ನಯನತಾರ ಮದುವೆ ಸೀರೆಯಲ್ಲಿ ಸಾಕಷ್ಟು ವಿಶೇಷತೆ..!

Jun 11, 2022, 11:28 AM IST

ಕಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ನಯನತಾರ (Nayanthara) ಸಂಭ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ವಿಘ್ನೇಶ್ ಶಿವಾನ್  (Vighnesh Shivan) ಕೈ ಹಿಡಿದ ನಯನತಾರ, ಮದುವೆ ಔಟ್ ಫಿಟ್ ನಲ್ಲಿ ಎಲ್ಲರನ್ನ ಇಂಪ್ರೇಸ್ ಮಾಡಿದ್ರು. ಸ್ಟೈಲ್ ನಲ್ಲಿ ಸದಾ ಡಿಫ್ರೆಂಟ್ ಎನ್ನಿಸೋ ನಯನತಾರ ತಮ್ಮ ಮದುವೆಗೂ ಸಖತ್ ವಿಭಿನ್ನವಾಗಿರೋ ಹಾಗೂ ವಿಶೇಷವಾಗಿರೋ ಔಟ್ ಫಿಟ್ (Out Fit) ಧರಿಸಿದ್ದರು. 

ದಾಂಪತ್ಯ ಜೀವನಕ್ಕೆ ನಯನತಾರಾ- ವಿಘ್ನೇಷ್, ಹೀಗಿತ್ತು ಮದುವೆ ಸಂಭ್ರಮ

ನಯನತಾರ ತಮ್ಮ ಮದುವೆಯಲ್ಲಿ ಸಂಪ್ರಾದಾಯಿಕವಾಗಿ ಕಾಣಿಸಿಕೊಳ್ಳಬೇಕು ಅನ್ನೋ ನಿಟ್ಟಿನಲ್ಲಿ ಸೀರೆಯನ್ನೇ ಧರಿಸಬೇಕು ಎಂದು ನಿರ್ಧರಿಸಿದ್ರಂತೆ. ವರ್ಮಿಲಿಯನ್ ರೆಡ್ ಕಲರ್ ನ  ಜೇಡ್‌ ಸಂಸ್ಥೆಯ ಮೋನಿಕಾ ಷಾ ನಯನತಾರ ಅವ್ರಿಗಾಗಿಯೇ ಈ ಸ್ಪೆಷಲ್ ಸೀರೆ ಡಿಸೈನ್ ಮಾಡಿದ್ರು. ಸೀರೆಯ ಮೇಲೆ ಟೋನ್ ಆನ್ ಟೋನ್ ಎಂಬ್ರಾಯಿಡರಿ ಮಾಡಲಾಗಿದ್ದು ವಿಶೇಷ ಅಂದ್ರೆ ಹೊಯ್ಸಳ ದೇವಾಲಯಗಳಲ್ಲಿನ ಕೆತ್ತನೆಗಳನ್ನ ಸೀರೆಯ ಮೇಲೆ ಎಂಬ್ರಾಯಿಡ್ ಮಾಡಲಾಗಿತ್ತು. ಇಬ್ಬರ ಪ್ರೀತಿ ಸಂಕೇತವಾಗಿ ಕಸ್ಟಮ್-ಮೇಡ್ ಸೀರೆಯಲ್ಲಿ ನಯನ ಮತ್ತು ವಿಘ್ನೇಶ್ ಶಿವನ್ ಅವರ ಹೆಸರುಗಳನ್ನು ನೇಯಲಾಗಿತ್ತು.

ಅದ್ಧೂರಿ ಓಪನಿಂಗ್, ಸಿನಿ ಪ್ರಿಯರ ಹೃದಯ ತಟ್ಟಿದ 777 ಚಾರ್ಲಿ!

ನಯನತಾರಗಾಗಿ ವಿಘ್ನೇಶ್ ಮೂರು ಕೋಟಿ ಬೆಲೆ ಬಾಳಿವ ಒಡೆವೆಗಳನ್ನ ಖರೀದಿ ಮಾಡಿದ್ರಂತೆ ಅದರೊಟ್ಟಿಗೆ ಐದು ಕೋಟಿಯ ಉಂಗುರವನ್ನೂ ಕೂಡ ಗಿಫ್ಟ್ ಮಾಡಿದ್ದಾರೆ. ಮದುವೆ ಅಂದಾಗ ಚಿನ್ನಾಭರಣ ಧರಿಸೋದು ಸಾಮಾನ್ಯ. ಆದ್ರೆ ನಯನತಾರ ತಮ್ಮ ಮದುವೆಯಲ್ಲಿ ವಜ್ರ, ಪಚ್ಚೆ, ಮುತ್ತುಗಳಿಂದ ಮಾಡಿದ ಕೋಟಿ ಕೋಟಿ ಬೆಲೆ ಬಾಳುವ ಆಭರಣವನ್ನ ಧರಿಸಿದ್ರು. ತಮ್ಮ ಮದುವೆಯ ಪ್ರಯುಕ್ತ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ತಮಿಳುನಾಡಿದ ವಿವಿಧ ಕಡೆಗಳಲ್ಲಿ 18,000 ಮಕ್ಕಳಿಗೆ ಅನ್ನದಾನ ಮಾಡಿಸಿದ್ದಾರೆ.