ ಭೂಪ!

Jan 19, 2022, 11:32 AM IST

ಬೆಂಗಳೂರು (ಜ. 19): ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ (Zameer Ahmad) ಆಪ್ತನಿಂದ ಯುವತಿಯೊಬ್ಬಳಿಗೆ ಮಕಾಮೋಸವಾಗಿರುವ ಆರೋಪ ಕೇಳಿ ಬಂದಿದೆ. ಮದುವೆ ದಿನವೇ ಯುವತಿಗೆ ಕೈಕೊಟ್ಟು ಹೋಗಿದ್ದಾನೆ. ಹಳದಿ, ಮೆಹಂದಿ ದಿನ ಎಸ್ಕೇಪ್ ಆಗಿದ್ದಾನೆ. 

Bengaluru: ಸಿಎಂ ಮನೆಯಂಗಳದಲ್ಲೇ ಪೊಲೀಸರಿಂದ ಗಾಂಜಾ ದಂಧೆ, ಇಬ್ಬರು ಅರೆಸ್ಟ್

4 ವರ್ಷಗಳಿಂದ ಯುವತಿಯ ಸಂಪರ್ಕದಲ್ಲಿ ಮಿಸ್ಬಾ ಮುಖರಮ್, ಯುವತಿಯಿಂದ 50 ಲಕ್ಷ ರೂ ಪಡೆದು ಮೋಸ ಮಾಡಿದ್ದಾನೆ. ಯುವತಿಗೆ ಮೋಸ ಮಾಡಿದ್ದಾನೆಂದು ಕೋರ್ಟ್ ಕೂಡಾ ಫತ್ವಾ ಕೊಟ್ಟಿತ್ತು. ಯುವತಿ ದೂರು ಕೊಟ್ಟಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸ್ ಠಾಣೆಯಲ್ಲೂ ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಹೈಡ್ರಾಮಾ ಮಾಡಿದ್ದಾನೆ. ಬೇಲ್‌ನಿಂದ ಹೊರಬಂದ ಬಳಿಕ ಯುವತಿಗೆ ಜೀವ ಬೆದರಿಕೆ ಹಾಕಿದ್ದಾನೆ.