ಹೊಟೆಲ್‌ ರೂಂಗೆ ನುಗ್ಗಿ ಬಾಲಿವುಡ್ ನಟಿ ಮೇಲೆ ಹಲ್ಲೆ, ಕೈಕಾಲು ಕಟ್ಟಿ ಭೀಕರ ದಾಳಿ

ಹೈದರಾಬಾದ್ ಹೊಟೆಲ್‌ನಲ್ಲಿ ಅಘಾತಕಾರಿ ಘಟನೆ ನಡೆದಿದೆ. ಬಾಲಿವುಡ್ ನಟಿ ಮೇಲೆ ದಾಳಿ ನಡೆದಿದೆ. ನಟಿ ಮಲಗಿದ್ದ ವೇಳೆ ದಾಳಿ ನಡೆದಿದ್ದು, ನಟಿಯ ಕೈ ಕಾಲು ಕಟ್ಟಿ ಹಲ್ಲೆ ನಡೆಸಿದ್ದಾರೆ. ಬಳಿಕ ಹಣ ಒಡೆವೆ ಸೇರಿದಂತೆ ಹಲವು ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

Bollywood actress assaulted tied her hands feet and robbed at Hyderabad hotel

ಹೈದರಾಬಾದ್(ಮಾ.25) ಖ್ಯಾತ ಬಾಲಿವುಡ್ ನಟಿ ಮೇಲೆ ಭೀಕರ ದಾಳಿ ನಡೆದಿದೆ. ಹೈದರಾಬಾದ್ ಹೊಟೆಲ್ ರೂಂನಲ್ಲಿ ನಟಿ ಮಲಗಿದ್ದ ವೇಳೆ ಏಕಾಏಕಿ ಈ ದಾಳಿ ನಡೆದಿದೆ. ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಮಹಿಳೆ ಹೊಟೆಲ್ ರೂಂಗೆ ನುಗ್ಗಿದ್ದಾರೆ. ಬಳಿಕ ನಟಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ನಟಿ ಕೈ ಕಾಲು ಕಟ್ಟಿ ಅಮಾನುಷ ಕೃತ್ಯಕ್ಕೆ ಮುಂದಾಗಿದ್ದಾರೆ. ನಟಿ ಕಿರುಚಾಡುತ್ತಿದ್ದಂತೆ ದಾಳಿಕೋರರು ನಟಿಯ ನಗದು, ಟ್ರೋಲಿ ಬ್ಯಾಗ್, ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಡೆದಿದೆ.

ಖ್ಯಾತ ಬಾಲಿವುಡ್ ನಟಿಯನ್ನು ಹೈದರಾಬಾದ್‌ನ ಶೂ ರೂಂ ಮಳಿಗೆ ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ನಟಿಗೆ ಉಳಿದುಕೊಳ್ಳಲು ಹೈದರಾಬಾದ್‌ನ ಪ್ರತಿಷ್ಠಿತ ಬಂಜಾರ ಹಿಲ್ಸ್ ಬಳಿ ಇರುವ ಮಸಾಬ್ ಟ್ಯಾಂಕ್‌ನ ಖಾಸಗಿ ಹೊಟೆಲ್‌ನಲ್ಲಿ ರೂಂ ಬುಕ್ ಮಾಡಲಾಗಿತ್ತು. ಆಹ್ವಾನದ ಮೇರೆಗೆ ನಟಿ ಶೋ ರೂಂ ಉದ್ಘಾಟನೆಗೆ ಆಗಮಿಸಿದ್ದಾರೆ. ಬಳಿಕ ಮೊದಲೇ ಬುಕ್ ಮಾಡಿದ್ದ ಹೊಟೆಲ್ ರೂಂನಲ್ಲಿ ಉಳಿದುಕೊಂಡಿದ್ದಾರೆ.  

Latest Videos

ಜೆಮಿನಿ ಗಣೇಶನ್ ಮಗಳು ರೇಖಾಗೆ ಬಲವಂತವಾಗಿ 5 ನಿಮಿಷ ಮುತ್ತಿಟ್ಟ ಸೂಪರ್ ಸ್ಟಾರ್: ಚಪ್ಪಾಳೆ ತಟ್ಟಿ ಶಿಳ್ಳೆ ಹೊಡೆದಿದ್ಯಾಕೆ?

