Oo Antava Song:ಪುಷ್ಪ ಹಾಡಿಗೆ ಬೊಂಬಾಟ್ ಸ್ಟೆಪ್ ಹಾಕಿದ ರಿಕ್ಕಿ ಪಾಂಡ್‌

Jan 7, 2022, 4:17 PM IST

ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅಭಿನಯದ ಪ್ಯಾನ್ ಇಂಡಿಯಾ 'ಪುಷ್ಪ' (Pushpa) ಚಿತ್ರದಲ್ಲಿ ಸಮಂತಾ (Samantha) 'ಊ ಅಂಟಾವಾ ಮಾವ' ಹಾಡಿಗೆ ಹಾಕಿದ ಸ್ಟೆಪ್‌ಗೆ ವಿಶ್ವವೇ ಫಿದಾ ಆಗಿದೆ. ಇದೀಗ ಈ ಹಾಡಿಗೆ ಅಮೇರಿಕಾದ ವ್ಯಕ್ತಿಯೊಬ್ಬರು ಹೆಜ್ಜೆ ಹಾಕಿ ಖುಷಿಪಟ್ಟಿದ್ದಾರೆ. ಹೌದು! ತಮ್ಮ ನೃತ್ಯ ಕೌಶಲ್ಯದಿಂದಲೇ ಗಮನ ಸೆಳೆದಿರುವ ರಿಕ್ಕಿ ಪಾಂಡ್ ( Ricky Pond) ಅವರು ಡ್ಯಾನ್ಸಿಂಗ್ ಡ್ಯಾಡ್ ಎಂದೇ ಪ್ರಸಿದ್ಧ. 'ಊ ಅಂಟಾವಾ ಮಾವ'  ಹಾಡಿಗೆ ಎಂದಿನಂತೆ ಉಲ್ಲಾಸಭರಿತರಾಗಿ, ಅದೇ ಉತ್ಸಾಹದಿಂದ ಡ್ಯಾನ್ಸ್‌ ಮಾಡಿ ಖುಷಿಪಟ್ಟಿದ್ದಾರೆ. ಜೊತೆಗೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

Oo Antava Song: ಪುಷ್ಪ ಹಾಡಿನಿಂದ ಸಮಂತಾ ಪ್ರಪಂಚದಲ್ಲೇ ನಂ.1

ಸಹಜವಾಗಿಯೇ ಈ ನೃತ್ಯ ಇವರ ಅಭಿಮಾನಿಗಳು ಮತ್ತು ನೆಟ್ಟಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ವಿಶೇಷವಾಗಿ 'ಊ ಅಂಟಾವಾ' ಹಾಡಿಗೆ ಸಮಂತಾ ಕೂಡ ನಾಚುವಂತೆ ಅಮೆರಿಕನ್ ಡ್ಯಾಡ್‌ ಕುಣಿದಿದ್ದಾರೆ. ಹೀಗಾಗಿ, ಅಪ್ಲೋಡ್ ಆದ ಕೆಲವೇ ಹೊತ್ತಿನಲ್ಲಿ ಈ ವಿಡಿಯೋವನ್ನು 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಮೆಚ್ಚುಗೆಯ ಪ್ರತಿಕ್ರಿಯೆಯನ್ನು ಗಳಿಸಿದೆ. ಸಾಕಷ್ಟು ಮಂದಿ ರಿಕ್ಕಿ ಅವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ಕೆಲವರು ಎಮೋಜಿಗಳ ಮೂಲಕ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ನಾಲ್ಕು ಮಕ್ಕಳ ತಂದೆಯಾಗಿರುವ ರಿಕ್ಕಿ ಪಾಂಡ್‌ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ಪೂರ್ತಿ ಅವರು ವಿವಿಧ ಹಾಡುಗಳಿಗೆ ಕುಣಿದಿರುವ ವಿಡಿಯೋಗಳಿವೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment