ಪದವಿ ವಿದ್ಯಾರ್ಥಿಗಳಿಗೆ ಮೋದಿ ಸರ್ಕಾರದ 5 ಅದ್ಭುತ ವಿದ್ಯಾರ್ಥಿವೇತನ ಯೋಜನೆಗಳು

By Asianetnews Kannada Stories  |  First Published Sep 23, 2024, 7:43 PM IST

ನೀವು ಪದವಿ ಪೂರ್ವ ಶಿಕ್ಷಣವನ್ನು ಪೂರೈಸಿ ಉನ್ನತ ಶಿಕ್ಷಣ (ಪದವಿ) ಪಡೆಯಲು ಮುಂದಾಗಿದ್ದೀರಾ.. ಹಾಗಾದರೆ ನಿಮಗಿದೋ 5 ಬೆಸ್ಟ್ ವಿದ್ಯಾರ್ಥಿ ವೇತನ ಯೋಜನೆಗಳ ಮಾಹಿತಿ ಇಲ್ಲಿದೆ ನೋಡಿ..


ದೇಶದಲ್ಲಿ ಶಿಕ್ಷಣ ಬಹಳ ದುಬಾರಿಯಾಗಿದೆ. ಪಾಲಕರು ಶುಲ್ಕದ ಬಗ್ಗೆ ಮಾತ್ರವಲ್ಲದೆ ದುಬಾರಿ ಸಮವಸ್ತ್ರ ಮತ್ತು ಕಾಪಿ-ಪುಸ್ತಕಗಳ ಬಗ್ಗೆಯೂ ಚಿಂತಿತರಾಗಿದ್ದಾರೆ. ಕೆಲವು ಮನೆಗಳ ಆರ್ಥಿಕ ಸ್ಥಿತಿ ಹದಗೆಡುವುದರಿಂದ ಅವರ ಮಕ್ಕಳು ಮುಂದೆ ಓದಲು ಬಯಸಿದರೂ ಸಾಧ್ಯವಾಗುತ್ತಿಲ್ಲ. ಇಂತಹ ಮಕ್ಕಳಿಗಾಗಿಯೇ ಸರ್ಕಾರದ 5 ಅದ್ಭುತ ಯೋಜನೆಗಳಿವೆ. ಅವರ ಸಹಾಯದಿಂದ, ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲು ಹಣದ ಕೊರತೆಯನ್ನು ಎದುರಿಸುವುದಿಲ್ಲ. ನೀವೂ ನಿಮ್ಮ ಮಗುವಿಗೆ ಇಂತಹ ಸ್ಕೀಮ್‌ಗಾಗಿ ಹುಡುಕುತ್ತಿದ್ದರೆ, ಈ ಐದು ಬಗ್ಗೆ ಇಲ್ಲಿ ತಿಳಿಯಿರಿ...

ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರದ 5 ಯೋಜನೆಗಳು
1. ಪ್ರಧಾನ ಮಂತ್ರಿ ವಿದ್ಯಾರ್ಥಿವೇತನ ಯೋಜನೆ (PM ವಿದ್ಯಾರ್ಥಿವೇತನ 2024):
ನೀವು ಈ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದರ ಅಡಿಯಲ್ಲಿ ಪ್ರತಿ ವರ್ಷ 5,500 ಮಕ್ಕಳನ್ನು ಆಯ್ಕೆ ಮಾಡಲಾಗುತ್ತದೆ. ಇವರಲ್ಲಿ 2,750 ಹುಡುಗರು ಮತ್ತು 2,750 ಹುಡುಗಿಯರು. ಈ ಯೋಜನೆಯಲ್ಲಿ ಮಕ್ಕಳಿಗೆ ಮಾಸಿಕ 2,500 ರಿಂದ 3,000 ರೂ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಉದ್ದಕ್ಕೂ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.

Tap to resize

Latest Videos

undefined

ಉಚಿತ ಬ್ಯೂಟೀಷಿಯನ್ ತರಬೇತಿ: ರಾಜ್ಯದ ಯುವತಿಯರಿಗೆ ಸುವರ್ಣಾವಕಾಶ

2. ಪಿ.ಎಂ.ಯಶಸ್ವಿ: ಪ್ರಧಾನಮಂತ್ರಿ (ಪಿಎಂ) ಯಶಸ್ವಿ ವಿದ್ಯಾರ್ಥಿ ವೇತನವು ಯುವ ಸಾಧಕರ ವಿದ್ಯಾರ್ಥಿವೇತನ ಪ್ರಶಸ್ತಿ ಯೋಜನೆಯಾಗಿದೆ. ಇದರಲ್ಲಿ ಒಬಿಸಿ, ಇಬಿಸಿ ಮತ್ತು ಡಿಎನ್‌ಟಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಯನ್ನು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಅಂದರೆ 12ನೇ (ಪಿಯುಸಿ) ನಂತರ ನೀಡಲಾಗುತ್ತದೆ. ಈ ಯೋಜನೆಯ ಲಾಭ ಪಡೆಯಲು ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಇದರ ಮೊದಲ ಷರತ್ತು ಏನೆಂದರೆ, ನಿಮ್ಮ ಮಕ್ಕಳು ಕಲಿಯುತ್ತಿರುವ ಕಾಲೇಜನ್ನು ಅಥವಾ ವಿಶ್ವವಿದ್ಯಾಲಯವನ್ನು yet.nta.ac.in ಪಟ್ಟಿಯಲ್ಲಿ ಇರಬೇಕು. ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷ ರೂಪಾಯಿ ಮೀರದ ಮಕ್ಕಳು ಮಾತ್ರ ಅರ್ಜಿ ಸಲ್ಲಿಸಬಹುದು. ಪ್ರಧಾನಮಂತ್ರಿ ಯಶಸ್ವಿ ಯೋಜನೆ ಅಡಿಯಲ್ಲಿ, ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಲ್ಯಾಪ್‌ಟಾಪ್, ಯುಪಿಎಸ್ ಮತ್ತು ಪ್ರಿಂಟರ್‌ನಂತಹ ವಸ್ತುಗಳನ್ನು ಸಹ ನೀಡಲಾಗುತ್ತದೆ. ಇದು ಅವರ ಅಧ್ಯಯನಕ್ಕೆ ಸಹಾಯ ಮಾಡುತ್ತದೆ. ಈ ವಸ್ತುಗಳ ಬೆಲೆ 45,000 ರೂ. ಆಗಿರುತ್ತದೆ. ಇದಲ್ಲದೆ ಮಗುವಿಗೆ ವಾರ್ಷಿಕ 4,000 ರೂ. ನೀಡಲಾಗುತ್ತದೆ.

