ಈ ಒಬ್ಬ ಹೀರೋ ಮಾತ್ರ ಮೆಗಾಸ್ಟಾರ್ ಚಿರಂಜೀವಿಗೆ ಸೆಡ್ಡು ಹೊಡೆದಿದ್ದು: ಅಚಾನಕ್ಕಾಗಿ ಆರಂಭವಾಯ್ತು ಇಬ್ಬರ ಮಧ್ಯೆ ಕಾಂಪಿಟೇಶನ್!

First Published Sep 23, 2024, 7:24 PM IST

ಟಾಲಿವುಡ್‌ನಲ್ಲಿ 45 ವರ್ಷಗಳಿಂದಲೂ ಸೋಲು ಇಲ್ಲದ ಕೆರಿಯರ್ ಯಾರದು ಅಂದ್ರೆ ಅದು ಮೆಗಾಸ್ಟಾರ್ ಚಿರಂಜೀವಿ ಅವರದು ಅಂತಾನೇ ಹೇಳ್ಬಹುದು. ಚಿರು ಅಂದ್ರೆ ನಟನೆ, ಫೈಟ್ಸ್ ಜೊತೆಗೆ ಅವ್ರ ಡ್ಯಾನ್ಸ್ ಕೂಡ ನೆನಪಾಗುತ್ತೆ.

ಟಾಲಿವುಡ್‌ನಲ್ಲಿ 45 ವರ್ಷಗಳಿಂದಲೂ ಸೋಲು ಇಲ್ಲದ ಕೆರಿಯರ್ ಯಾರದು ಅಂದ್ರೆ ಅದು ಮೆಗಾಸ್ಟಾರ್ ಚಿರಂಜೀವಿ ಅವರದು ಅಂತಾನೇ ಹೇಳ್ಬಹುದು. ಚಿರು ಅಂದ್ರೆ ನಟನೆ, ಫೈಟ್ಸ್ ಜೊತೆಗೆ ಅವ್ರ ಡ್ಯಾನ್ಸ್ ಕೂಡ ನೆನಪಾಗುತ್ತೆ. ಇತ್ತೀಚೆಗೆ ಚಿರಂಜೀವಿ ಅವರ ಡ್ಯಾನ್ಸ್‌ಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಕೂಡ ಸಿಕ್ಕಿದೆ. 1979ರಲ್ಲಿ ಚಿರು ಇಂಡಸ್ಟ್ರಿಗೆ ಕಾಲಿಟ್ಟರು. 

ತಮ್ಮ ಪ್ರತಿಭೆಯಿಂದ ಟಾಲಿವುಡ್ ಇಂಡಸ್ಟ್ರಿಯಲ್ಲಿ ಮೆಗಾಸ್ಟಾರ್ ಆಗಿ ಬೆಳೆದರು ಚಿರು. ನಂತರ ಕೆಲವು ಸ್ಟಾರ್ ಹೀರೋಗಳು ಬಂದ್ರು ಅವ್ರ ರೇಂಜ್ ಅನ್ನ ಯಾರೂ ಮುಟ್ಟೋಕೆ ಆಗ್ಲಿಲ್ಲ. ಆದ್ರೆ ಕೆರಿಯರ್ ಆರಂಭದಲ್ಲಿ ಚಿರುಗೆ ಟಫ್ ಕಾಂಪಿಟೇಶನ್ ಕೊಟ್ಟ ಹೀರೋ ಒಬ್ರು ಇದ್ರು. ಅವರೇ ನಟ ಸುಮನ್. ವೈಯಕ್ತಿಕ ಜೀವನದಲ್ಲಿ ವಿವಾದದ ಕಾರಣ ಸುಮನ್ ಜೈಲಿಗೆ ಹೋಗಿ ಸಿನಿ ಕೆರಿಯರ್‌ನಲ್ಲಿ ಹಿಂದೆ ಬಿದ್ರು. 

