90ರ ದಶಕದಲ್ಲೇ ಬೋಲ್ಡ್ ನಟನೆಯಿಂದ ಹಲ್‌ಚಲ್‌ ಸೃಷ್ಟಿಸಿದ ಮಹೇಶ್ ಬಾಬು ನಾದಿನಿ ಬಿಗ್ಬಾಸ್ ಮನೆಗೆ

First Published Oct 4, 2024, 9:01 PM IST

90ರ ದಶಕದ ಜನಪ್ರಿಯ ನಟಿ ಶಿಲ್ಪಾ ಶೀರೋಡ್ಕರ್‌, ಅವರೀಗ ಬಿಗ್‌ಬಾಸ್‌ 18ಕ್ಕೆ ಹೋಗಲು ಸಿದ್ದರಾಗುತ್ತಿದ್ದಾರೆ.  ಈ  ಹಿನ್ನೆಲೆಯಲ್ಲಿ ಮುನ್ನೆಲೆಗೆ ಬಂದಿರುವ ಅವರ ವೃತ್ತಿ ಬದುಕಿನ ಕೆಲ ಆಸಕ್ತಿಕರ ವಿಚಾರಗಳ ಬಗ್ಗೆ ಇಲ್ಲಿದೆ ಹಿನ್ನೋಟ..

90ರ ದಶಕದ ಜನಪ್ರಿಯ ನಟಿ ಶಿಲ್ಪಾ ಶೀರೋಡ್ಕರ್‌, ಅವರೀಗ ಬಿಗ್‌ಬಾಸ್‌ 18ಕ್ಕೆ ಹೋಗಲು ಸಿದ್ದರಾಗುತ್ತಿದ್ದಾರೆ. ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿರುವ ಶಿಲ್ಪಾ ಶೀರೋಡ್ಕರ್, ಈಗ ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್ ಬಾಸ್ 18ಕ್ಕೆ ಶಿಲ್ಪಾ ಸ್ಪರ್ಧಿಯಾಗಿ ಹೋಗುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಹಿಂದಿಯ ಈ ಬಹುನಿರೀಕ್ಷಿತ 18 ನೇ ಸೀಸನ್ ಅಕ್ಟೋಬರ್ 6 ಭಾನುವಾರದಿಂದ ತೆರೆ ಕಾಣಲಿದೆ. ಶಿಲ್ಪಾ ಶಿರೋಡ್ಕರ್ ಅವರು ಬಿಗ್‌ಬಾಸ್‌ 18ರ ಸ್ಪರ್ಧಿ ಎಂಬುದು ಖಚಿತವಾಗಿದ್ದು, ಈ  ಹಿನ್ನೆಲೆಯಲ್ಲಿ ಮುನ್ನೆಲೆಗೆ ಬಂದಿರುವ ಅವರ ವೃತ್ತಿ ಬದುಕಿನ ಕೆಲ ಆಸಕ್ತಿಕರ ವಿಚಾರಗಳ ಬಗ್ಗೆ ಇಲ್ಲಿದೆ ಹಿನ್ನೋಟ..

