ಡ್ರಗ್ಸ್‌ ಡೀಲ್‌ನಲ್ಲಿ ಭಾಗಿಯಾದವರು ಯಾರೇ ಆಗಿರಲಿ, ಶಿಕ್ಷೆ ಆಗಲೇಬೇಕು: ಜೆಕೆ

Aug 31, 2020, 5:43 PM IST

ಬೆಂಗಳೂರು (ಆ. 31): ಡ್ರಗ್ಸ್ ವಿಚಾರ ಬಹಳ ಚರ್ಚೆಯಾಗುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಇರೋದು ನಿಜ. ಯಾರ್ಯಾರು ಸೇವಿಸುತ್ತಿದ್ದಾರೆ ಎಂದು ಹೊರಬರಬೇಕಷ್ಟೇ ಎಂಬ ಮಾತು ಕೇಳಿ ಬರುತ್ತಿದೆ. ಈಗಾಗಲೇ ಸಿಸಿಬಿ ವಿಚಾರಣೆ ಮುಗಿಸಿರುವ ಇಂದ್ರಜಿತ್ ಲಂಕೇಶ್ 20 ಕ್ಕೂ ಹೆಚ್ಚು ನಟ ನಟಿಯರ ಹೆಸರನ್ನು ಹೇಳಿದ್ದಾರೆ. 

ಡ್ರಗ್ಸ್‌ ವಿಚಾರಕ್ಕೆ ಸಂಬಂಧಿಸಿದಂತೆ, ನಟ ಜೆಕೆ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದಾರೆ. 'ತಪ್ಪು ಯಾರೇ ಮಾಡಿರಲಿ, ಅವರಿಗೆ ಶಿಕ್ಷೆಯಾಗಬೇಕು. ಇದನ್ನು ಯಾರೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಬೇರೆಯವರು ಆ ತಪ್ಪು ಮಾಡಬಾರದು, ಆ ರೀತಿ ಶಿಕ್ಷೆ ಕೊಡಬೇಕು' ಎಂದಿದ್ದಾರೆ. 

ಗಾಂಜಾ ಘಾಟಿನ ಬಗ್ಗೆ ಕಾನೂನು ತಜ್ಞರು ಏನಂತಾರೆ?