RRR ವಿಶ್ಯುವಲ್ಸ್ ಟ್ರೀಟ್ ಹಿಂದೆ ಹೇಗಿತ್ತು ಗೊತ್ತಾ ವಿಎಫ್ಎಕ್ಸ್ ಕೆಲಸ?

Jun 23, 2022, 5:01 PM IST

RRR ರಾಜಮೌಳಿ ಇಡೀ ದೇಶದ ಸಿನಿ ಪ್ರೇಕ್ಷಕರಿಗೆ ಕೊಟ್ಟ ದೊಡ್ಡ ಖುಷಿ ಮತ್ತು ಥ್ರಿಲ್.  RRR ಸಿನಿಮಾ ವಿಶ್ಯುವಲ್ಸ್ ಟ್ರೀಟ್ ಕಂಡು ಎಂಥಾ ಸಿನಿಮಾ ಗುರು ಅಂದವರದೆಷ್ಟೋ. ಈ ಸಿನಿಮಾದಲ್ಲಿ ಮೈ ಜುಮ್ ಎನ್ನಿಸೋ ಹಲವು ದೃಶ್ಯಗಳು ಇದೆ. ರಾಮ್ ಚರಣ್ ರಾಮನ ಅವತಾರದಲ್ಲಿ ಬರೋ ದೃಶ್ಯ. ಜ್ಯೂ.ಎನ್ಟಿಆರ್ ಹುಲಿ ಜೊತೆ ಸೆಣಸೋ ದೃಶ್ಯ, ಕಾಡು ಪ್ರಾಣಿಗಳ ಜೊತೆ ಬ್ರಿಟೀಷ್ ಬಂಗ್ಲೆಗೆ ನುಗ್ಗೋ ಸೀನ್ ಎಂದಿಗೂ ಮರೆಯೋಕೆ ಸಾಧ್ಯವಿಲ್ಲ. ಆದ್ರೆ ಈ ಮಹಾದೃಶ್ಯ ಕಾವ್ಯದ ಹಿಂದೆ ವಿಎಫ್ಎಕ್ಸ್ ಅನ್ನೋ ಸಿನಿಮಾ ಟೆಕ್ನಿಕಲ್ ಕೆಲಸ ಮಾಡಿದೆ. ಆ ವಿಎಫ್ಎಕ್ಸ್ ವರ್ಕ್ ಹೇಗಿತ್ತು ಅಂತ ಮೌಳಿ ಟೀಂ ಒಂದು ವೀಡಿಯೋ ರಿವೀಲ್ ಮಾಡಿದೆ.

ಚಿತ್ರರಂಗದ ಬಹುತೇಕ ತಾರೆಯರು 'ವಿಕ್ರಾಂತ್ ರೋಣ' ವೇದಿಕೆಯಲ್ಲಿ, ಸುದೀಪ್‌ಗೆ ಸಾಥ್

ಭಾರತೀಯ ಚಿತ್ರರಂಗದ ಮೋಸ್ಟ್ ಎಕ್ಸ್ಪೆನ್ಸೀವ್ ಸಿನಿಮಾ RRR ಅನ್ನೋ ಹೆಗ್ಗಳಿಕೆ ಕೂಡ ಈ ಸಿನಿಮಾಗೆ ಸಿಕ್ಕಿದೆ. ಬರೋಬ್ಬರಿ 550 ಕೋಟಿ ಬಂಡವಾಳದಲ್ಲಿ ನಿರ್ಮಾಣ ಮಾಡಿರೋ ಸಿನಿಮಾದ ವಿಶ್ಯುವಲ್ ಟ್ರೀಟ್ ಕಣ್ಣಗೆ ಅಕ್ಷರಶಃ ಹಬ್ಬದಂತೆ ಕಾಣುತ್ತೆ. ಹೀಗಾಗಿ ಈ ಸಿನಿಮಾ 1250 ಕೋಟಿ ಕಲೆಕ್ಷನ್ ಮಾಡಿದೆ. ಈ ಸಿನಿಮಾದಲ್ಲಿ ಬರೀ ವಿಎಫ್ಎಕ್ಸ್ ಕೆಲಸಕ್ಕೆ ಮಾತ್ರ ಬರೋಬ್ಬರಿ 80 ಕೋಟಿ ಕರ್ಚು ಮಾಡಿದ್ದಾರಂತೆ ಮೌಳಿ. ಭಾರತೀಯ ಚಿತ್ರರಂಗದ ಟಾಪ್ ಗ್ರಾಫಿಕ್ಸ್ ಡಿಸೈನರ್ ವಿ ಶ್ರೀನಿವಾಸ್ ಹಾಗು ಅವರ ತಂಡ RRR ಸಿನಿಮಾದ ವಿಎಫ್ಎಕ್ಸ್ ಕೆಲಸ ಮಾಡಿದ್ದಾರೆ.