ನಟಿ ಮಲಗಿದ್ದ ಮೇಳೆ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಹೊಟೆಲ್ ಒಳಗೆ ಪ್ರವೇಶಿಸಿದ್ದಾರೆ. ಬಳಿ ನಟಿ ಇರುವ ರೂಂಗೆ ನುಗ್ಗಿದ್ದಾರೆ. ಮಲಗಿದ್ದ ನಟಿ ಮೇಲೆ ಪುರುಷರು ಹಾಗೂ ಮಹಿಳೆಯರು ಸೇರಿ ಹಲ್ಲೆ ನಡೆಸಿದ್ದಾರೆ. ಕೈ ಕಾಲು ಕಟ್ಟಿ ಹಾಕಿ ಲೈಂಗಿಕವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ಇತ್ತ ನಟಿ ಭಾರಿ ವಿರೋಧ ವ್ಯಕ್ತಪಡಿಸಿದರು ಅಸಾಹಾಯಕಾರಿದ್ದಾರೆ. ಹೀಗಾಗಿ ಕಿರುಚಾಡಿದ್ದಾರೆ. ನಟಿ ಕಿರುಚಾಡುತ್ತಿದ್ದಂತೆ ನಾಲ್ವರು ನಟಿಯ ಟ್ರೋಲಿ ಬ್ಯಾಗ್, ಚಿನ್ನಾಭರಣ, 50,000 ರೂಪಾಯಿ ನಗದು ಸೇರಿದಂತೆ ಎಲ್ಲಾ ವಸ್ತುಗಳನ್ನು ದೋಚಿದ್ದಾರೆ. 

ಬೆಳಗ್ಗೆ 11 ಗಂಟೆಗೆ ಈ ಘಟನೆ ನಡೆದಿದೆ. ನಟಿ ಕಿರುಚಾಟದಿಂದ ಹೊಟೆಲ್ ಇತರ ಸಿಬ್ಬಂದಿಗಳು ಓಡೋಡಿ ಬಂದಿದ್ದಾರೆ. ಅಷ್ಟರಲ್ಲೇ ದಾಳಿಕೋರರು ಪರಾರಿಯಾಗಿದ್ದಾರೆ. ನಟಿಯ ರಕ್ಷಣೆ ಧಾವಿಸಿದ ಸಿಬ್ಬಂದಿಗಳು ಕೈ ಹಾಗೂ ಕಾಲಿಗೆ ಕಟ್ಟಿದ್ದ ಹಬ್ಬ ಬಿಚ್ಚಿದ್ದಾರೆ. ನಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೊಟೆಲ್‌ಗೆ ಆಗಮಿಸಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಹೊಟೆಲ್ ಸುತ್ತ ಮುತ್ತ ಪ್ರದೇಶಗಳ ಸಿಸಿಟಿವಿ ಫೂಟೇಜ್ ಕೂಡ ಪರಿಶೀಲನೆ ನಡೆಸಲಾಗಿದೆ. 

ನಟಿಯ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ. ಈ ಪ್ರಕರಣ ಕುರಿತು ಪೊಲೀಸರು ತನಿಖ ಚುರುಕುಗೊಳಿಸಿದ್ದು, ಹೊಟೆಲ್ ಮ್ಯಾನೇಜರ್ ಸೇರಿದಂತೆ ಕೆಲ ಸಿಬ್ಬಂದಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹೊಟೆಲ್ ಮಾಲೀಕರ ವಿಚಾರಣೆಗೆ ಪೊಲೀಸರು ಮುಂದಾಗಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಪ್ರಕರಣ, 4 ವರ್ಷ ತನಿಖೆ ಬಳಿಕ ಸಾವಿನ ಕಾರಣ ಬಿಚ್ಚಿಟ್ಟ ಸಿಬಿಐ ವರದಿ
 

vuukle one pixel image
click me!