ಬೆಳಗಾವಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಯುವತಿಯೊಬ್ಬಳನ್ನು ಪ್ರೀತಿಸುವಂತೆ ಬೆನ್ನು ಬಿದ್ದ ಯುವಕ ಮತ್ತು ಆತನ ಸಹೋದರನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಬೆಳಗಾವಿ (ಮೇ.8): ಜಿಲ್ಲೆಯ ಸವದತ್ತಿ ತಾಲೂಕಿನ ಕಾರಿಮನಿ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಯುವತಿಯೊಬ್ಬಳನ್ನು ಪ್ರೀತಿಸುವಂತೆ ಬೆನ್ನು ಬಿದ್ದ ಯುವಕ ಮತ್ತು ಆತನ ಸಹೋದರನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಯುವತಿ ತಂದೆ ಚಾಕುವಿನಿಂದ ಇರಿದು ಇಬ್ಬರನ್ನೂ ಹತ್ಯೆಗೈದಿದ್ದಾನೆ.
ಸವದತ್ತಿ ತಾಲೂಕಿನ ದುಂಡನಕೊಪ್ಪ ಗ್ರಾಮದ ಫಕೀರಪ್ಪ ಭಾಂವಿಹಾಳ (50) ಎಂಬಾತ ಈ ಭೀಕರ ಕೃತ್ಯ ಎಸಗಿದ್ದು, ಮೃತ ದುರ್ದೈವಿ ಸಹೋದರರು ಕಾರಿಮನಿ ಗ್ರಾಮದ ಯಲ್ಲಪ್ಪ ಹಳೇಗೋಡಿ (22) ಮಾಯಪ್ಪ ಹಳೇಗೋಡಿ (22) ಎಂದು ಗುರುತಿಸಲಾಗಿದೆ.
ಪತ್ನಿ ಮಾಡಿದ ತಪ್ಪಿಗೆ ಸಂಧಾನಕ್ಕೆಂದು ಕರೆದು ಉದ್ಯಮಿಯಿಂದ ಕಪಾಳ ಮೋಕ್ಷ, ನೋವು ತಾಳಲಾರದೆ ಕ್ಯಾಬ್ ಡ್ರೈವರ್ ಬಲಿ!
ಮೃತ ಯಲ್ಲಪ್ಪ ಹಳೇಗೋಡಿ ಆರೋಪಿ ಫಕೀರಪ್ಪನ ಪುತ್ರಿಯನ್ನು ಪ್ರೀತಿಸುವಂತೆ ಬೆನ್ನುಬಿದ್ದಿದ್ದ. ಇದನ್ನು ತಿಳಿದ ಯುವತಿಯ ತಂದೆ ಕೋಪಗೊಂಡು ಪುತ್ರಿಯ ತಂಟೆಗೆ ಬರಬೇಡ ಎಂದು ಯುವಕನಿಗೆ ವಾರ್ನ್ ಮಾಡಲು ಕಾರಿಮನಿಗೆ ಹೋಗಿದ್ದ. ಈ ವೇಳೆ ಫಕೀರಪ್ಪ ಹಾಗೂ ಯಲ್ಲಪ್ಪ ಹಳೇಗೋಡಿ ಮಧ್ಯೆ ವಾಗ್ವಾದವಾಗಿದೆ.
ಜಗಳ ವಿಕೋಪಕ್ಕೆ ತಿರುಗಿದಾಗ ಫಕೀರಪ್ಪ ಚಾಕುವಿನಿಂದ ಯಲ್ಲಪ್ಪನಿಗೆ ಇರಿದಿದ್ದಾನೆ. ಈ ವೇಳೆ ಯಲ್ಲಪ್ಪನನ್ನು ಬಿಡಿಸಿಕೊಳ್ಳಲು ಬಂದ ಸಹೋದರ ಮಾಯಪ್ಪನಿಗೂ ಚಾಕುವಿನಿಂದ ಫಕೀರಪ್ಪ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಯಲ್ಲಪ್ಪ ಸ್ಥಳದಲ್ಲೇ ಸಾವು ಕಂಡಿದ್ದಾನೆ. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮಾಯಪ್ಪ ಕೂಡ ಸಾವು ಕಂಡಿದ್ದಾನೆ.
ಹಾಸನ: ಅನುಮಾನಸ್ಪದ ಸಾವು, ಅಂತ್ಯಸಂಸ್ಕಾರ ಮಾಡಿದ ಶವ 6 ತಿಂಗಳ ಬಳಿಕ ಹೊರತೆಗೆದು ಪರೀಕ್ಷೆ!
ಈ ಘಟನೆ ಬಳಿಕ ಫಕೀರಪ್ಪ ಭಾಂವಿಹಾಳ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಸ್ಥಳಕ್ಕೆ ರಾಮದುರ್ಗ ಡಿವೈಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುರಗೋಡ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.