Kangana Ranaut: ಬಾಲಿವುಡ್ ಸ್ಟಾರ್ ಜೋಡಿಗೆ ಮನೆಗೆ ನುಗ್ಗಿ ಹೊಡೀತೀನಿ ಎಂದ ಕಂಗನಾ

Feb 11, 2023, 5:48 PM IST

ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ಬಾಲಿವುಡ್ ಸೆಲೆಬ್ರಿಟಿ ಜೋಡಿಯೊಂದು, ತಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂದು ಕಂಗನಾ ಆರೋಪ ಮಾಡಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಅವರು, ಸೆಲೆಬ್ರಿಟಿ ದಂಪತಿಗೆ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಮನೆಗೆ ನುಗ್ಗಿ ನಿಮಗೆ ಹೊಡೆಯುತ್ತೇನೆ ಎಂದು ಖಾರವಾಗಿ ಬರೆದುಕೊಂಡಿರುವ ಅವರು, ಬಾಲಿವುಡ್​ನ ಯಾವುದೇ ಸೆಲೆಬ್ರಿಟಿ ದಂಪತಿ ಬಗ್ಗೆ ಪ್ರಸ್ತಾಪಿಸಿಲ್ಲ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಭಾರೀ  ಚರ್ಚೆ ಶುರುವಾಗಿದೆ.