ಶಿಲ್ಪಾ ಶಿರೋಡ್ಕರ್ 1973ರ ಜನವರಿ 20 ರಂದು ಚಲನಚಿತ್ರೋದ್ಯಮದಲ್ಲಿ ಆಳವಾಗಿ ಬೇರೂರಿರುವ ಕುಟುಂಬದಲ್ಲಿ ಜನಿಸಿದರು.  ತೆಲುಗು ಸೂಪರ್‌ ಸ್ಟಾರ್‌ ಮಹೇಶ್ ಬಾಬು ಅವರಿಗೂ ಈ ಶಿಲ್ಪಾ ಶಿರೋಡ್ಕರ್ ಅವರಿಗೂ ಹತ್ತಿರದ ಒಡನಾಟವಿದೆ. ಏಕೆಂದರೆ ಶಿಲ್ಪಾ ಶಿರೋಡ್ಕರ್ ಅಕ್ಕ ಹಾಗೂ ಮಾಜಿ ನಟಿ ನಮೃತಾ ಶಿರೋಡ್ಕರ್‌ ಮಹೇಶ್ ಬಾಬು ಅವರ ಪತ್ನಿ. ಶಿಲ್ಪಾ ಶಿರೋಡ್ಕರ್ ಅವರು 1989ರಲ್ಲಿ ತೆರೆ ಕಂಡ ರಮೇಶ್ ಶಿಪ್ಪಿ ಅವರ ಭ್ರಷ್ಟಾಚಾರ ಸಿನಿಮಾದ ಮೂಲಕ ಬಾಲಿವುಡ್‌ ಪ್ರವೇಶಿಸಿದರು. ಈ ಸಿನಿಮಾದಲ್ಲಿ ಅವರು ಮಿಥುನ್ ಚಕ್ರವರ್ತಿ ಹಾಗೂ ರೇಖಾ ಜೊತೆ ಕಾಣಿಸಿಕೊಂಡಿದ್ದರು. ಆಗ ಕೇವಲ 18 ವರ್ಷದವಾಗಿದ್ದ ಶಿಲ್ಪಾ ಆ ಸಿನಿಮಾದಲ್ಲಿ ಅಂಧ ಯುವತಿಯ ಪಾತ್ರ ಮಾಡುವ ಮೂಲಕ  ಬಹಳಷ್ಟು ಖ್ಯಾತಿ ಗಳಿಸಿದರು. 

Latest Videos


ಇದಾದ ನಂತರ ಶಿಲ್ಪಾ ಹಿಂದಿರುಗಿ ನೋಡಿದ್ದೆ ಇಲ್ಲ  ಆಗಿನ ಹಲವು ಪ್ರಮುಖ ನಟರ ಜೊತೆ ನಟಿಸುವ ಮೂಲಕ ಬಾಲಿವುಡ್‌ನ ಬಹುಬೇಡಿಕೆಯ ನಟಿ ಎನಿಸಿದ್ದರು.  ಅವರು 1990 ರ ಚಲನಚಿತ್ರ 'ಕಿಶನ್ ಕನ್ಹಯ್ಯಾ'ದಲ್ಲಿ ಅನಿಲ್ ಕಪೂರ್ ಅವರೊಂದಿಗೆ ನಟಿಸಿದರು ನಂತರ ತ್ರಿನೇತ್ರ (1991), ಹಮ್ (1991), ಖುದಾ ಗವಾಹ್ (1992), ಆಂಖೇನ್ (1993), ಪೆಹಚಾನ್ (1993), ಗೋಪಿ ಕಿಶನ್ (1994), ಬೇವಫಾ ಸನಮ್ (1995), ಮತ್ತು ಮೃತ್ಯುದಂಡ್ (1997). ಹೀಗೆ ಹಲವು ಗಮನಾರ್ಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. 

ಮಿಥುನ್ ಚಕ್ರವರ್ತಿ ಅವರೊಂದಿಗಿನ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ವಿಶೇಷವಾಗಿ ಮೆಚ್ಚುಗೆಗೆ ಪಾತ್ರವಾಯಿತು ಮತ್ತು ಇಬ್ಬರೂ ಒಂಬತ್ತು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. 90ರ ದಶಕದ ಆರಂಭದಲ್ಲಿ ಶಿಲ್ಪಾ ಬೋಲ್ಡ್ ಪಾತ್ರಗಳ ಮೂಲಕ ಮಿಂಚಿದ್ದರು. ಆ  ಸಮಯದಲ್ಲಿ ಅಂತಹ ಪಾತ್ರಗಳು ವಿವಾದಾತ್ಮಕವೆನಿಸಿದ್ದವು. ಯಶಸ್ವಿಯಾಗಿ ಬಾಲಿವುಡ್‌ನ್ನು ಬಹುಕಾಲ ಆಳಿದ ಶಿಲ್ಪಾ ಅವರು ನಂತರ ನಟನೆಯಿಂದ 13 ವರ್ಷಗಳ ಸುದೀರ್ಘ ಬ್ರೇಕ್ ತೆಗೆದುಕೊಂಡರು. ಇದೇ ಸಮಯದಲ್ಲಿ ಅವರು ತಮ್ಮ ವೈಯಕ್ತಿಕ ಜೀವನದತ್ತ ಗಮನ ಹರಿಸಿದರು. ಅಮೆರಿಕಾ ಮೂಲದ ಬ್ಯಾಂಕರ್ ಅಪರೇಷ್‌ ರಂಜಿತ್ ಅವರನ್ನು 2000ದಲ್ಲಿ ಮದುವೆಯಾದ ಶಿಲ್ಪಾ ಶಿರೋಡ್ಕರ್‌ಗೆ ಅನೌಷ್ಕ ಎಂಬ ಮಗಳಿದ್ದಾಳೆ. 

