IPL 2025: ಡೆಲ್ಲಿಯನ್ನು ಗೆಲ್ಲಿಸಿದ ಅಶುತೋಷ್‌ ಶರ್ಮಾ ಸಾಹಸ!

ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಲಖನೌ ಸೂಪರ್ ಜೈಂಟ್ಸ್ ವಿರುದ್ಧ 1 ವಿಕೆಟ್‌ನಿಂದ ರೋಚಕ ಜಯ ಸಾಧಿಸಿದೆ. ಅಶುತೋಷ್ ಶರ್ಮಾ ಅವರ ಅಬ್ಬರದ ಆಟವು ಡೆಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿತು.

IPL 2025 Ashutosh Sharma shines as Delhi Capitals beat Lucknow Super Giants by 1 wicket kvn

ವಿಶಾಖಪಟ್ಟಣಂ: ಕ್ರಿಕೆಟ್‌ನಲ್ಲಿ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಇದು ಸೋಮವಾರ ಮತ್ತೆ ಸಾಬೀತಾಯಿತು. 7 ರನ್‌ಗೆ 3, ಬಳಿಕ 65 ರನ್‌ಗೆ 5 ವಿಕೆಟ್‌ ಕಳೆದುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌, ಅಶುತೋಷ್‌ ಶರ್ಮಾರ ಅಪ್ರತಿಮ ಹೋರಾಟದಿಂದಾಗಿ 1 ವಿಕೆಟ್‌ ಅತಿ ರೋಚಕ ಗೆಲುವು ಸಾಧಿಸಿದೆ. ಇನ್ನೇನು ಗೆದ್ದೇ ಬಿಟ್ಟೆವು ಎಂಬ ಹುಮ್ಮಸ್ಸಿನಲ್ಲಿದ್ದ ಲಖನೌ ಸೂಪರ್‌ ಜೈಂಟ್ಸ್‌, ಸೋಲಿನ ಆಘಾತಕ್ಕೆ ಒಳಗಾಗಿದೆ.

ಟಾಸ್‌ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ 8 ವಿಕೆಟ್‌ಗೆ 209 ರನ್‌ ಕಲೆಹಾಕಿತು. ಬಳಿಕ ಡೆಲ್ಲಿ ಆರಂಭ ಗಮನಿಸಿದರೆ, ಲಖನೌ ಸುಲಭದಲ್ಲಿ ಗೆಲ್ಲಲಿದೆ ಎಂದೇ ಹೇಳಲಾಗುತ್ತಿತ್ತು. ಆದರೆ ಟ್ರಿಸ್ಟನ್‌ ಸ್ಟಬ್ಸ್‌, ವಿಪ್ರಾಜ್‌ ನಿಗಂ ಹಾಗೂ ಅಶುತೋಷ್‌ರ ಸಾಹಸದಿಂದಾಗಿ 19.3 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು.

