ಹಾಗೆಯೇ ಶೆಹನಾಜ್ ಅವರು ಹಲವು ಮ್ಯೂಸಿಕ್ ವೀಡಿಯೋಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 'ಮಾರ್ ಕರ್ ಗಯಿ', ಪಿಂದಾನ್, ದಿಯಾನ್ ಕುದಿಯಾನ್, ಜೇ ಹಾನ್ ನಿ ಕರ್ನಿ, ಪುಟ್ಟ್ ಸರ್ದಾರನ್ ದೆ, ಲಕ್ ಲಾನ್ಹತ್, ವಿಹ್ ದಾ ಛಾ, ಜಾಟ್ ಜಾನ್ ವಾರ್ದಾ, ಗುಸ್ಸೆ ಹೋ ಕೆ ನಹಿಯೊ ಸರ್ನಾ, ಜಟ್ಟಿ ಹಾದ್ ಸೆಖ್ಡಿ, ಗುಂಡೇ ಇಕ್ ವಾರ್ ಫೇರ್, ಪೆಗ್ ಪೌನ್ ವೆಲೆ, ಗೇಡಿ ರೂಟ್, ಶೊನಾ ಶೋನಾ ಹಾಗೂ ಹ್ಯಾಬಿಟ್ ಎಂಬ ಮ್ಯೂಸಿಕ್ ಅಲ್ಬಾಂಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಮುಂಬರುವ 'ವಿಕ್ಕಿ ವಿದ್ಯಾ ಕಾ ವೊಹ್ ವಾಲಾ ವಿಡಿಯೋ' ಎಂಬ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ರಾಜ್‌ಕುಮಾರ್ ರಾವ್ ಹಾಗೂ ತ್ರಿಪ್ತಿ ದಿಮ್ರಿ ಮುಂಬರುವ ಹೆಸರಿಡದ ಕಾಮಿಡಿ ಸಿನಿಮಾದಲ್ಲಿಯೂ ಶೆಹನಾಜ್ ಕಾಣಿಸಿಕೊಳ್ಳಲಿದ್ದಾರೆ.