ಕಿವೀಸ್ ನೆಲದಲ್ಲಿ ಟೀಂ ಇಂಡಿಯಾವೇ ಸೂಪರ್..!

Feb 3, 2020, 1:41 PM IST

ಮೌಂಟ್‌ ಮಾಂಗನ್ಯುಯಿ(ಫೆ.02): ಟೀಂ ಇಂಡಿಯಾ 2020ರ ವಿದೇಶಿ ಪ್ರವಾಸವನ್ನು ಅಮೋಘವಾಗಿಯೇ ಪ್ರಾರಂಭಿಸಿದೆ. ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ಚುಟುಕು ಕ್ರಿಕೆಟ್‌ನಲ್ಲಿ ದಿಟ್ಟ ಹೆಜ್ಜೆಯಿಟ್ಟಿದೆ.

ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸುತ್ತಿರುವ ವಿರಾಟ್ ಪಡೆ, ಭರ್ಜರಿ ಪ್ರದರ್ಶನ ತೋರುವ ಮೂಲಕ ಕಿವೀಸ್‌ ನೆಲದಲ್ಲಿ ತ್ರಿವರ್ಣ ಧ್ವಜ ರಾರಾಜಿಸುವಂತೆ ಮಾಡಿದೆ. ಇದರ ಜತೆಗೆ ಕಿವೀಸ್ ನೆಲದಲ್ಲಿ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಮೊದಲ ತಂಡ ಎನ್ನುವ ಗೌರವಕ್ಕೆ ಟೀಂ ಇಂಡಿಯಾ ಪಾತ್ರವಾಗಿದೆ.

ಮೌಂಟ್‌ ಮಾಂಗನ್ಯುಯಿಯಲ್ಲಿ ನಡೆದ 5ನೇ ಪಂದ್ಯವನ್ನೂ 7 ರನ್‌ಗಳಿಂದ ರೋಚಕವಾಗಿ ಜಯಿಸುವ ಮೂಲಕ 5-0 ಅಂತರದಲ್ಲಿ ಚುಟುಕು ಸರಣಿ ವೈಟ್‌ವಾಷ್ ಮಾಡುವಲ್ಲಿ ಬ್ಲೂ ಬಾಯ್ಸ್ ಯಶಸ್ವಿಯಾಗಿದ್ದಾರೆ. ಕೊನೆಯ ಹೇಗಿತ್ತು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ...