ಮೂಡ್ ಸರಿ ಇಲ್ವಾ? ಸುಸ್ತಾ, ನಿದ್ರೆ ಬರ್ತಿಲ್ವಾ? ವೈದ್ಯರನ್ನು ಕಾಣೋ ಮುನ್ನ ಈ ಹಣ್ಣು-ಹಂಪಲು ತಿಂದು ನೋಡಿ!

First Published May 8, 2024, 5:06 PM IST

ನಿದ್ರೆ ಬಾರದೇ ಇರೋದಕ್ಕೆ ಹಲವಾರು ಕಾರಣಗಳಿವೆ.  ಅದಕ್ಕೆ ಪರಿಹಾರವೂ ಸುಲಭ. ನಿಮ್ಮ ಸುತ್ತಮುತ್ತ ಇರೋ ಆಹಾರಗಳನ್ನು ಸೇವಿಸೋ ಮೂಲಕವೇ ನೀವು ಸಮಸ್ಯೆಯಿಂದ ಪರಿಹಾರ ಪಡೆಯಬಹುದು. 
 

 ಈ ಬ್ಯುಸಿ ಜೀವನಶೈಲಿಯಲ್ಲಿ (lifestyle) ಒಬ್ಬೊಬ್ಬರಿಗೂ ಒಂದೊಂದು ಸಮಸ್ಯೆ. ಎಲ್ಲದಕ್ಕೂ ವೈದ್ಯರ ಬಳಿ ಹೋಗೋ ಅಗತ್ಯ ಇಲ್ಲ. ಸಣ್ಣ ಪುಟ್ಟ ಸಮಸ್ಯೆಗಳನ್ನು ನೀವು ಕೆಲವೊಂದು ಆಹಾರಗಳ ಸೇವನೆ ಮೂಲಕ ಕಡಿಮೆ ಮಾಡಬಹುದು. ಹಾಗಿದ್ರೆ ಯಾವ ಸಮಸ್ಯೆ ಇದ್ರೆ, ಯಾವ ಆಹಾರ ಸೇವಿಸಬೇಕು ಅನ್ನೋದನ್ನು ನೋಡೋಣ. 

ನಿಮಗೆ ರಾತ್ರಿ ಹೊತ್ತು ಸರಿಯಾಗಿ ನಿದ್ರೆ (less sleep) ಬರ್ತಿಲ್ವಾ? ಹಾಗಿದ್ರೆ ನಿಮಗೆ ಮೆಗ್ನೇಶಿಯಂ ಅಗತ್ಯ ಇದೆ ಎಂದು ಅರ್ಥ. ನಿಮ್ಮ ದೇಹಕ್ಕೆ ಮೆಗ್ನೇಶಿಯಂ ಬೇಕು ಅಂತಾದ್ರೆ ಅವಕಾಡೋಗಳನ್ನು (avacado) ಸೇವಿಸಬೇಕು. 

ಬೆಳಗ್ಗೆ ಎದ್ದ ತಕ್ಷಣ ನಿಮಗೆ ತುಂಬಾನೆ ಆಯಾಸವಾದಂತೆ ಫೀಲ್ ಆದ್ರೆ, ನಿಮಗೆ ಪೊಟಾಶಿಯಂ (Potassium) ಸೇವನೆ ಮಾಡೋ ಅಗತ್ಯ ಇದೆ ಎಂದು ಅರ್ಥ. ಅದಕ್ಕಾಗಿ ನೀವು ಎಳನೀರು ಕುಡಿಯಬೇಕು. 

ನಿಮಗೆ ಶಕ್ತಿಯೇ ಇಲ್ಲ ಎಂದು ಅನಿಸಿದರೆ, ನಿತ್ರಾಣ ಆಗುತ್ತಿದ್ದರೆ, ನಿಮ್ಮ ದೇಹಕ್ಕೆ ಐರನ್ ತುಂಬಾ ಅಗತ್ಯವಿದೆ. ಅದಕ್ಕಾಗಿ ಒಂದಿಷ್ಟು ಒಣದ್ರಾಕ್ಷಿಯನ್ನು (raisins) ಸೇವಿಸೋದಕ್ಕೆ ಆರಂಭಿಸಿ. ಇದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. 

ನಿಮಗೆ ವಿಪರೀತ ತಲೆನೋವು ಇದೆ ಎಂದು ಅನಿಸಿದರೆ, ಸುಮ್ಮನಿರಬೇಡಿ. ನಿಮಗೆ ಸೋಡಿಯಂ ನ ಅಗತ್ಯವಿದೆ. ಅದಕ್ಕಾಗಿ ಸೌತೆಕಾಯಿ ಜ್ಯೂಸ್ (cucumber juice) ಸೇವಿಸೋದನ್ನು ಮರೆಯಬೇಡಿ. 

ನಿಮಗೆ ಕಾರಣ ಇಲ್ಲದೇ ತುಂಬಾನೆ ಬೇಜಾರು ಆಗ್ತಿದೆ ಅಂದ್ರೆ, ನಿಮ್ಮ ದೇಹಕ್ಕೆ ವಿಟಮಿನ್ ಡಿ (Vitamin D) ತುಂಬಾನೆ ಅಗತ್ಯೆ ಇದೆ ಎಂದು ಅರ್ಥ. ಅದಕ್ಕಾಗಿ ನಿಮಗೆ ಸೂರ್ಯನ ಬೆಳಕು ಅಗತ್ಯ.  ಸ್ವಲ್ಪ ಹೊತ್ತು ಸೂರ್ಯನ ಬೆಳಕನ್ನು ಪಡೆಯೋದು ಮುಖ್ಯ. 
 

ನಿಮಗೆ ತುಂಬಾನೆ ವೀಕ್ ಫೀಲ್ ಆಗ್ತ ಇದೆ ಅಂದ್ರೆ, ನಿಮ್ಮ ದೇಹಕ್ಕೆ ಝಿಂಕ್ (Zinc) ಅಥವಾ ಸತು ತುಂಬಾನೆ ಅಗತ್ಯ. ಅದಕ್ಕಾಗಿ ಮಾವಿನಹಣ್ಣನ್ನು ಸೇವಿಸೋದನ್ನು ರೂಢಿ ಮಾಡಿಕೊಳ್ಳಬೇಕು. ಇದರಿಂದ ನಿಮ್ಮ ದೇಹಕ್ಕೆ ಶಕ್ತಿ ತುಂಬುತ್ತದೆ. 

click me!