ಗೌತಮಿ ಮುಖವಾಡ ನಾನು ಬಯಲು ಮಾಡ್ತೀನಿ; ಬಿಗ್ ಬಾಸ್‌ಗೆ ಕಾಲಿಡುತ್ತಿದ್ದಂತೆ ಕಾಯಿ ಹೊಡೆದ ಶೋಭಾ ಶೆಟ್ಟಿ!

Published : Nov 18, 2024, 11:22 AM IST
ಗೌತಮಿ ಮುಖವಾಡ ನಾನು ಬಯಲು ಮಾಡ್ತೀನಿ; ಬಿಗ್ ಬಾಸ್‌ಗೆ ಕಾಲಿಡುತ್ತಿದ್ದಂತೆ ಕಾಯಿ ಹೊಡೆದ ಶೋಭಾ ಶೆಟ್ಟಿ!

ಸಾರಾಂಶ

ಬಿಗ್ ಬಾಸ್‌ ಮನೆಗೆ ಕಾಲಿಡುತ್ತಿದ್ದಂತೆ ಕಿಡಿ ಹಚ್ಚಿದ ಶೋಭಾ ಶೆಟ್ಟಿ- ರಜತ್. ಗಾಬರಿಯಲ್ಲಿ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳನ್ನು ನೋಡುತ್ತಾ ಕುಳಿತ ಮನೆ ಮಂದಿ.....  

ಬಿಗ್ ಬಾಸ್ ಸೀಸನ್ 11 50ನೇ ದಿನಕ್ಕೆ ಕಾಲಿಡುತ್ತಿದ್ದಂತೆ ಇಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಎಂಟ್ರಿ ತೆಗೆದುಕೊಂಡಿದ್ದಾರೆ. ರಿಯಾಲಿಟಿ ಶೋಗಳ ಸ್ಪರ್ಧಿ ಆಗಿರುವ ರಜತ್ ಬುಜ್ಜಿ ಹಾಗೂ ಕಿರುತೆರೆ ನಟಿ ಶೋಭಾ ಶೆಟ್ಟಿ. ರಜತ್ ಬುಜ್ಜಿಗೆ ಬಿಗ್ ಬಾಸ್ ರಿಯಾಲಿಟಿ ಶೋ ಮೊದಲ ಸಲ ಕಾಲಿಡುತ್ತಿರುವುದು ಆದರೆ ಶೋಭಾ ಶೆಟ್ಟಿ ಕೆಲವು ತಿಂಗಳುಗಳ ಹಿಂದೆ ತೆಲುಗು ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸಿ ಎಲಿಮಿನೇಟ್‌ ಆಗಿ ಹೊರ ಬಂದವರು. ವೀಕೆಂಡ್ ವಿತ್ತ ಕಿಚ್ಚ ಸುದೀಪ ಮುಗಿಯುತ್ತಿದ್ದಂತೆ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳ ಪರಿಚಯಿಸಿಕೊಟ್ಟಿದ್ದಾರೆ ಆದರೆ ಮನೆ ಎಂಟ್ರಿ ಆಗಿರುವುದು 51ನೇ ದಿನಕ್ಕೆ. 

