ಇಲ್ಲಿ 1 ಲಕ್ಷ ರೂ ಹೂಡಿಕೆ ಮಾಡಿದರೆ ಈಗ 1 ಕೋಟಿ ರೂ ಆದಾಯ, ಇನ್ನೂ ತಡಮಾಡಬೇಡಿ!

Published : Oct 02, 2024, 03:20 PM ISTUpdated : Oct 02, 2024, 03:21 PM IST

ಹೂಡಿಕೆ ಮಾಡುವಾಗ ಸರಿಯಾಗಿ ಹಾಗೂ ಸೂಕ್ತವಾಗಿ ಮಾಡಬೇಕು. ಈ ಫಂಡ್‌ನಲ್ಲಿ ಕಡಿಮೆ ಹಣ ಹೂಡಿಕೆ ಮಾಡಿದ್ದರೆ ಸಾಕು, ಈಗ ನಿಮ್ಮ ಕೈಗೆ ಬರೋಬ್ಬರಿ 1 ಕೋಟಿ ರೂಪಾಯಿ ಸಿಗುವ ಅವಕಾಶವಿದೆ. ಒಂದು ವೇಳೆ ಇದುವರೆಗೆ ಹೂಡಿಕೆ ಮಾಡದಿದ್ದರೆ, ಇನ್ನು ತಡಮಾಡಬೇಡಿ. 

PREV
16
ಇಲ್ಲಿ 1 ಲಕ್ಷ ರೂ ಹೂಡಿಕೆ ಮಾಡಿದರೆ ಈಗ 1 ಕೋಟಿ ರೂ ಆದಾಯ, ಇನ್ನೂ ತಡಮಾಡಬೇಡಿ!

ಹಣ ಹೂಡಿಕೆ ಮಾಡುವಾಗ ತಜ್ಞರನ್ನು ಸಂಪರ್ಕಿಸಿ ಮಾಡಿದರೆ ಉತ್ತಮ. ಹಲವು ಕಡೆ ಹೂಡಿಕೆ ಮಾಡಲು ಸಾಧ್ಯವಿದೆ. ಆದರೆ ಅತೀ ಕಡಿಮೆ ಅವಧಿಯಲ್ಲಿ ಗರಿಷ್ಠ ಲಾಭ ಪಡೆದುಕೊಳ್ಳುವ ಯೋಜನೆಗಳಿವೆ. ಹೀಗೆ ಮ್ಯೂಚ್ಯುವಲ್ ಫಂಡ್ ಕೂಡ ಒಂದು.  ಮೂರು ಮಿಡ್ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳಲ್ಲಿ 25 ವರ್ಷಗಳ ಹಿಂದೆ ಹೂಡಿಕೆದಾರರು 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಈಗ ಒಟ್ಟು 1 ಕೋಟಿ ರೂಪಾಯಿ ಲಾಭ ಕೈಸರಲಿದೆ.

26

ಟಾಟಾ ಮಿಡ್ ಕ್ಯಾಪ್ ಗ್ರೋಥ್ ಫಂಡ್ ಸುಮಾರು 20.32% ಲಾಭ ನೀಡಿದೆ, ಇದರ ಪರಿಣಾಮವಾಗಿ 25 ವರ್ಷಗಳ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಇಂದು ಅದು 1.02 ಕೋಟಿ ರೂಪಾಯಿಗೆ ತಲುಪುತ್ತಿತ್ತು. 1 ಲಕ್ಷ ರೂಪಾಯಿ ಹಣ ಹೊಂದಿಸಿ ಹೂಡಿಕೆ ಮಾಡಿದ್ದವರು ಇದೀಗ ಕೋಟ್ಯಾಧಿಪತಿಗಳಾಗಿದ್ದಾರೆ. ಗರಿಷ್ಠ ಲಾಭದ ಮೂಲಕ ಆರ್ಥಿಕತೆಯಲ್ಲಿ ಸದೃಢತೆಯನ್ನು ಸಾಧಿಸಲು ಸಾಧ್ಯವಿದೆ. 

