ನಿಜಕ್ಕೂ ಲಿಪ್ಸ್ಟಿಕ್ ಹಚ್ಚಿದ್ರಾ? ಊರ್ವಶಿ ರೌಟೇಲಾ ಹಿಗ್ಗಾಮುಗ್ಗಾ ಟ್ರೋಲ್‌

May 21, 2023, 4:44 PM IST

ಕಾನ್ ಫಿಲ್ಮ್ ಅದ್ದೂರಿಯಾಗಿ ನಡೆಯುತ್ತಿದೆ. ಈ ಬಾರಿಯ ಕಾನ್ ಫೆಸ್ಟಿವಲ್‌ನಲ್ಲಿ ಬಾಲಿವುಡ್‌ನ ಅನೇಕ ಮಂದಿ ಭಾಗಿಯಾಗಿದ್ದು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ನಟಿ ಊರ್ವಶಿ ರೌಟೇಲಾ ಕೂಡ ಭಾಗಿಯಾಗಿದ್ದು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದರು. ಊರ್ವಶಿ ದಿನಕ್ಕೊಂದು ಡ್ರೆಸ್‌ನಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ವಿಚಿತ್ರ ಗೆಟಪ್‌ನಲ್ಲಿ ಗಮನ ಸೆಳೆದಿದ್ದಾರೆ. ಮೊದಲ ದಿನ ಮೊಸಳೆ ನೆಕ್ಲೆಸ್ ಧರಿಸಿ ಸದ್ದು ಮಾಡಿದ್ದ ಊರ್ವಶಿ 2ನೇ ದಿನ ಲಿಪ್ಸ್ಟಿಕ್ ಮೂಲಕ ಸದ್ದು ಮಾಡಿದ್ದಾರೆ. ನೀಲಿ ಬಣ್ಣದ ಲಿಪ್ಸ್ಟಿಕ್ ಧರಿಸಿ ಹೆಜ್ಜೆ ಹಾಕಿದ್ದಾರೆ. ಇದು ನಿಜಕ್ಕೂ ಲಿಪ್ಸ್ಟಿಕ್ ಹೌದಾ ಎಂದು ನೆಟ್ಟಿಗರು ಕೇಳುತ್ತಿದ್ದಾರೆ.