ಜಾರಿ ಹೋದ ಡ್ರೆಸ್‌ನಿಂದಲೇ ವೈರಲ್‌ ಆದ ಸೋನಿಯಾ ಭನ್ಸಾಲ್‌ಗೆ ಮೆಂಟಲ್‌ ಥೆರಪಿ ಸಲಹೆ ನೀಡಿದ್ರು ವೈದ್ಯರು!

Published : Oct 02, 2024, 03:20 PM IST

ಬಿಗ್‌ ಬಾಸ್‌ 17ನ ತಾರೆ ಸೋನಿಯಾ ಭನ್ಸಾಲ್‌ ಸಖತ್‌ ವೈರಲ್‌ ಆಗಿದ್ದಾರೆ. ಅದಕ್ಕೆ ಕಾರಣ ಐಫಾ ಕಾರ್ಯಕ್ರಮದಲ್ಲಿ ಅವರು ತೊಟ್ಟಿದ್ದ ಡ್ರೆಸ್‌ ಜಾರಿ ಹೋಗಿದ್ದು. ಅನ್‌ಕಂಫರ್ಟೆಬಲ್‌ ಡ್ರೆಸ್‌ ತೊಟ್ಟು ಬಂದಿದ್ದ ಸೋನಿಯಾ ಭನ್ಸಾಲ್‌, ಕಾಲ ಬಳಿ ಡ್ರೆಸ್‌ ಸರಿ ಮಾಡಿಕೊಳ್ಳುವ ವೇಳೆಗೆ ಎದೆಯ ಮೇಲಿನ ಡ್ರೆಸ್‌ ಜಾರಿ ಹೋಗಿತ್ತು.

PREV
111
ಜಾರಿ ಹೋದ ಡ್ರೆಸ್‌ನಿಂದಲೇ ವೈರಲ್‌ ಆದ ಸೋನಿಯಾ ಭನ್ಸಾಲ್‌ಗೆ ಮೆಂಟಲ್‌ ಥೆರಪಿ ಸಲಹೆ ನೀಡಿದ್ರು ವೈದ್ಯರು!

ಐಫಾ ಕಾರ್ಯಕ್ರಮದಲ್ಲಿ ಡ್ರೆಸ್ ಜಾರಿ ಹೋಗಿ ಸಖತ್‌ ಟ್ರೋಲ್‌ಗೆ ಗುರಿಯಾದ ಬಿಗ್‌ ಬಾಸ್‌ 17 ತಾರೆ ಸೋನಿಯಾ ಭನ್ಸಾಲ್‌ ಬಗ್ಗೆ ಇನ್ನಷ್ಟು ಮಾಹಿತಿಗಳು ಬರಲಾರಂಭಿಸಿವೆ. ಕೆಲ ತಿಂಗಳ ಹಿಂದೆ ಆಕೆಗೆ ವೈದ್ಯರು ಮೆಂಟಲ್‌ ಥೆರಪಿ ಸಲಹೆ ನೀಡಿದ್ದರು ಅನ್ನೋದು ಬಹಿರಂಗವಾಗಿದೆ.

211

ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ ನಂತರ ಪ್ಯಾನಿಕ್ ಅಟ್ಯಾಕ್‌ಗೆ ಒಳಗಾಗಿದ್ದ ಸೋನಿಯಾ ಭನ್ಸಾಲ್‌ಗೆ ಕಳೆದ ಜುಲೈ 21 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಬಿಗ್ ಬಾಸ್ 17 ಖ್ಯಾತಿಯ ಸೋನಿಯಾ ಬನ್ಸಾಲ್ ಅವರಿಗೆ ಮಾನಸಿಕ ಆರೋಗ್ಯಕ್ಕಾಗಿ ಥೆರಪಿ ತೆಗೆದುಕೊಳ್ಳುವಂತೆ ಸೂಚಿಸಲಾಗಿತ್ತು.
 

311

ಈ ಮಾನಸಿಕ ಒತ್ತಡದಿಂದ ಹೊರಬರಬೇಕಾದಲ್ಲಿ ಒಂದು ಅಥವಾ ಎರಡು ತಿಂಗಳ ಕಾಲ ಮೆಂಟಲ್‌ ಥೆರಪಿಗೆ ಒಳಗಾಗುವಂತೆ ಆಕೆಯ ವೈದ್ಯರು ಸಲಹೆ ನೀಡಿದ್ದರು ಎನ್ನಲಾಗಿದೆ.
 

411

ತಮ್ಮ ಜೀವನದಲ್ಲಿ ಬಿಗ್‌ ಬಾಸ್‌ 17 ಕಾರ್ಯಕ್ರಮಕ್ಕೆ ಎಂಟ್ರಿ ಪಡೆದುಕೊಂಡಿದ್ದೇ ಬೆಸ್ಟ್‌ ನಿರ್ಧಾರ ಎಂದಿರುವ ಸೋನಲ್‌ ಭನ್ಸಾಲ್‌, ಮಾನಸಿಕ ಸಮಸ್ಯೆಗಳು ಅಲ್ಲಿ ಎದುರಾಗಿರಲಿಲ್ಲ ಎಂದಿದ್ದರು.

