WHO ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಿದ ಮಂಕಿಪಾಕ್ಸ್ 1b ತಳಿ ಭಾರತದಲ್ಲಿ ಪತ್ತೆ!

By Chethan KumarFirst Published Sep 23, 2024, 7:22 PM IST
Highlights

ವಿಶ್ವ ಆರೋಗ್ಯ ಸಂಸ್ಥೆ ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸುವಂತೆ ಮಾಡಿದ್ದ ಮಂಕಿಪಾಕ್ಸ್ 1b ತಳಿ ಇದೀಗ ಭಾರತದಲ್ಲಿ ಪತ್ತೆಯಾಗಿದೆ. ಕೇರಳದ ವ್ಯಕ್ತಿಯಲ್ಲಿ ಈ ಸೋಂಕು ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಅಲರ್ಟ್ ಆಗಿದೆ.

ತಿರುವನಂತಪುರಂ(ಸೆ.23) ಆಫ್ರಿಕಾ ದೇಶಗಳಲ್ಲಿ ಮಂಕಿಪಾಕ್ಸ್ 1b ತಳಿಯಿಂದ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಿತ್ತು. ಇದೀಗ ಈ ತುರ್ತು ಪರಿಸ್ಥಿತಿ ಘೋಷಿಸಿದ ಇದೇ ತಳಿ ಭಾರತದಲ್ಲಿ ಪತ್ತೆಯಾಗಿದೆ. ಇತ್ತೀಚೆಗೆ ಕೇರಳದಲ್ಲಿ ದೃಢಪಟ್ಟಿದ್ದ ಮಂಕಿಪಾಕ್ಸ್ ವ್ಯಕ್ತಿಯಲ್ಲಿ ಪತ್ತೆಯಾಗಿರುವುದು ಈ ಮಂಕಿಪಾಕ್ಸ್ 1b ತಳಿಯಾಗಿದೆ. ಕೇರಳದ ಮಲಪ್ಪುರಂ ಜಿಲ್ಲೆ 38 ವರ್ಷದ ವ್ಯಕ್ತಿ ಇತ್ತೀಚೆಗೆ ದುಬೈನಿಂದ ಮರಳಿದ್ದರು. ಸೋಂಕಿತ ವ್ಯಕ್ತಿ ಚಿಕ್ತಿತ್ಸೆ ಪಡೆಯುತ್ತಿದ್ದು, ಐಸೋಲೇಶನ್ ಮಾಡಲಾಗಿದೆ.

ದುಬೈನಿಂದ ಕೇರಳಕ್ಕೆ ಮರಳಿದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಗುಣಲಕ್ಷಣಗಳು ಕಂಡುಬಂದಿತ್ತು. ಹೀಗಾಗಿ ಆಸ್ಪತ್ರೆ ದಾಖಲಾಗಿದ್ದ ವ್ಯಕ್ತಿಯ ಮಾದರಿ ಸಂಗ್ರಹಿಸಿ ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವೇಳೆ ಮಂಕಿಪಾಕ್ಸ್ ದೃಢಪಟ್ಟಿತ್ತು. ಇದೀಗ ಈ ವ್ಯಕ್ತಿಯಲ್ಲಿ ಪತ್ತೆಯಾಗಿರುವುದು ಮಂಕಿಪಾಕ್ಸ್1b ಖಚಿತಗೊಂಡಿದೆ. 

Latest Videos

ಮಂಕಿಪಾಕ್ಸ್ ಭೀತಿ ಬೆಂಗಳೂರು ಏರ್ಪೋರ್ಟ್‌ನಲ್ಲಿ ಸ್ಕ್ರೀನಿಂಗ್, 21 ದಿನ ಕ್ವಾರಂಟೈನ್, ಮಾಸ್ಕ್ ಕಡ್ಡಾಯ ಸಾಧ್ಯತೆ!