ಮುಖ್ಯ ಧ್ವಾರದಿಂದ ರಜತ್ ಎಂಟ್ರಿ ಕೊಡುವಾಗ ಬ್ಯಾಂಡ್‌ ಜೊತೆ ಕುಣಿದು ಬರುತ್ತಾರೆ....ಶೋಭಾ ಶೆಟ್ಟಿ ಅಡುಗೆ ಮನೆಯಲ್ಲಿ ಬಚ್ಚಿಟ್ಟು ಕೊಂಡು ಎಂಟ್ರಿ ಕೊಟ್ಟಿದ್ದಾರೆ. 'ತ್ರಿವಿಕ್ರಮ್ ನೀವು ಸ್ಟಾರ್ಟಿಂಗ್‌ನಿಂದ ಕಿತ್ತು ದಬ್ಬಾಕುತ್ತಿರುವುದನ್ನು ನಾನು ವೈಲ್ಡ್‌ ಕಾರ್ಡ್‌ ಎಂಟ್ರಿಯಿಂದ ದಬ್ಬಹಾಕುತ್ತೀನಿ' ಎಂದು ಹೇಳುತ್ತಾ ರಜತ್ ಒಂದು ಕಾಯಿ ಹೊಡೆಯುತ್ತಾರೆ. 'ಒಂದು ಸ್ನೇಹದ ವಿಚಾರದಲ್ಲಿ ನಂಬಿಕೆ ಅರ್ಹನಲ್ಲದ ವ್ಯಕ್ತಿ ಅಂದ್ರು ಮಂಜು.....ಫ್ರೆಂಡು ಫ್ರೆಂಡು ಅಂತಾರೆ ಅವರ ಬಗ್ಗೆ ಇವ್ರು ಮಾತನಾಡುತ್ತಿದ್ದಾರೆ ಇವರ ಬಗ್ಗೆ ಅವರು ಮಾತನಾಡುತ್ತಿದ್ದಾರೆ...ಇನ್ನು ಮುಖವಾಡ ಹಾಕಿಕೊಂಡಿದ್ದಾರೆ ಗೌತಮಿ ಅವರು ಅದೊಂದು ಮುಖವಾಡ ನಾನು ಬಯಲು ಮಾಡುತ್ತೀನಿ' ಎಂದು ಶೋಭಾ ಶೆಟ್ಟಿ ಕಾಯಿ ಹೊಡೆಯುತ್ತಾರೆ. ಕಾಯಿ ಹೊಡೆಯದೆ ಪಕ್ಕಕ್ಕೆ ಹೋಗಿ ಬೀಳುತ್ತದೆ 'ಅಯ್ಯೋ...ಕಾಯಿ ಕ್ರ್ಯಾಕ್‌ ಕೂಡ ಆಗಿಲ್ವಾ?' ಎಂದು ಗೌತಮಿ ಟಾಂಗ್ ಕೊಡುತ್ತಾರೆ. 'ಅದಿಕ್ಕೆ ಕೆಳಗೆ ಇಳಿದು ಹೊಡೆಯುತ್ತೀನಿ ಎಂದು ಕಾಯಿಯನ್ನು ಜೋರಾಗಿ ಹೊಡೆಯುತ್ತಾರೆ ಶೋಭಾ ಶೆಟ್ಟಿ. ಹೊಟ್ಟೆ ಉರಿಯುತ್ತಿದ್ದರು ಹೊಡಿರೀ ಹೊಡಿರೀ ಎಂದು ನಗುತ್ತಲೇ ಗೌತಮಿ ಉತ್ತರಿಸುತ್ತಾರೆ. 

ಬಾಯ್‌ಫ್ರೆಂಡ್‌ ಮತ್ತು ಮಗು ಜೊತೆಗಿರುವ ಫೋಟೋ ವೈರಲ್: 'ಜೋಡಿ ಹಕ್ಕಿ' ನಟಿ 

ಸಾಮಾನ್ಯವಾಗಿ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಎಂಟ್ರಿ ಕೊಡುತ್ತಿದ್ದಂತೆ ಮನೆಯಲ್ಲಿ ಕಿತ್ತಾಡಿಕೊಂಡು ದೂರವಿದ್ದ ಸ್ಪರ್ಧಿಗಳು ಒಂದಾಗುತ್ತಾ. ಸುಮಾರು ಎರಡು ಮೂರು ವಾರಗಳ ಕಾಲ ವೈಲ್ಡ್ ಕಾರ್ಡ್‌ ಸ್ಪರ್ಧಿಗಳನ್ನು ನಾಮಿನೇಟ್ ಮಾಡುತ್ತಾರೆ. ಗಾಯಕ ಹನುಮಂತು ವೈಲ್ಡ್‌ ಕಾರ್ಡ್‌ ಎಂಟ್ರಿ ಆಗಿದ್ದರು ತುಂಬಾ ಬೇಗ ಜನರ ಜೊತೆ ಹೊಂದಿಕೊಂಡುಬಿಟ್ಟರು ಆದರೆ ಮನೆಯಲ್ಲಿ ಬೆಂಕಿ ಹಚ್ಚಲೇ ಬೇಕು ಎಂದು ರಜತ್ ಮತ್ತು ಶೋಭಾ ಎಂಟ್ರಿ ಕೊಟ್ಟಿರುವುದು ನೋಡಿ ವೀಕ್ಷಕರು ಮಿಶ್ರ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?