ಬಾಕ್ಸ್ ಆಫೀಸ್ ನಲ್ಲಿ ಸೌತ್ ಚಿತ್ರಗಳ ದರ್ಬಾರ್, KGF 2, ವಿಕ್ರಮ್, RRR ಮೇಲುಗೈ

Jul 3, 2022, 3:30 PM IST

ಇತ್ತೀಚಿನ ದಿನಗಳಲ್ಲಿ ಸೌತ್ ಸಿನಿಮಾಗಳ ಲೆವೆಲ್ ಬದಲಾಗಿದೆ. ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಸೌತ್ ಸ್ಟಾರ್ ಗಳ ದರ್ಬಾರ್ ಜೋರಾಗಿದೆ. ಕೆಲ ತಿಂಗಳ ಹಿಂದೆಯಷ್ಟೇ ರಿಲೀಸ್ ಆದ ಸಿನಿಮಾಗಳಲ್ಲಿ ಹೈಯೆಸ್ಟ್ ಕಲೆಕ್ಷನ್ ಮಾಡಿದ ಚಿತ್ರಗಳಲ್ಲಿ ಸೌತ್ ಚಿತ್ರಗಳೇ ಮೇಲುಗೈ ಸಾಧಿಸಿದೆ. ಆ ಲಿಸ್ಟ್ ನಲ್ಲಿ ಕೆಜಿಎಫ್2, ಆರ್ ಆರ್ ಆರ್ ಹಾಗೂ ವಿಕ್ರಂ ಸಿನಿಮಾಗಳು ಮೊದಲ ಮೂರು ಸ್ಥಾನ ಪಡೆದುಕೊಂಡಿದೆ.

ಹಣ ಕೊಟ್ಟು ಕರ್ನಾಟಕ ಕ್ರಶ್ ಆದ್ರಾ ರಶ್ಮಿಕಾ? ಶುರುವಾಯ್ತು ಕಿರಿಕ್ ಹುಡುಗಿಯರ ಕಿತ್ತಾಟ!

ಸದ್ಯ ಆರ್ ಆರ್ ಆರ್ , ಕೆಜಿಎಫ್ 2 ಮತ್ತು ವಿಕ್ರಮ್ ಸಿನಿಮಾಗಳು ಹೈಯೆಸ್ಟ್ ಕಲೆಕ್ಷನ್ ಮಾಡಿದೆ. ಕೆಜಿಎಫ್ 2 ಗೆ 150 ಕೋಟಿ ಬಜೆಟ್ ಹಾಕಿ 1228.3 ಕೋಟಿ ಗ್ರಾಸ್ ಹಾಗೂ 625.4 ಕೋಟಿ ಶೇರ್ ಪಡೆದುಕೊಂಡಿದೆ ಹೊಂಬಾಳೆ ಸಂಸ್ಥೆ. ಥ್ರಿಬಲ್ ಆರ್ ಸಿನಿಮಾಗೆ ಹಾಕಿದ ಬಂಡವಾಳ 425 ಕೋಟಿ. 1131.1 ಕೋಟಿ ಗ್ರಾಸ್ ಹಾಗೂ: 611.3 ಕೋಟಿ ಶೇರ್ ಪಡೆದುಕೊಂಡಿದೆ ತಂಡ. ಇನ್ನು ಇತ್ತೀಚಿಗೆ ಬಿಡುಗಡೆ ಆದ ಕಮಲ್ ಹಾಸನ್ ಅವ್ರ ವಿಕ್ರಮ್ ಚಿತ್ರಕ್ಕೆ 115 ಕೋಟಿ ಬಂಡವಾಳ ಹಾಕಿ  400.2 ಕೋಟಿ ಗ್ರಾಸ್ , 203.3 ಕೋಟಿ ಶೇರ್ ಪಡೆದುಕೊಡಿದ್ದಾರೆ..ಇದು ಕೇವಲ 24 ದಿನಗಳ ಕಲೆಕ್ಷನ್ ಆಗಿದ್ದು ಇನ್ನು ಥಿಯೇಟರ್ ನಲ್ಲಿ ವಿಕ್ರಮ್ ಸಕ್ಸಸ್ ಫುಲ್ ಪ್ರದರ್ಶನ ಕಾಣ್ತಿದೆ. 

ನಾನಾಡದಾ ಮಾತೆಲ್ಲವಾ ಕದ್ದಾಲಿಸು..... ಎನ್ನುತ್ತಾ ಮತ್ತೆ ಒಂದಾಯ್ತು ಮುಂಗಾರು ಮಳೆ ಟೀಂ..!

ಕೆಜಿಎಫ್ , ವಿಕ್ರಮ್ , ಆರ್ ಆರ್ ಆರ್  ಸಿನಿಮಾಗಳ ಜೊತೆಗೆ ದಿ ಕಾಶ್ಮೀರ ಫೈಲ್ಸ್ , ಬೂಲ್ ಬುಲಯ್ಯ 2, ಬೀಸ್ಟ್ , ಗಂಗೂಬಾಯಿ ಕಾಥಿಯಾವಾಡಿ, ಸರ್ಕಾರು ವಾರಿ ಪಾಠ, ವಾಲಿಮೈ, ಬೀಮ್ಲಾ ನಾಯಕ್ ಚಿತ್ರಗಳು ಅತೀ ಹೆಚ್ಚು ಕಲೆಕ್ಷನ್ ಮಾಡಿದೆ.