ಮಂಕಿಪಾಕ್ಸ್ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದೆ. ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಕೇರಳ ಆರೋಗ್ಯ ವೀಣಾ ಜಾರ್ಜ್ ಹೇಳಿದ್ದಾರೆ. ವಿದೇಶದಿಂದ ಹಿಂದಿರುಗಿದವರಲ್ಲಿ ರೋಗ ಲಕ್ಷಣಗಳು ಕಂಡು ಬಂದರೆ ನಮಗೆ ಮಾಹಿತಿ ನೀಡಿ ಮತ್ತು ಸರಿಯಾದ ಚಿಕಿತ್ಸೆ ಪಡೆದುಕೊಳ್ಳಿ’ ಎಂದಿದ್ದಾರೆ. ಕೇರಳದಲ್ಲಿ ದಾಖಲಾದ 2ನೇ ಮಂಕಿಪಾಕ್ಸ್ ಪ್ರಕರಣ ಇದಾಗಿದೆ. ಆದರೆ ಏರಡನೇ ಪ್ರಕರಣದಲ್ಲಿ ತಳಿ ಆಫ್ರಿಕಾ ದೇಶಗಳಲ್ಲಿ ಆತಂಕ ಸೃಷ್ಟಿಸಿದ ತಳಿಯಾಗಿದೆ. ಈತನ ಸಂಪರ್ಕಿತರನ್ನು ಗುರುತಿಸಿ ಐಸೋಲೇಶನ್ ಮಾಡಲಾಗಿದೆ. ಇವರ ಮಾದರಿಗಳನ್ನು ಕಳುಹಿಸಲಾಗಿದೆ. ಐಸೋಲೇಶನ್‌ನಲ್ಲಿರುವ ಮಂಕಿಪಾಕ್ಸ್ ಸೋಂಕಿತನ ಸಂಪರ್ಕಿತರ ಆರೋಗ್ಯ ಉತ್ತಮವಾಗಿದೆ ಎಂದು ಕೇರಳ ಆರೋಗ್ಯ ಇಲಾಖೆ ಹೇಳಿದೆ.

ವಿದೇಶದಿಂದ ಆಗಮಿಸುವ ವ್ಯಕ್ತಿಗಳಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ, ಮಂಕಿಪಾಕ್ಸ್ ಅಥವಾ ಇತರ ಸೋಂಕಿನ ಗುಣಲಕ್ಷ್ಣಗಳಿದ್ದರೆ ತಕ್ಷಣವೇ ಆರೋಗ್ಯ ಇಲಾಖೆಗೆ ತಿಳಿಸಲು ಮನವಿ ಮಾಡಲಾಗಿದೆ. ಆರೋಗ್ಯ ಇಲಾಖೆ ರೋಗ ಗುಣಲಕ್ಷಣದ ವ್ಯಕ್ತಿಗಳ ಸಂಪೂರ್ಣ ಸುರಕ್ಷತೆ ಹಾಗೂ ಆರೋಗ್ಯ ತಪಾಸಣೆ ಗಮನಹರಿಸಲಿದೆ ಎಂದಿದೆ. 

 2022ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್ ಕುರಿತು ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಇದರ ಬೆನ್ನಲ್ಲೇ ಆಫ್ರಿಕಾ ದೇಶಗಳಲ್ಲಿ ಮಂಕಿಪಾಕ್ಸ್ ತೀವ್ರಸ್ಪರೂಪದಲ್ಲಿ ಹರಡುತ್ತಿದ್ದಂತೆ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿತ್ತು. 2022ರಿಂದ ಭಾರತದಲ್ಲಿ 30 ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ. 

ಡೆನ್ಮಾರ್ಕ್‌ನ ಬವೇರಿಯನ್‌ ನೋರ್ಡಿಕ್‌ ಎಂಬ ಕಂಪನಿ ‘ಎಂವಿಎ-ಬಿಎನ್‌’ ಹೆಸರಿನ ಎಂಪಾಕ್ಸ್‌ ಲಸಿಕೆ ಅಭಿವೃದ್ಧಿಪಡಿಸಿದೆ. ತುರ್ತು ಬಳಕೆಗೆ ಈ ಲಸಿಕೆಗೆ ವಿಶ್ವಆರೋಗ್ಯ ಸಂಸ್ಥೆ ಅನುಮತಿ ನೀಡಿದೆ. 18 ವರ್ಷ ಮೇಲ್ಪಟ್ಟವರಿಗೆ 2 ಡೋಲ್ ಮೂಲಕ ಈಲಸಿಕೆ ನೀಡಲಾಗುತ್ತದೆ.

ಭಾರತದ 2 ನೇ ಎಂಪಾಕ್ಸ್ ಕೇಸ್‌: ಕೇರಳದಲ್ಲಿ 38 ವರ್ಷದ ವ್ಯಕ್ತಿಗೆ ಮಂಕಿಪಾಕ್ಸ್ ಸೋಂಕು ದೃಢ!
 

click me!