ಕಿವೀಸ್ ಸರಣಿಗೂ ಮುನ್ನ ಟೀಂ ಇಂಡಿಯಾ ಕಲಿಯಬೇಕಿರೋ ಪಾಠವೇನು..?

Jan 21, 2020, 5:42 PM IST

ಬೆಂಗಳೂರು(ಜ.21): ಟೀಂ ಇಂಡಿಯಾ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆಲ್ಲುವ ಮೂಲಕ ಆತ್ಮವಿಶ್ವಾಸದಿಂದಲೇ ಕಿವೀಸ್ ಪ್ರವಾಸ ಕೈಗೊಂಡಿದೆ. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 2-1 ಅಂತರದಲ್ಲಿ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿತ್ತು.

ಬಲಿಷ್ಠ ತಂಡದ ವಿರುದ್ಧವೇ ಜಯಭೇರಿ ಬಾರಿಸಿದ್ದೇವೆ. ಇನ್ನೇನು ಬದಲಿಸಿಕೊಳ್ಳುವ ಅಗತ್ಯವಿಲ್ಲ ಎಂದುಕೊಂಡರೆ ಕಿವೀಸ್ ನೆಲದಲ್ಲಿ ವಿರಾಟ್ ಪಡೆ ಮುಗ್ಗರಿಸುವುದು ಗ್ಯಾರಂಟಿ. ಹೀಗಾಗಿ ಟೀಂ ಇಂಡಿಯಾ ಕೆಲವು ನಿಯಮಗಳನ್ನು ಫಾಲೋ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಹೌದು, ಕಿವೀಸ್ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾ ಪ್ರಮುಖವಾಗಿ ನಾಲ್ಕು ಪಾಠಗಳನ್ನು ಕಲಿಯಲೇಬೇಕಿದೆ. ಏನವು ಪಾಠಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..