ನಾಗ್ಪುರ ಹಿಂಸಾಚಾರದ ರೂವಾರಿ ಫಹೀಮ್ ಖಾನ್ 2 ಅಂತಸ್ತಿನ ಮನೆ ಧ್ವಂಸ

ನಾಗ್ಪುರ ಹಿಂಸಾಚಾರದ ರೂವಾರಿ ಫಹೀಮ್ ಖಾನ್‌ನ ಮನೆಯನ್ನು ಅನಧಿಕೃತ ನಿರ್ಮಾಣದ ಆರೋಪದ ಮೇಲೆ ಧ್ವಂಸ ಮಾಡಲಾಗಿದೆ. ಪ್ರಕರಣದ ಇನ್ನೊಬ್ಬ ಆರೋಪಿ ಯೂಸುಫ್ ಶೇಖ್‌ನ ಮನೆಯ ಅಕ್ರಮ ಭಾಗವನ್ನೂ ತೆರವು ಮಾಡಲಾಗಿದೆ.

Nagpur violence mastermind Fahim Khans 2 storey house demolished

ನಾಗ್ಪುರ: ನಾಗ್ಪುರ ಹಿಂಸಾಚಾರದ ರೂವಾರಿ ಎನ್ನಲಾದ ಫಹೀಮ್ ಖಾನ್‌ನ 2 ಅಂತಸ್ತಿನ ಮನೆಯನ್ನು ನಾಗ್ಪುರ ಮಹಾನಗರ ಪಾಲಿಕೆ ಸೋಮವಾರ ಧ್ವಂಸ ಮಾಡಿದೆ. ಅನಧಿಕೃತ ನಿರ್ಮಾಣ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.ಪ್ರಕರಣದ ಇನ್ನೊಬ್ಬ ಆರೋಪಿ ಯೂಸುಫ್ ಶೇಖ್‌ನ ಮನೆಯ ಅಕ್ರಮವಾಗಿ ನಿರ್ಮಿಸಲಾದ ಭಾಗವನ್ನು ಸಹ ತೆಗೆದು ಹಾಕಲಾಗಿದೆ.

‘ಖಾನ್‌ನ ಮನೆ ಆತನ ತಾಯಿಯ ಹೆಸರಿನಲ್ಲಿ ನೋಂದಾಯಿಸಿದ್ದು, ನಾಗ್ಪುರ ಇಂಪ್ರೂವ್‌ಮೆಂಟ್ ಟ್ರಸ್ಟ್‌ನಿಂದ ಭೋಗ್ಯಕ್ಕೆ ಪಡೆದಿದ್ದರು. ಆದರೆ 2020ರಲ್ಲಿಯೇ ಭೋಗ್ಯದ ಅವಧಿ ಕೊನೆಗೊಂಡಿತ್ತು. ಕಟ್ಟಡಕ್ಕೆ ಯಾವುದೇ ಮಂಜೂರಾತಿ ಇರಲಿಲ್ಲ. ಸಂಪೂರ್ಣ ಅನಧಿಕೃತವಾಗಿ ನಿರ್ಮಾಣವಾಗಿತ್ತು. ಮಾ.21ರಂದು ಎನ್‌ಎಂಸಿ ಅಧಿಕಾರಿಗಳು ಮನೆ ನೆಲಸಮ ಮಾಡುವ ಬಗ್ಗೆ ನೋಟಿಸ್ ನೀಡಿದ್ದರು. ಆದರೆ ಅವರ ಕುಟುಂಬ ನೊಟೀಸ್‌ಗೆ ಉತ್ತರಿಸಿರಲಿಲ್ಲ. ಮಹಾರಾಷ್ಟ್ರ ಪ್ರಾದೇಶಿಕ ಮತ್ತು ಪಟ್ಟಣ ಯೋಜನಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos

ಭಾರೀ ಪೊಲೀಸ್ ಭದ್ರತೆಯಲ್ಲಿ 2 ಜೆಸಿಬಿಗಳ ಮೂಲಕ ಮನೆಯನ್ನು ಧ್ವಂಸಗೊಳಿಸಲಾಗಿದೆ. ಖಾನ್ ಜೈಲಿನಲ್ಲಿರುವಾಗಲೇ ಕ್ರಮ ಜರುಗಿದೆ.

ನಾಗ್ಪುರ ಗಲಭೆಯಲ್ಲಿನ ಆಸ್ತಿ ನಷ್ಟವನ್ನು ದಂಗೆಕೋರರಿಂದಲೇ ವಸೂಲಿ: ಸಿಎಂ ಫಡ್ನವಿಸ್

ಔರಂಗಜೇಬ್‌ ಆಸ್ಥಾನದಲ್ಲಿ ಎಷ್ಟು ಜನ ಹಿಂದೂಗಳಿದ್ದರು? ಈ ಸಂಖ್ಯೆ ನಿಮ್ಮನ್ನು ಆಶ್ಚರ್ಯಗೊಳಿಸುತ್ತೆ!

vuukle one pixel image
click me!