Santosh Naik | Updated: Mar 22, 2025, 4:35 PM IST
ಬೆಂಗಳೂರು (ಮಾ.22): ದಶಕಗಳ ಸೇಡಿನ ಕಿಚ್ಚು ಭೀಮಾತೀರವನ್ನ ಹೊತ್ತಿಉರಿಯುವಂತೆ ಮಾಡಿದೆ. ಅವನನ್ನ ಈತ ಹೊಡೆದ. ಈತನನ್ನ ಅವನು ಮುಗಿಸಿದ ಅನ್ನೋ ಸುದ್ದಿಗಳೇ ಇಲ್ಲಿಂದ ಬರೋದು. ಆದ್ರೆ ಈಗ ಇದೇ ಭೀಮಾತೀರದಲ್ಲಿ ಒಂದು ಕಾಲದಲ್ಲಿ ಭಾರಿ ಸದ್ದು ಮಾಡಿದ್ದ ಸ್ಟೆನ್‌ಗನ್ ಕಥೆ ಮುನ್ನೆಲೆಗೆ ಬಂದಿದೆ.
ವಿಜಯಪುರದಲ್ಲಿ ಕುಖ್ಯಾತ ಹಂತಕ ಭಾಗಪ್ಪ ಹರಿಜನ ಕೊಲೆ ಪ್ರಕರಣ
ಆಗ ಭೀಮಾತೀರಕ್ಕೆ ಕೇರಳ ಮೂಲಕ 2 ಸ್ಟೆನ್‌ಗನ್ ಬಂದಿತ್ತು. ಅದರಲ್ಲಿ ಒಂದು ಈಗ ಪೊಲೀಸರ ಬಳಿ ಇದೆ. ಮತ್ತೊಂದು ಮೊನ್ನೆಯಷ್ಟೇ ಚಿಲ್ಟಾರಿ ಹುಡುಗರ ಕೈಲಿ ಹತ್ಯೆಯಾದ ಬಾಗಪ್ಪನ ಬಳಿ ಇತ್ತು.
ಆದ್ರೆ ಈಗ ಬಾಗಪ್ಪ ಇಲ್ಲ. ಅವನ ಸ್ಟೆನ್‌ಗನ್ ಎಲ್ಲಿ ಅನ್ನೋ ಪ್ರಶ್ನೆ ಕಾಡ್ತಿದೆ. ಹಾಗಾದ್ರೆ ಆ ಸ್ಟೆನ್‌ಗನ್ ಏನಾಯ್ತು? ಬಾಗಪ್ಪ ಸತ್ತ ಬಳಿಕ ಸ್ಟೆನ್‌ಗನ್ ಪಾತಕಿಗಳ ಪಾಲಾದವೇ ಅನ್ನೋ ಅನುಮಾನಗಳೆದ್ದಿವೆ.