ಲಕ್ಷ್ಮೀ ಬಾರಮ್ಮ: ಕೀರ್ತಿ ಪುನರಾಗಮನ! ಕಾವೇರಿಗೆ ಶಾಕ್!

Published : Nov 18, 2024, 11:15 AM ISTUpdated : Nov 18, 2024, 11:41 AM IST
ಲಕ್ಷ್ಮೀ ಬಾರಮ್ಮ: ಕೀರ್ತಿ ಪುನರಾಗಮನ! ಕಾವೇರಿಗೆ ಶಾಕ್!

ಸಾರಾಂಶ

ಲಕ್ಷ್ಮೀ ಬಾರಮ್ಮ ಸೀರಿಯಲ್ ಕಥೆ ಹುಚ್ಚುಚ್ಚಾಗಿ ಎತ್ತೆತ್ತಲೋ ಸಾಗ್ತಿದೆ ಅನ್ನೋದು ವೀಕ್ಷಕರ ಆರೋಪ. ಮೊನ್ನೆ ಮೊನ್ನೆ ತೀರಿ ಹೋಗಿದ್ದ ಕೀರ್ತಿ ಮತ್ತೆ ಬಂದಿದ್ದಾಳೆ. ಲಕ್ಷ್ಮೀ ತೀರಿಹೋಗಿದ್ದಾಳೆ. ತಲೆಕೆಟ್ಟ ವೀಕ್ಷಕರು ಯದ್ವಾ ತದ್ವಾ ರೇಗಾಡ್ತಿದ್ದಾರೆ.  

ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಕಥೆ ಟ್ರ್ಯಾಕ್ ಬಿಟ್ಟು ಎತ್ತೆತ್ತಲೋ ಹೋಗ್ತಿದೆ ಅನ್ನೋದು ಈ ಸೀರಿಯಲ್ ನೋಡೋರ ಸದ್ಯದ ಗೋಳು. ಇದರಲ್ಲೀಗ ಮಾಮೂಲಿ ಮನುಷ್ಯರಿಗಿಂತ ಜಾಸ್ತಿ ದೆವ್ವ ಭೂತಗಳ ಓಡಾಟ ಜೋರಾಗಿದೆ. ಒಮ್ಮೆ ದೆವ್ವದ ಸೀನ್ ತೋರಿಸಿದ್ದೇ ಈ ಸೀರಿಯಲ್ ಟಿಆರ್‌ಪಿ ಎತ್ತೆತ್ತಲೋ ಹೋಯ್ತು. ಅದನ್ನೇ ನೆವವಾಗಿಟ್ಟುಕೊಂಡು ಈಗ ಸತ್ತು ಹೋದ ಪಾತ್ರಗಳನ್ನು ಮತ್ತೆ ಕರೆತರುವ, ಬದುಕಿರುವ ಪಾತ್ರಗಳನ್ನು ಮತ್ತೆ ಮತ್ತೆ ಸಾಯಿಸುವ ಪ್ರಯೋಗ ಸಾಂಗವಾಗಿ ನಡೆಯುತ್ತಿದೆ. ಇದೀಗ ಹುಚ್ಚಾಪಟ್ಟೆ ಟ್ರ್ಯಾಕ್ ತಪ್ಪಿ ಸಾಗುತ್ತಿರುವ ಎಪಿಸೋಡ್ ನೋಡಿ ವೀಕ್ಷಕರಿಗೂ ಸಾಕಾಗಿ ಹೋಗಿದೆ. ಶಾಕ್ ನೆವದಲ್ಲಿ ಸತ್ತವರನ್ನು ಮತ್ತೆ ಮತ್ತೆ ತರುವುದನ್ನು ನೋಡಿ ಅವರಿಗೂ ಸಾಕಾಗಿ ಹೋಗಿದೆ. ಅದಕ್ಕೆ ಜನ ತಾರಾಮಾರ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಸದ್ಯ ಈ ಸೀರಿಯಲ್‌ನಲ್ಲಿ ಮಹಾಲಕ್ಷ್ಮೀಯ ಕೊನೆಯಾಗಿದೆ ಅಂತ ಬಿಂಬಿಸಲಾಗ್ತಿದೆ.