Latest Videos


ಆದರೆ ಸಿನಿ ಕೆರಿಯರ್ ಆರಂಭದಲ್ಲಿ ಚಿರುಗೆ ಟಫ್ ಕಾಂಪಿಟೇಶನ್ ಕೊಟ್ಟಿದ್ದು ಅನ್ನೋ ಬಗ್ಗೆ ಸುಮನ್ ಆಸಕ್ತಿಕರ ಮಾತುಗಳನ್ನ ಆಡಿದ್ದಾರೆ. ಇತ್ತೀಚೆಗಿನ ಸಂದರ್ಶನದಲ್ಲಿ ಸುಮನ್ ಮಾತನಾಡಿ, ಚಿರುಗೆ ಸೆಡ್ಡು ಹೊಡೆಯೋಕೆ ನಾನು ಎಂದಿಗೂ ಅಂದುಕೊಂಡಿರಲಿಲ್ಲ ಅಂತ ಹೇಳಿದ್ದಾರೆ. ಜೊತೆಗೆ ಒಂದು ಸಮಯದಲ್ಲಿ ನಾನು ಮೆಗಾಸ್ಟಾರ್ ಆಗಿದ್ದೆ. ನಿನಗೆ ಬೇಕಾಗಿರೋದು ಇದೇ ಅಂತ ಚಿರು ನಿಮ್ಮ ಜೊತೆ ಹೇಳಿದ್ರಂತೆ ನಿಜಾನಾ ಅಂತ ಆ್ಯಂಕರ್ ಕೇಳಿದ್ರು. 

ಇದಕ್ಕೆ ಸುಮನ್ ಉತ್ತರಿಸಿ, ನನ್ನ ಜೊತೆ ಅವ್ರು ಹಾಗೆಂದೂ ಹೇಳಿಲ್ಲ. ನಾನು ಚಿರುಗೆ ಕಾಂಪಿಟೇಶನ್ ಅಂತ ಕೂಡ ನಾನು ಎಂದಿಗೂ ಅಂದುಕೊಂಡಿರಲಿಲ್ಲ. ಗೊತ್ತಿಲ್ಲದೆ ಚಿರುಗೆ ನಾನು ಕಾಂಪಿಟೇಶನ್ ಆಗಿಬಿಟ್ಟೆ. ಆ ಸಮಯದಲ್ಲಿ ಎನ್.ಟಿ.ಆರ್ ಅವ್ರು ಸಿಎಂ ಆಗಿದ್ರು. ಆಗ ಚಿರು ಬೆಳೆಯುತ್ತಿದ್ರು. ಫೈಟ್ಸ್, ನಟನೆ ಎಲ್ಲಾ ಚೆನ್ನಾಗಿ ಮಾಡ್ತಿದ್ರು. ಇದರಿಂದ ಚಿರುಗೆ ಹೊಸ ತಲೆಮಾರಿನ ಹೀರೋ ಆಗಿ ಒಳ್ಳೆ ಹೆಸರು ಬಂತು. 

ಚಿರು ಜೊತೆಗೆ ನಾನು ಕೂಡ ಫೈಟ್ಸ್, ಆಕ್ಟಿಂಗ್ ಮಾಡ್ತಿದ್ದೆ. ಆದ್ರೆ ಚಿರು ಒಳ್ಳೆ ಡ್ಯಾನ್ಸರ್. ಇದರಿಂದ ಚಿರುಗೆ ಆಡಿಯನ್ಸ್ ತುಂಬಾ ಆಕರ್ಷಿತರಾದ್ರು. ಈಗ ತುಂಬಾ ಜನ ಡ್ಯಾನ್ಸರ್‌ಗಳು ಬಂದಿರಬಹುದು. ಆದ್ರೆ ನೆಲ ನೋಡದೆ ಡ್ಯಾನ್ಸ್ ಮಾಡೋಕೆ ಆಗೋದು ಚಿರಂಜೀವಿ ಒಬ್ಬರಿಗೆ ಮಾತ್ರ ಅಂತ ಸುಮನ್ ಹೇಳಿದ್ದಾರೆ. 

ಆಗ ನಾನು ನಟಿಸಿದ ಕೆಲವು ಸಿನಿಮಾಗಳು ಚಿರು ಸಿನಿಮಾಗಳ ಜೊತೆಗೆ ಕಲೆಕ್ಷನ್‌ನಲ್ಲಿ ಪೈಪೋಟಿ ನಡೆಸಿದವು. ಆದ್ರೆ ನಾನು ಎಂದಿಗೂ ಚಿರುಗೆ ಕಾಂಪಿಟೇಶನ್ ಅಂತ ಅಂದುಕೊಂಡಿರಲಿಲ್ಲ. ಯಾಕಂದ್ರೆ ನಾನು ಸಿನಿಮಾ ಇಂಡಸ್ಟ್ರಿಗೆ ಬಂದಿದ್ದೆ ದೊಡ್ಡ ವಿಷಯ. ಇಷ್ಟೆಲ್ಲಾ ಸಾಧಿಸಿದ್ದು ಇನ್ನೂ ದೊಡ್ಡ ವಿಷಯ ಅಂತ ಸುಮನ್ ಹೇಳಿದ್ದಾರೆ. 

click me!