Cannes 2023: ಮೊಸಳೆ ನೆಕ್ಲೆಸ್‌ ಹಾಕಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಊರ್ವಶಿ ರೌಟೆಲಾ

May 20, 2023, 12:27 PM IST

2023ನೇ ಸಾಲಿನ ಕಾನ್ ಚಿತ್ರೋತ್ಸವ ಆರಂಭ ಆಗಿದೆ. ದೇಶ-ವಿದೇಶದ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿರೋದು ಕಾನ್ ಚಿತ್ರೋತ್ಸವದ ಒಂದು ವಿಶೇಷ ಆಕರ್ಷಣೆ. ಸುಂದರ ಉಡುಗೆಗಳನ್ನು ತೊಟ್ಟು ನಟಿಮಣಿಯರು ಪೋಸ್ ನೀಡಿದ್ದಾರೆ. ಕಾನ್ ಫೆಸ್ಟಿವಲ್ನಲ್ಲಿ ಐರಾವತ ಬೆಡಗಿ ಊರ್ವಶಿ ರೌಟೇಲಾ ಕೇಸರಿ ಬಣ್ಣದ ಗೌನ್ನಲ್ಲಿ ಮಿಂಚಿದ್ದಾರೆ. ನಟಿ ಊರ್ವಶಿ ರೌಟೇಲಾ ಅವರು ಈ ಬಾರಿ ರೆಡ್‌ ಕಾರ್ಪೆಟ್‌ನಲ್ಲಿ ಪಿಂಕ್ ಬಣ್ಣದ ಸ್ಟ್ರಾಪ್‌ಲೆಸ್‌ ರಫೆಲ್‌ ಧರಿಸಿದ್ದರು.ತಮ್ಮ ವಿಭಿನ್ನವಾದ ಬಟ್ಟೆ ಹಾಗೂ ನಕ್ಲೆಸ್ ಮೂಲಕ ಊರ್ವಶಿ ರೌಟೇಲಾ ಎಲ್ಲರ ಗಮನಸೆಳೆದರು. ಎರಡು ಮೊಸಳೆ ಆಕಾರಗಳಿರುವ ಇವರ ಈ ನೆಕ್ಲೆೆಸ್‌ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆಭರಣ ಲೋಕದಲ್ಲಿಇದನ್ನು ಎಲಿಗೇಟರ್‌ ನೆಕ್ಲೆಸ್ ಎನ್ನಲಾಗುತ್ತದೆ.