3. ಪ್ರಧಾನ ಮಂತ್ರಿ ವಿಶೇಷ ವಿದ್ಯಾರ್ಥಿವೇತನ ಯೋಜನೆ (PMSSS):  ಇಂಡಿಯನ್ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಶನ್ (AICTE) ಈ ಯೋಜನೆಯನ್ನು ಪ್ರಾರಂಭಿಸಿದೆ. ಇದರಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ ವಿದ್ಯಾರ್ಥಿಗಳಿಗೆ ಬೇರೆ ಯಾವುದೇ ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕಾಗಿ ಹಣಕಾಸಿನ ನೆರವು ನೀಡಲಾಗುತ್ತದೆ. ಯೋಜನೆಯಡಿ ವಿದ್ಯಾರ್ಥಿಗಳಿಗೆ ವಸತಿ ಮತ್ತು ಆಹಾರಕ್ಕಾಗಿ 1 ಲಕ್ಷ ರೂ. ಹಣಕಾಸಿನ ನೆರವಿನ ವಿವಿಧ ಪದವಿಗಳನ್ನು ನೀಡಬಹುದು. ಉದಾಹರಣೆಗೆ ಸಾಮಾನ್ಯ ಪದವಿ ಮಾಡಲು 30,000 ರೂ. ಅದೇ ವೇಳೆ ಎಂಜಿನಿಯರಿಂಗ್ ಪದವಿಗೆ 1.25 ಲಕ್ಷ ರೂ., ವೈದ್ಯಕೀಯ ವ್ಯಾಸಂಗಕ್ಕೆ 3 ಲಕ್ಷ ರೂ. ಹಣದವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

4. PM-USP ಯೋಜನೆ: ಪ್ರಧಾನ ಮಂತ್ರಿ ಉನ್ನತ ಶಿಕ್ಷಣ ಪ್ರಚಾರ (ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಪ್ರೋತ್ಸಾಹನ್) ಅಂದರೆ PM-USP ಯೋಜನೆಯಡಿಯಲ್ಲಿ ಉನ್ನತ ಶಿಕ್ಷಣಕ್ಕಾಗಿ ಹಣಕಾಸಿನ ನೆರವು ನೀಡಲಾಗುತ್ತದೆ. ಈ ಯೋಜನೆಯ ಪ್ರಯೋಜನಗಳು 12ನೇ (ಪಿಯು) ಫಲಿತಾಂಶವನ್ನು ಆಧರಿಸಿವೆ. ಪ್ರತಿ ವರ್ಷ ಸುಮಾರು 82,000 ವಿದ್ಯಾರ್ಥಿಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ. ಪದವಿಗಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಲಭ್ಯವಿದೆ. ಈ ಯೋಜನೆಯಲ್ಲಿ ವಿದ್ಯಾರ್ಥಿಗಳು ವಾರ್ಷಿಕ 12,000 ರೂ. ಪಡೆಯಬಹುದು.

ಬೆಂಗಳೂರಿನಲ್ಲಿ ಶ್ರದ್ಧಾ ವಾಕರ್‌ ಹಂತಕನಂತೆ ಮತ್ತೊಬ್ಬ ಕ್ರೂರಿ: ಫ್ರಿಡ್ಜ್‌ನಲ್ಲಿ 50 ಪೀಸ್ ಮಹಿಳೆಯ ಮಾಂಸ!

5. ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ ಯೋಜನೆ: ಈ ಯೋಜನೆಯಲ್ಲಿ, ಅಲ್ಪಸಂಖ್ಯಾತ ಸಮುದಾಯದ ಆರ್ಥಿಕವಾಗಿ ದುರ್ಬಲವಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಸರ್ಕಾರ ಸಹಾಯ ಮಾಡುತ್ತದೆ. ಎಸ್‌ಸಿ ಸಮುದಾಯದಿಂದ ಬರುವ ವಿದ್ಯಾರ್ಥಿಗಳೂ ಇದರ ಪ್ರಯೋಜನ ಪಡೆಯುತ್ತಾರೆ. ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸಲು ಸಹಾಯವಾಗುತ್ತದೆ. ಇದರ ಹೊರತಾಗಿ, ವಿದ್ಯಾರ್ಥಿನಿಯರಿಗೆ ಅವರ ಪ್ರೊಫೈಲ್ ಅನ್ನು ಅವಲಂಬಿಸಿ ಅನೇಕ ಇತರ ಪ್ರಯೋಜನಗಳನ್ನು ಸಹ ನೀಡಲಾಗುತ್ತದೆ.

click me!