Latest Videos

1.4 ಓವರ್‌ಗಳಲ್ಲೇ ಜೇಕ್‌ ಫ್ರೇಸರ್‌, ಅಭಿಷೇಕ್‌ ಪೊರೆಲ್‌, ಸಮೀರ್‌ ರಿಜ್ವಿ ವಿಕೆಟ್‌ ಉರುಳಿತು. ತಂಡಕ್ಕೆ ಆಸರೆಯಾಗುವ ಭರವಸೆಯಿದ್ದ ಅಕ್ಷರ್‌ ಪಟೇಲ್‌(22), ಡು ಪ್ಲೆಸಿ(29) ತಂಡದ ಮೊತ್ತ 65 ರನ್‌ ಗಳಿಸುಷ್ಟರಲ್ಲಿ ಪೆವಿಲಿಯನ್‌ ಸೇರಿದ್ದರು. ಆದರೆ ಸ್ಟಬ್ಸ್‌ 22 ಎಸೆತಗಳಲ್ಲಿ 34 ರನ್‌ ಸಿಡಿಸಿ ಗೆಲುವಿನ ನಿರೀಕ್ಷೆ ಹುಟ್ಟಿಸಿದರು. ಕೊನೆ 7 ಓವರ್‌ಗೆ 94 ರನ್‌ ಬೇಕಿತ್ತು. ಸ್ಫೋಟಕ ಆಟವಾಡಿದ ವಿಪ್ರಾಜ್‌ ಕೇವಲ 15 ಎಸೆತಗಳಲ್ಲೇ 5 ಬೌಂಡರಿ, 2 ಸಿಕ್ಸರ್‌ನೊಂದಿಗೆ 39 ರನ್‌ ಗಳಿಸಿದರು. ವಿಪ್ರಾಜ್‌ ಔಟಾದಾಗ ತಂಡದ ಸ್ಕೋರ್‌171ಕ್ಕೆ 8. ಆದರೆ ಹೋರಾಟ ಬಿಡದ ಅಶುತೋಷ್‌ 31 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 66 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದರು. ಕೊನೆ ಓವರ್‌ನಲ್ಲಿ ಮೋಹಿತ್‌ರ ಸ್ಟಂಪೌಟ್‌ ತಪ್ಪಿಸಿಕೊಂಡ ರಿಷಭ್‌, ಲಖನೌ ಗೆಲುವಿಗೆ ಅವಕಾಶ ತಪ್ಪಿಸಿಕೊಂಡರು. 4 ಎಸೆತಕ್ಕೆ 5 ರನ್‌ ಬೇಕಿದ್ದಾಗ ಅಶುತೋಷ್‌ ಸಿಕ್ಸರ್‌ ಸಿಡಿಸಿದರು.

ಪೂರನ್‌, ಮಾರ್ಷ್‌ ಅಬ್ಬರ: ಇದಕ್ಕೂ ಮುನ್ನ ಲಖನೌ ಸ್ಫೋಟಕ ಆಟವಾಡಿತು. ಆರಂಭಿಕ ಆಟಗಾರ ಮಿಚೆಲ್‌ ಮಾರ್ಷ್‌ 36 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್‌ಗಳೊಂದಿಗೆ 72, ಪೂರನ್‌ 30 ಎಸೆತಗಳಲ್ಲಿ 6 ಬೌಂಡರಿ, 7 ಸಿಕ್ಸರ್‌ಗಳೊಂದಿಗೆ 75 ರನ್‌ ಸಿಡಿಸಿದರು. ಮೊದಲ 13 ಓವರಲ್ಲಿ 2 ವಿಕೆಟ್‌ಗೆ 161 ರನ್‌ ಗಳಿಸಿದ್ದ ತಂಡ, ಕೊನೆ 7 ಓವರ್‌ನಲ್ಲಿ 48 ರನ್‌ಗೆ 6 ವಿಕೆಟ್‌ ಕಳೆದುಕೊಂಡಿತು.

ಸ್ಕೋರ್‌: ಲಖನೌ 20 ಓವರಲ್ಲಿ 209/8 (ಪೂರನ್ 75, ಮಾರ್ಷ್‌ 72, ಸ್ಟಾರ್ಕ್‌ 3-42), ಡೆಲ್ಲಿ 19.3 ಓವರಲ್ಲಿ 211/9 (ಅಶುತೋಷ್‌ 66*, ವಿಪ್ರಾಜ್‌ 39, ಸ್ಟಬ್ಸ್‌ 34, ಶಾರ್ದೂಲ್‌ 2-19)

ಪಂದ್ಯಶ್ರೇಷ್ಠ: ಅಶುತೋಷ್‌ ಶರ್ಮಾ

05ನೇ ಬಾರಿ: ಐಪಿಎಲ್‌ನಲ್ಲಿ ತಂಡವೊಂದು 1 ವಿಕೆಟ್‌ ಗೆಲುವು ಸಾಧಿಸಿದ್ದು ಇದು 5ನೇ ಬಾರಿ.

210 ರನ್‌: 210 ರನ್‌ ಗುರಿ ಬೆನ್ನತ್ತಿ ಗೆದ್ದಿದ್ದು ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಗರಿಷ್ಠ ಚೇಸ್‌.
 

vuukle one pixel image
click me!