ಈ ಸ್ಟಾರ್‌ ನಟನಿಗೆ ಸಿಗುವಷ್ಟೇ ಸಂಭಾವನೆ ನನಗೂ ಬೇಕು; ಕರೀನಾ ಕಪೂರ್‌ಗೆ ದುರಾಸೆ ಎಂದ ನೆಟ್ಟಿಗರು

ಸಂಭಾವನೆ ವಿಚಾರದಲ್ಲಿ ಬಾಲಿವುಡ್ ನಟಿಯರಿಗೂ ಬೇಸರವಿದೆ. ಕೋಟಿಗಟ್ಟಲೆ ಆಸ್ತಿ ಇರುವ ಕರೀನಾ ಕಪೂರ್‌ಗೂ ಬೇಸರ ಇರೋದು ಯಾಕೆ?

Kareena Kapoor demands remuneration equal to akshay kumar netizens shocked vcs

ಹಿಂದಿ ಚಿತ್ರರಂಗ ಬೇಬೋ, ಪಟೌಡಿ ಕುಟುಂಬದ ಸೊಸೆ ಕರೀನಾ ಕಪೂರ್ ಏನಿಲ್ಲ ಅಂದ್ರೂ ಒಂದು ಚಿತ್ರಕ್ಕೆ 1-2 ಕೋಟಿ ಕನಿಷ್ಠ ಸಂಭಾವನೆ ಪಡೆಯುತ್ತಾರೆ. 
 

Kareena Kapoor demands remuneration equal to akshay kumar netizens shocked vcs

ನಿಜ ಹೇಳಬೇಕು ಅಂದ್ರೆ ಭಾರತೀಯ ಚಿತ್ರರಂಗದಲ್ಲಿ ಹಿಂದಿ ನಟಿಯರಿಗೆ ಹೆಚ್ಚಿನ ಸಂಭಾವನೆ ಸಿಗುವುದು.ಈಗ ಅವರಿಗೆ ಬೇಸರವಿದೆ. ಯಾಕೆ ಅಕ್ಷಯ್ ಕುಮಾರ್ ಪಡೆಯುವಷ್ಟು ಸಂಭಾವನೆ ಬೇಕು ಅಂತಿದ್ದಾರೆ ಕರೀನಾ?
 


ಕೆಲವು ತಿಂಗಳ ಹಿಂದೆ ಟಿವಿ ಕಾರ್ಯಕ್ರಮದಲ್ಲಿ ಕರೀನಾ ಕಪೂರ್ ಮತ್ತು ಅಕ್ಷಯ್ ಕುಮಾರ್ ಭಾಗಿಯಾಗಿದ್ದರು. ಈ ವೇಳೆ ಸಂಭಾವನೆ ವಿಚಾರ ಬಂದಿದೆ. ನನಗೆ ಅಕ್ಷಯ್ ಕುಮಾರ್ ಪಡೆಯುವಷ್ಟು ಸಂಭಾವನೆ ಬೇಕು ಎಂದು ಕರೀನಾ ಡಿಮ್ಯಾಂಡ್ ಮಾಡಿದ್ದಾರೆ.
 

ಹಾಗಿದ್ರೆ ಕರಣ್‌ ಜೋಹಾರ್ ಜೊತೆ ಸೇರಿಕೊಂಡು ನಾನು ಸಿನಿಮಾ ಮಾಡುತ್ತೀನಿ. ನೀವು ನಾಯಕಿ ಆಗಬೇಕು, ನನ್ನಷ್ಟು ಸಂಭಾವನೆ ಕೊಡುತ್ತೀನಿ ಆದರೆ ನಾನು ಮಾತ್ರ ಸಿನಿಮಾ ಗಳಿಸುವ ಹಣದಲ್ಲಿ 50% ತೆಗೆದುಕೊಳ್ಳುತ್ತೀನಿ ಎಂದು ಅಕ್ಷಯ್ ಹೇಳುತ್ತಾರೆ.
 

ಇದನ್ನು ಕೇಳಿ ಶಾಕ್ ಆದ ಕರೀನಾ ಕಪೂರ್ ಬೇಡ ಬೇಡ ಇದಕ್ಕೆ ನಾನು ಒಪ್ಪುವುದಿಲ್ಲ ಎನ್ನುತ್ತಾರೆ. ನನ್ನ ಸಿನಿಮಾದಲ್ಲಿ ನಾನೇ ಹೀರೋ ಆಗಿ ಯಾಕೆ ಸಂಭಾವನೆ ಪಡೆಯಲಿ ಎಂದು ಅಕ್ಷಯ್ ಕಾಲೆಳೆಯುತ್ತಾರೆ. 

ನನಗೆ ಹಕ್ಕಿದೆ ಏಕೆಂದರೆ ನಾನು ಆರ್ಟಿಸ್ಟ್ ಅಲ್ಲ ನಾಯಕಿ ಹೀರೋಯಿನ್ ಎಂದು ಕರೀನಾ ಹೇಳುತ್ತಾರೆ. ಒಂದು ಪಕ್ಷ ಕರೀನಾ ಒಪ್ಪಿದರೂ ಆಕೆಯ ಮ್ಯಾನೇರ್ ಒಪ್ಪಿಕೊಳ್ಳುವುದಿಲ್ಲ ಅಂತಾರೆ ಅಕ್ಷಯ್. 
 

ಅಕ್ಷಯ್‌ ಕುಮಾರ್‌ಗಾಗಿ 50 ಕೋಟಿ ಬಜೆಟ್ ಸಿನಿಮಾ ಮಾಡಿದ್ರೆ ರಿಲೀಸ್ ಆದ್ಮೇಲೆ 250 ಕೋಟಿ ಕಳಿಸುತ್ತದೆ. ಹೀಗಾಗಿ ಸಂಭಾವನೆಗಿಂತ 50% ಶೇರ್ ಜಾಸ್ತಿ ಎಂದು ಕರೀನಾ ಈ ಕಾಂಟ್ರ್ಯಾಕ್ಟ್‌ ಒಪ್ಪಿಕೊಳ್ಳುವುದಿಲ್ಲ. 

Latest Videos

vuukle one pixel image
click me!