511

ಈ ಬಗ್ಗೆ ಅಧಿಕೃತವಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದ ಸೋನಿಯಾ ಭನ್ಸಾಲ್‌, "ಕೆಲವು ಸಮಯದಿಂದ ನನ್ನ ಆರೋಗ್ಯವು ಸರಿಯಾಗಿಲ್ಲ ಆದರೆ ನಾನು ಸಾಮಾನ್ಯ ಜೀವನವನ್ನು ನಡೆಸಲು ಪ್ರಯತ್ನಿಸುತ್ತಿದ್ದೇನೆ ಎಂದಿದ್ದಾರೆ.
 

611

'ನಾನು ಪ್ರಬಲ ವ್ಯಕ್ತಿ ಆದರೆ ಸನ್ನಿವೇಶಗಳು ನನ್ನ ಕೈಯಲ್ಲಿಲ್ಲ. ನನ್ನ ಸಂತೋಷ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ನಾನು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇನೆ ಮತ್ತು ನಾನು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತೇನೆ ಎಂದು ನಾನು ಭಾವಿಸುತ್ತೇನೆ. ನನಗೆ ಪ್ರೀತಿ ಮತ್ತು ಬೆಂಬಲವನ್ನು ತೋರಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು' ಎಂದು ಬರೆದುಕೊಂಡಿದ್ದರು.

711

ಈಗ ಇರುವ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಹೋರಾಟ ಮಾಡುತ್ತಿರುವ ಸೋನಿಯಾ  ಭನ್ಸಾಲ್‌ ಕಳೆದ ನಾಲ್ಕು ತಿಂಗಳುಗಳಿಂದ ಪ್ಯಾನಿಕ್ ಅಟ್ಯಾಕ್‌ಗಳನ್ನು ಅನುಭವಿಸುತ್ತಿದ್ದಾರೆ.

811

ಇತ್ತೀಚೆಗೆ ದುಬೈನಲ್ಲಿ ನಡೆದ ಐಫಾ ಕಾರ್ಯಕ್ರಮಕ್ಕೆ ಬಂದಿದ್ದ ಸೋನಿಯಾ ಭನ್ಸಾಲ್‌, ನೆಲ ಗುಡಿಸೋ ಡ್ರೆಸ್​​ ಹಾಕಿಕೊಂಡು ಬಂದಿದ್ದರು. ಮೇಲುಗಡೆ ಧಾರಾಳವಾಗಿ ದೇಹ ಪ್ರದರ್ಶನ ಮಾಡಿದ್ದ ಈಕೆಯ ಡ್ರೆಸ್‌ ಜಾರಿ ಹೋಗಿದ್ದ ವಿಡಿಯೋ ವೈರಲ್‌ ಆಗಿತ್ತು.

911

ಡ್ರೆಸ್​ ಸರಿ ಮಾಡಿಕೊಳ್ಳುವ ಸಲುವಾಗಿ ಕೆಳಗೆ ಬಿದ್ದಾಗ ಡ್ರೆಸ್​ ಎಲ್ಲಿ ಉದುರಿ ಹೋಗಿ ಬಿಡತ್ತೋ ಎಂದು ಮೇಲ್ಭಾಗ ಪದೇ ಪದೇ ಸರಿ ಮಾಡಿಕೊಂಡಿದ್ದಾರೆ.
 

1011


ಇದರ ಬಗ್ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, ಇವೆಲ್ಲಾ ಅಟೆನ್ಷನ್​ ಸೀಕಿಂಗ್​ ಸ್ಟಂಟ್​ಗಳು ಅಷ್ಟೇ.  ಇನ್ನು ಕೆಲವರು ಇನ್ನೊಬ್ಬರನ್ನು ನೋಡಿ ಹೀಗೆಲ್ಲಾ ಡ್ರೆಸ್​ ಮಾಡಿಕೊಳ್ಳೋದು ಸರಿಯಲ್ಲ, ನಿಮಗೆ ಸೂಟ್​ ಆಗತ್ತಾ ಅಂತ ನೋಡಿಕೊಂಡು ಡ್ರೆಸ್​ ಹೊಲಿಸಿಕೊಳ್ಳಬೇಕಮ್ಮಾ ಎಂದಿದ್ದಾರೆ.  
 

1111

ಸೋನಿಯಾ ಅವರಿಗೆ ಈಗ 27 ವರ್ಷ ವಯಸ್ಸು. ಇವರು ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.  ‘ಗೇಮ್ 100 ಕೋಟಿ ಕಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ನಟಿ, ನಂತರ ‘ನಾಟಿ ಗ್ಯಾಂಗ್’, ‘ಡಬ್ಕಿ’ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 
 

click me!

Recommended Stories