ವಿಜಯ್-ಅಜಿತ್ ನಡುವೆ ಗಲ್ಲಾಪೆಟ್ಟಿಗೆ ಕಾದಾಟ: ಕಾಲಿವುಡ್ ಬಾಕ್ಸಾಫೀಸ್ ಸುಲ್ತಾನ ಯಾರು?

Jan 16, 2023, 5:05 PM IST

ಕಾಲಿವುಡ್'ನಲ್ಲಿ ತಲಾ ಅಜಿತ್ ಹಾಗೂ ದಳಪತಿ ವಿಜಯ್ ಸಿನಿಮಾಗಳು 8 ಭಾರೀ ಬೆಳ್ಳಿತೆರೆ ಮೇಲೆ ಮುಖಾಮುಖಿ ಆಗಿವೆ. ಆದ್ರೆ ಈ ಬಾರಿ ತುನಿವು ಹಾಗೂ ವಾರಿಸು ಸಿನಿಮಾಗಳ ಮಧ್ಯೆ ಬಾಕ್ಸಾಫೀಸ್'ನಲ್ಲಿ ಏರ್ಪಟ್ಟ ಪೈಪೋಟಿ ಹಿಂದಿನ ಯಾವ ಸಿನಿಮಾಗಳ ಮಧ್ಯೆ ಆಗೇ ಇಲ್ಲ. ಆ ಮಟ್ಟಕ್ಕೆ ತುನಿವು-ವಾರಿಸು ಟಫ್ ಫೈಟ್ ಕೊಡುತ್ತಿವೆ. ಈ ಎರಡೂ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಸಮಬಲ ಪ್ರದರ್ಶಿಸುತ್ತಿವೆ. ಅಜಿತ್ ನಟನೆಯ ‘ತುನಿವು’ ಹಾಗೂ ದಳಪತಿ ವಿಜಯ್ ಅಭಿನಯದ ‘ವಾರಿಸು’ ಸಿನಿಮಾಗಳು ಜನವರಿ 11ರಂದು ರಿಲೀಸ್ ಆಗಿದ್ವು. ಮೊದಲ ದಿನ ‘ತುನಿವು’ 26 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ‘ವಾರಿಸು’ 26.5 ಕೋಟಿ ಬಾಚಿಕೊಂಡಿತ್ತು. ಎರಡು ಸಿನಿಮಾಗಳು ಬಿಡುಗಡೆಯಾಗಿ ಐದು ದಿನ ಆಗಿದೆ. ಇದೀಗ ಬಾಕ್ಸಾಫೀಸ್'ನಲ್ಲಿ ಕೆಲವೇ ಕೋಟಿಗಳ ಅಂತರದಲ್ಲಿ ಸಮಬಲ ಸಾಧಿಸಿಸುತ್ತಿವೆ.