ಅವಳನ್ನು ರಾವಣನ ಮೂರ್ತಿಯೊಳಗೆ ಹಾಕಿ ಕಾವೇರಿ ಕೊಂದಿದ್ದಾಳೆ ಅಂತ ತೋರಿಸಲಾಗ್ತಿದೆ. ಸದ್ಯ ತನ್ನ ಮುಂದಿರುವ ಕಾಟಗಳೆಲ್ಲ ಮುಗಿದುಹೋಯ್ತು, ಇನ್ನು ಮೇಲೆ ತನ್ನ ಮಗನ ನಡುವೆ ಯಾರೂ ಬರಲ್ಲ ಅಂತ ತಾಯಿ ಕಾವೇರಿ ಫುಲ್ ಖುಷಿಯಲ್ಲಿರುವಾಗಲೇ ಕೀರ್ತಿಯ ಆಗಮನವಾಗಿದೆ.

ಗಂಡನ ಜೊತೆ ವರ್ಷದಲ್ಲಿ 10 ದಿನ ಇರೋದೇ ಕಷ್ಟವಾಗಿದೆ: ಸಂಸಾರದ ಸುಖ-ದುಃಖ ಬಿಚ್ಚಿಟ್ಟ ನಟಿ ಛಾಯಾ ಸಿಂಗ್​

ಇದನ್ನು ನೋಡಿ ಕಾವೇರಿಗೆ ತುಂಬಾ ದೊಡ್ಡ ಶಾಕ್ ಕಾದಿದೆ. ಕೀರ್ತಿ ಅವಳ ಎದುರೇ ಕಾಣಿಸಿಕೊಂಡಿದ್ದಾಳೆ. ಇನ್ನು ಬೊಂಬೆ ಆಡಿಸುವವನು ಅವಳ ಜೀವನದಲ್ಲಿ ಎದುರಾದಾಗಲೆಲ್ಲ ಬರಿ ಚಿಂತೆಯೇ ಅವಳಿಗೆ ಕಾಡುತ್ತದೆ. ಈ ಬಾರಿಯೂ ಹಾಗೇ ಆಗಿದೆ. ಕಾವೇರಿ ಲಕ್ಷ್ಮೀಯನ್ನು ಹೇಗಾದರೂ ಮಾಡಿ ಸಾಯಿಸಬೇಕು ಎಂದು ಅಂದುಕೊಂಡಾಗಲೆಲ್ಲ ಒಂದಲ್ಲ ಒಂದು ರೀತಿಯ ತಡೆ ಆಗುತ್ತದೆ. ನಾಟಕ ನಡೆಯುತ್ತಿರುವ ಸಂದರ್ಭದಲ್ಲಿ ಹೇಗಾದರೂ ಮಾಡಿ ಲಕ್ಷ್ಮೀಯನ್ನು ಕೊಲ್ಲಬೇಕು ಎಂದು ಕಾವೇರಿ ಅಂದುಕೊಂಡಿರುತ್ತಾಳೆ. ಆದರೆ ಅದು ಈ ಬಾರಿ ಸಾಧ್ಯ ಆಗುವುದಿಲ್ಲ. ಆ ನಂತರದಲ್ಲಿ ಯಾವಾಗಲೂ ತನಗೆ ಸೋಲೇ ಆಗುತ್ತಿದೆ ಎಂದು ಬೇಸರ ಮಾಡಿಕೊಂಡು ಕಾವೇರಿ ಬೇರೆ ಯಾವುದಾದರೂ ಉಪಾಯ ನಾನು ಮಾಡಬಲ್ಲೆ ಎಂಬ ಆಲೋಚನೆಯಲ್ಲಿ ಸಾಗುತ್ತಿರುತ್ತಾಳೆ. ಆಗ ದಾರಿ ಮಧ್ಯದಲ್ಲಿ ಬೊಂಬೆ ಆಡಿಸುವವನು ಎದುರಾಗುತ್ತಾನೆ. ಅವನು ಕಾವೇರಿ ಬಳಿ ಮಾತಾಡುತ್ತಾನೆ.

