ಕಾರ್ಕಳ: ಎಎನ್‌ಫ್-ನಕ್ಸಲರ ನಡುವೆ ಭೀಕರ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂಗೌಡನ ಹತ್ಯೆ!

By Ravi Janekal  |  First Published Nov 19, 2024, 7:05 AM IST

ಎಎನ್‌ಎಫ್ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ಬಿನಾಲೆಯ ಸೀತಂಬೈಲು ಎಂಬಲ್ಲಿ ನಕ್ಸಲರ ವಿರುದ್ಡ ನಡೆದ ಭೀಕರ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂಗೌಡ ಹತ್ಯೆ ಮಾಡಲಾಗಿದೆ.


ಉಡುಪಿ (ನ.19): ಎಎನ್‌ಎಫ್ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ಬಿನಾಲೆಯ ಸೀತಂಬೈಲು ಎಂಬಲ್ಲಿ ನಕ್ಸಲರ ವಿರುದ್ಡ ನಡೆದ ಭೀಕರ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂಗೌಡ ಹತ್ಯೆ ಮಾಡಲಾಗಿದೆ.

ಕೊಪ್ಪ ತಾಲೂಕಿನ ಯಡಗುಂದ ಗ್ರಾಮಕ್ಕೆ ನಕ್ಸಲರು ಭೇಟಿ ನೀಡಿದ್ದ ಬಗ್ಗೆ ಮಾಹಿತಿ ಕಲೆಹಾಕಿದ್ದ ಎಎನ್ ಎಫ್ ತಂಡ. ಸೋಮವಾರ ರಾತ್ರಿವೇಳೆ 5 ಮಂದಿ ನಕ್ಸಲರ ತಂಡ ಸೀತಂಬೈಲು ಸಮೀಪ ರೇಷನ್ ಸಂಗ್ರಹಿಸಲು ಬಂದಿದ್ದಾರೆ. ಈ ವೇಳೆ  ಎಎನ್ ಎಫ್ ತಂಡ ಕಾರ್ಯಾಚರಣೆ ನಡೆಸಿದೆ. ಅದಕ್ಕೆ ಪ್ರತಿಯಾಗಿ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಭೀಕರ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಹತನಾಗಿದ್ದಾನೆ. ಇನ್ನುಳಿದ ನಾಲ್ಕೈದು ನಕ್ಸಲರು ಸ್ಥಳದಿಂದ ಪರಾರಿಯಾಗಿದ್ದು, ಶೋಧಕಾರ್ಯ ಮುಂದುವರಿದೆ.

Tap to resize

Latest Videos

undefined

ಕಾರ್ಕಳ: ನಕ್ಸಲ್‌ ಪೀಡಿತ ಈದು ಗ್ರಾಮದಲ್ಲಿ 'ಇಲ್ಲ' ಗಳ ನಡುವೆ ಬದುಕು! 

ಇತ್ತೀಚೆಗೆ ಚಿಕ್ಕಮಗಳೂರಲ್ಲೂ ನಕ್ಸಲರು:

ಕಳೆದ ಒಂದೂವರೆ ದಶಕದಿಂದ ಮಲೆನಾಡಿಗರ ಬದುಕಿಗೆ ಸಂಚಕಾರ ಬಂದಾಗಲೆಲ್ಲಾ ಸರ್ಕಾರದ ಧೋರಣೆಗಳ ಬಗ್ಗೆ ಅಲ್ಲಲ್ಲೇ ನಕ್ಸಲ್ ಬ್ಯಾನರ್, ಕರಪತ್ರ, ಲೆಟರ್ಗಳು ಹೊರಬರ್ತಿದ್ವು. ಆದರೆ ಇತ್ತೀಚೆಗೆ ನಕ್ಸಲರೇ ಹಳ್ಳಿಗಳಿಗೆ ಭೇಟಿ ಕೊಡುತ್ತಿದ್ದಾರೆ ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ ನಡೆಸಿದ್ದರು. ಆದರೀಗ ಕಾರ್ಕಳದಲ್ಲೂ ಅದೇ ರೀತಿ ಚರ್ಚೆಗಳನ್ನು ನಡೆಸಿರುವುದು ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚುತ್ತಿರುವುದರ ಸೂಚನೆಯಾಗಿದೆ. ಇತ್ತ ಪೊಲೀಸರು ಎ.ಎನ್.ಎಫ್. ಸಿಬ್ಬಂದಿ ಅಲರ್ಟ್‌ ಆಗಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ. 

click me!