ನಿತ್ಯಾ ಮೆನನ್‌ಗೆ ಪ್ರೀತ್ಸೆ ಪ್ರೀತ್ಸೇ ಅಂತ ಪ್ರಾಣ ತಿಂದ ಪಾಗಲ್ ಪ್ರೇಮಿ ಇವನೇ ನೋಡಿ!

Aug 10, 2022, 4:52 PM IST

ಕನ್ನಡತಿ ನಿತ್ಯಾ ಮೆನನ್ ಸ್ಯಾಂಡಲ್‌ವುಡ್‌ಗಿಂತ ಹೆಚ್ಚಾಗಿ ಪಾಪ್ಯೂಲರ್ ಆಗಿದ್ದು ಮಲೆಯಾಳಂ ಸಿನಿಮಾದಿಂದ. ಮಾಲಿವುಡ್ನ ಈ ಸ್ಟಾರ್ ನಟಿ, ಅಂದಗಾತಿ, ಪ್ರತಿಭಾವಂತ ಹೀರೋಯಿನ್ ನಿತ್ಯಾಗೆ ವ್ಯಕ್ತಿಯೊಬ್ಬ ಸಿಕ್ಕಾಪಟ್ಟೆ ಕಿರುಕುಳ ಕೊಟ್ಟಿದ್ದಾನಂತೆ.  ಬರೋಬ್ಬರಿ ಆರು ವರ್ಷ ನನ್ನ ಹಿಂದೆ ಬಿದ್ದು ಕಿರುಕುಳ ಕೊಟ್ಟಿದ್ದ ಅನ್ನೋ ಸಂಗತಿಯನ್ನ ನಿತ್ಯಾ ಹೇಳಿಕೊಂಡಿದ್ದಾರೆ.  ಯ್ಯೂಟ್ಯೂಬ್ನಲ್ಲಿ ಸಿನಿಮಾ ವಿಮರ್ಶೆ ಮಾಡೋ ಸಂತೋಶ್ ವಾರ್ಕಿ ಅನ್ನೋ ಹುಡುಗ, ನಾನು ನಿನ್ನನ್ನೇ ಮದುವೆ ಆಗುತ್ತೇನೆ ಅಂತ ಹಿಂದೆ ಬಿದ್ದಿದ್ದನಂತೆ. 

ಮಗಳ ಮದುವೆಯಲ್ಲಿ ಹಣದ ಮುಗ್ಗಟ್ಟಿತ್ತು: ಕಷ್ಟದ ಸಮಯ ನೆನೆದ ರವಿಚಂದ್ರನ್

ಸಂತೋಷ್ ವಾರ್ಕಿ ಹೋದಲ್ಲೆಲ್ಲಾ ನಾನು ನಿತ್ಯಾರನ್ನೇ ಮದುವೆ ಆಗುತ್ತೇನೆ ಅಂತ ಹೇಳೋದು, ಬೇರೆ ಬೇರೆ ನಂಬರ್ನಿಂದ ನಿತ್ಯಾ ಮೆನನ್‌ಗೆ ಕಾಲ್ ಮಾಡಿ ಟಾರ್ಚರ್ ಮಾಡುತ್ತಿದ್ದನಂತೆ. ಯಾವ್ ಮಟ್ಟಕ್ಕೆ ಅಂದ್ರೆ ಬರೋಬ್ಬರಿ 30 ನಂಬರ್‌ನಿಂದ ನಿತ್ಯಾಗೆ ಕಾಲ್ ಮಾಡುತ್ತಿದ್ದನಂತೆ. ಅಷ್ಟೆ ಅಲ್ಲ ನಿತ್ಯಾ ಮೆನನ್ ತಂದೆ ತಾಯಿಗೂ ಕಾಲ್ ಮಾಡಿ ನಿಮ್ಮ ಮಗಳನ್ನ ನನಗೆ ದಾರೆ ಎರೆದು ಕೊಡಿ ಅಂತ ಬೇಡಿದ್ನಂತೆ..
 
ಸಂತೋಷ್ ವಾರ್ಕಿ ಎಷ್ಟೇ ಕಿರುಕುಳ ಕೊಟ್ರು ಕಂಪ್ಲೇಟ್ ಕೊಟ್ಟು ಕಂಬಿ ಹಿಂದೆ ಕೂರಿಸೋಕೆ ಹೋಗಿಲ್ಲ. ಯಾಕಂದ್ರೆ ಅವನ ಭವಿಷ್ಯ ಹಾಳಾಗುತ್ತೆ ಅನ್ನೋ ಮಾನವೀಯತೆಯಿಂದ.. ಅವ್ನು ಎಷ್ಟೆ ಕಿರುಕುಳ ಕೊಟ್ರು ಅವನ್ನ ನಾನು ಕ್ಷಮಿಸಿದ್ದೇನೆ. ಇನ್ಮುಂದಾದ್ರು ಸರಿಯಾಗಿರು ಅಂದಿದ್ದಾರಂತೆ ನಿತ್ಯಾ ಮೆನನ್.