ತಾಯಿ ಕಳೆದುಕೊಂಡ ನೋವು, 17 ನೇ ಮಹಡಿಯಿಂದ ಹಾರಿದ ಯುವತಿ!

Apr 25, 2020, 5:18 PM IST

ಬೆಂಗಳೂರು(ಏ.25): ತಾಯಿ ಸಾವಿನಿಂದ ಮನನೊಂದ ಮಗಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಅಪಾರ್ಟ್‌ಮೆಂಟ್‌ನ ಹದಿನೇಳನೇ ಮಹಡಿಯಿಂದ ಯುವತಿ ಧುಮುಕಲು ಯತ್ನಿಸಿದ್ದಾಳೆ. ಈ ವೇಳೆ ಅದೃಷ್ಟವಶಾತ್ ಈಕೆ ಸಜ್ಜೆಗೆ ಸಿಲುಕಿ ಅಪಾಯದಿಂದ ಪಾರಾಗಿದ್ದಾಳೆ. ಸದ್ಯ ಈಕೆಯನ್ನು ರಕ್ಷಿಸಲಾಗಿದೆ

ಈ ಯುವತಿ ಕಳೆದ ಮೂರು ತಿಂಗಳಿನಿಂದ ಖಿನ್ನತೆಯಿಂದ ಬಳಲುತ್ತಿದ್ದು, ಮಾನಸಿಕವಾಗಿ ಕುಗ್ಗಿದ್ದಳು. ಸದ್ಯ ಯುವತಿಯನ್ನು ರಕ್ಷಿಸಿದ ವಿಡಿಯೋ ವೈರಲ್ ಆಗಿದೆ