36

ಹೂಡಿಕೆಯನ್ನು ನಾಲ್ಕು ಪಟ್ಟು ಹೆಚ್ಚಿಸಬಹುದಾದ ಮ್ಯೂಚುಯಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆದಾರರು ಆಸಕ್ತಿ ಹೊಂದಿದ್ದಾರೆ. ಈ ರೀತಿಯ ಮ್ಯೂಚುಯಲ್ ಫಂಡ್‌ಗಳನ್ನು ಟ್ರ್ಯಾಕ್ ಮಾಡುವುದು ಸುಲಭದ ಕೆಲಸವಲ್ಲ. ಮ್ಯೂಚ್ಯುವಲ್ ಫಂಡ್  ಯೋಜನೆಗಳಲ್ಲಿ ನಿಮ್ಮ ಸಾಮರ್ಥ್ಯ, ಹೂಡಿಕೆ, ಅವಧಿ ಸೇರಿದಂತೆ ಇತರ ಷರತ್ತುಗಳನ್ನು ಕೂಲಂಕುಷವಾಗಿ ಅರ್ಥಮಾಡಿಕೊಂಡು ಬಳಿಕ ಹೂಡಿಕೆ ಮಾಡಿದರೆ ಅಪಾಯದ ಪ್ರಮಾಣ ಕಡಿಮೆ.

46

ಈ ಯೋಜನೆಗಳ ಬಗ್ಗೆ ಗಮನ ಹರಿಸದಿದ್ದರೆ ಹೂಡಿಕೆಯಲ್ಲಿ ಹೆಚ್ಚಿನ ಅಪಾಯವನ್ನು ಎದುರಿಸಬೇಕಾಗುತ್ತದೆ. ಕಡಿಮೆ ಹಣ ಹೂಡಿಕೆ ಮಾಡಿ ಹೆಚ್ಚಿನ ರಿಟರ್ನ್ಸ್ ಪಡೆಯುವ ಯೋಜನೆಗಳ ಕುರಿತು ಹೆಚ್ಚಿನ ಅಧ್ಯಯನ ಮಾಡಿ ಹೂಡಿಕೆ ಮಾಡಿದರೆ ಒಳೀತು. ಆದರೆ ಈ ಮ್ಯೂಚುಯಲ್ ಫಂಡ್‌ಗಳ ಕಾರ್ಯಕ್ಷಮತೆಯೂ ಗಮನಾರ್ಹವಾಗಿದೆ. ಈ ಫಂಡ್‌ಗಳಲ್ಲಿ ಭಾರಿ ಲಾಭ ಗಳಿಸಬಹುದು.

56

ಫ್ರಾಂಕ್ಲಿನ್ ಇಂಡಿಯಾ ಪ್ರೈಮಾ ಫಂಡ್ ಅತ್ಯಂತ ಹಳೆಯ ಮಿಡ್ ಕ್ಯಾಪ್ ಫಂಡ್‌ಗಳಲ್ಲಿ ಒಂದಾಗಿದೆ. ಫ್ರಾಂಕ್ಲಿನ್ ಇಂಡಿಯಾ ಪ್ರೈಮಾ ಫಂಡ್‌ನಲ್ಲಿ 25 ವರ್ಷಗಳ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಇಂದು 1.15 ಕೋಟಿ ರೂಪಾಯಿ ಲಾಭ ಪಡೆಯಬಹುದಿತ್ತು. ಈಗಲೂ ಸರಿಯಾದ ಯೋಜನೆ ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡಿದರೆ ಕೆಲವೇ ವರ್ಷಗಳಲ್ಲಿ ಕೋಟಿ ಕೋಟಿ ರೂಪಾಯಿ ಆದಾಯಗಳಿಸಲು ಸಾಧ್ಯವಿದೆ. 

66

ಮತ್ತೊಂದೆಡೆ, ನಿಪ್ಪಾನ್ ಇಂಡಿಯಾ ಗ್ರೋಥ್ ಫಂಡ್‌ನಲ್ಲಿ 25 ವರ್ಷಗಳ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ 1.72 ಕೋಟಿ ರೂಪಾಯಿ ಪಡೆಯಬಹುದಿತ್ತು. ಈ ರೀತಿ ಹಲವು ಮ್ಯುಚಲ್ ಫಂಡ್ ಯೋಜನೆಗಳು ಚಾಲ್ತಿಯಲ್ಲಿದೆ. ಹೂಡಿಕೆ ಮಾಡಿ ಲಾಭಗಳಿಸುವ ಮೊದಲು ಫಂಡ್‌ಗಳ ಕುರಿತು ತಿಳಿದುಕೊಳ್ಳಿ, ಒಂದು ಸಣ್ಣ ತಪ್ಪು ಅತೀ ದೊಡ್ಡ ಅಪಾಯಕ್ಕೂ ನಾಂದಿ ಹಾಡಲಿದೆ.

Read more Photos on
click me!

Recommended Stories