Jun 10, 2022, 1:55 PM IST
ಬೆಂಗಳೂರು (ಜೂ. 10): ದೊಡ್ಡಬಳ್ಳಾಪುರ (Doddaballapura) ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಶಿಕ್ಷಣ ಇಲಾಖೆ ನೌಕರ ಮುಕುಂದ್ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಲಾಗಿತ್ತು. ಮೇ 25 ರಂದು ಬೀರಸಂದ್ರದಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿಬ್ಬಂದಿ ಮುಕುಂದ್ ಕಾರು ಅಡ್ಡಗಟ್ಟಿದ್ದ ಕಿರಾತಕರು ಕಾರು ಜಖಂಗೊಳಿಸಿ ಪರಾರಿಯಾಗಿದ್ದರು. ಪ್ರಕರಣದ ತನಿಖೆ ವೇಳೆ ಶಿಡ್ಲಘಟ್ಟಮೂಲದ ಮೌಲಾ, ಕೆಜಿ ಹಳ್ಳಿ ನಿವಾಸಿ ಸೈಯದ್ ನಹೀಮ್ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ಮುಕುಂದ ಅವರ ಪತ್ನಿ ಮಮತ ತನ್ನ ಗಂಡನ ಕೊಲೆಗೆ ಸುಪಾರಿ ನೀಡಿದ್ದಳು ಎಂದು ತಿಳಿದು ಬಂದಿದೆ.
ಬಿಜೆಪಿ ಮುಖಂಡನಿಗೆ ಆಗಿದ್ದು ಹನಿಟ್ರ್ಯಾಪಾ..? ಬ್ಲಾಕ್ಮೇಲಾ..?
ಮಮತ, ತನ್ನ ಪತಿ ಮುಕುಂದ ಅವರ ಹತ್ಯೆಗೆ 40 ಲಕ್ಷ ರು. ಸುಪಾರಿ ನೀಡಿದ್ದಳು ಎನ್ನಲಾಗಿದೆ. ಬಳಿಕ ಪೊಲೀಸರು ಮಮತ ಮತ್ತು ಆಕೆಯ ಗೆಳತಿ ಟಿ.ದಾಸರಹಳ್ಳಿಯ ತಸ್ಲಿಮ್ ಎಂಬುವವರನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಅಷ್ಟಕ್ಕೂ ಪತಿಯ ಹತ್ಯೆಗೆ ಪತ್ನಿ ಸುಪಾರಿ ನೀಡಿದ್ಧೇಕೆ..? ನೋಡಿ ಸುವರ್ಣ FIR