ಅವನು ಯಾವಾಗ ಸಿಕ್ಕಿ ಮಾತನಾಡಿದರೂ ಕಾವೇರಿಗೆ ಚಿಂತೆಯೇ ಆಗಿದೆ. ಅವನು ಹೇಳಿದ ಹಾಗೇ ಅವಳ ಜೀವನದಲ್ಲಿ ಎಲ್ಲವೂ ನಡೆದಿದೆ. ಹೀಗಿರುವಾಗ ಅವನ ಮೇಲೆ ಸಿಟ್ಟಾಗಿ ಅವನ ಹತ್ತಿರ ಕಾವೇರಿ ಮಾತಾಡುತ್ತಾಳೆ. ಅವನು ಹೇಳುತ್ತಾನೆ, ನಿನ್ನ ಮನೆಯಿಂದ ಈ ಬಾರಿ ನೀನೇ ಹೊರಗಡೆ ಹೋಗುತ್ತೀಯಾ. ನೀನು ಮಾಡಿದ ಪಾಪಗಳೆಲ್ಲ ಈಗ ಎಲ್ಲರೆದುರು ಬಯಲಾಗುತ್ತದೆ ಎಂದು ಹೇಳುತ್ತಾನೆ. ಆ ಮಾತನ್ನು ಕೇಳಿ ಇವಳಿಗೆ ಕೋಪ ಬರುತ್ತದೆ.

ಇಬ್ರು ಮಕ್ಕಳಿಗೆ ಅಮ್ಮ ಸ್ವೀಟ್​ ಮಾಡಿಕೊಟ್ರೆ ಹೆಸ್ರೇನು? ಮೇಘನಾ ತರ್ಲೆ ಪ್ರಶ್ನೆಗೆ ತಲೆಕೆಡಿಸಿಕೊಂಡ ತೀರ್ಪುಗಾರರು!

ಹಿಂದೆ ಯಾರೋ ನಿಂತು ದೊಡ್ಡದಾಗಿ ನಗುತ್ತಿದ್ದಂತೆ ಕೇಳಿಸುತ್ತದೆ. ನಂತರ ಹಿಂದಿರುಗಿ ನೋಡುವಷ್ಟರಲ್ಲಿ ಅಲ್ಲಿ ಕೀರ್ತಿ ಕಾಣಿಸುತ್ತಾಳೆ. ಕೀರ್ತಿಯನ್ನು ಕಂಡು ಕಾವೇರಿಗೆ ಶಾಕ್ ಆಗಿದೆ. ಸತ್ತು ಹೋದವಳು ಈಗ ಮತ್ತೆ ಮರಳಿ ಯಾಕೆ ಬಂದಿದ್ದಾಳೆ ಎಂದು ಅವಳಿಗೆ ಆಲೋಚನೆ ಆಗುತ್ತದೆ. ತನ್ನ ಕಣ್ಣುಗಳನ್ನೇ ತನ್ನಿಂದ ನಂಬಲು ಸಾಧ್ಯವಾಗುವುದಿಲ್ಲ. ಈ ಸೀರಿಯಲ್ ನೋಡುತ್ತಿದ್ದವರು ಕೀರ್ತಿ ಪಾತ್ರವನ್ನು ಬಹಳ ಮಿಸ್ ಮಾಡುತ್ತಿದ್ದಾರೆ. ಹೀಗಾಗಿ ದೆವ್ವದ ರೂಪದಲ್ಲಿ ಆಗಾಗ ಕೀರ್ತಿ ದರ್ಶನ ಕೊಡುತ್ತಿರುತ್ತಾಳೆ. ಅದು ಸಾಲದು ಅಂತ ಕಾವೇರಿ ಅತ್ತೆ ಬೇರೆ ವಿಸಿಟ್ ಮಾಡುತ್ತಿದ್ದಾರೆ. ಒಟ್ಟಾರೆ ಇದೆಲ್ಲ ಹುಚ್ಚರ ಸಂತೆ. ಇದರಲ್ಲಿ ವೈಷ್ಣವ್‌ಗಿಂತ ಹೆಚ್ಚಾಗಿ ಈ ಸೀರಿಯಲ್ ನೋಡೋ ನಮಗೆ ಹುಚ್ಚು ಹಿಡಿಯುತ್ತಿದೆ ಅಂತ ವೀಕ್ಷಕರು ರೇಗುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Amruthadhaare Serial: ಪ್ಲ್ಯಾನ್‌ ಬದಲಾಯಿಸಿದ ಜಯದೇವ್;‌ ಇನ್ನೊಂದು ಅವಾಂತರ ಆಗಲಿದೆಯಾ?
ಡೂಡಲ್ ಫೋಟೊ ಮೂಲಕ ಅವಿ ಬರ್ತ್ ಡೇಗೆ ವಿಶ್ ಮಾಡಿದ Divya Uruduga… ಫ್ಯಾನ್ಸ್’ಗೆ ಮದ್ವೆ ಚಿಂತೆ