ಸುದೀರ್ಘ ಬ್ರೇಕ್‌ನ ನಂತರ 2013ರಲ್ಲಿ ಏಕ್ ಮುತ್ತಿ ಅಸ್ಮಾನ್‌ ಎಂಬ ಜೀ ಟಿವಿ ಸೀರಿಯಲ್‌ ಮೂಲಕ ಅವರು ಮತ್ತೆ ನಟನೆಗೆ ಆಗಮಿಸಿದರು.  ಇದಾದ ನಂತರ ಸಿಲ್ಸಿಲಾ ಪ್ಯಾರ್ ಕಾ ಹಾಗೂ ಸಾವಿತ್ರಿ ದೇವಿ ಕಾಲೇಜ್ & ಹಾಸ್ಪಿಟಲ್ ಎಂಬ ಧಾರವಾಹಿಯಲ್ಲಿಯೂ ನಟನೆ ಮುಂದುವರಿಸಿದ ಶಿಲ್ಪಾ, 2020ರಲ್ಲಿ ಗುನ್ಸ್ ಆಫ್ ಬನರಾಸ್ ಸಿನಿಮಾದ ಮೂಲಕ ಮತ್ತೆ ಹಿರಿತೆರೆಗೆ ಮರಳಿದ್ದರು.  

ಶಿಲ್ಪಾ ಶಿರೋಡ್ಕರ್ ತಮ್ಮ ಕುಟುಂಬದೊಂದಿಗೆ ಆತ್ಮೀಯವಾದ ಒಡನಾಟವನ್ನು ಹೊಂದಿದ್ದಾರೆ. ವಿಶೇಷವಾಗಿ ಅವರ ಸೋದರಿ ನಮೃತಾ ಹಾಗೂ ಭಾವ ಮಹೇಶ್ ಬಾಬು ಜೊತೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕುಟುಂಬ ಸಂಬಂಧಿತ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ,  ಇನ್ಸ್ಟಾಗ್ರಾಮ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿರುವ ಅವರು ಅಲ್ಲಿ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನದ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. 

ಬೋಲ್ಡ್ ರೋಲ್‌ನಲ್ಲಿ ಕಾಣಿಸಿಕೊಂಡ ಕಾರಣಕ್ಕೆ ಶಿಲ್ಪಾ ಶಿರೋಡ್ಕರ್ ಅವರನ್ನು ವಿವಾದಗಳು ಸುತ್ತಿಕೊಂಡಿದ್ದವು. ಮಹಿಳಾ ಪಾತ್ರಗಳ ಚಿತ್ರಣದಲ್ಲಿ ಬಾಲಿವುಡ್ ಹೆಚ್ಚು ಸಂಪ್ರದಾಯಿಕವಾಗಿದ್ದ ಆ 90ರ ದಶಕದಲ್ಲಿ ಶಿಲ್ಪಾ ಬೋಲ್ಡ್ ಹಾಗೂ ಪ್ರಚೋದನಕಾರಿ ಪಾತ್ರಗಳಲ್ಲಿ ಕಾಣಿಸಿಕೊಂಡರು. ಇಂಟಿಮೇಟ್ ಸಿನಿಮಾಗಳಲ್ಲಿ ಅವರ ಅಭಿನಯ ಹಾಗೂ ಇಂಡಸ್ಟ್ರಿಯಲ್ಲಿ ರೂಢಿಯಲ್ಲಿದ್ದ ಹಳೆಯ ಸಂಪ್ರದಾಯಗಳನ್ನು ಮುರಿಯುವ ಮೂಲಕ ಅವರು ವಿವಾದ ಸೃಷ್ಟಿಸಿದ್ದರು. ಈ ಎಲ್ಲಾ ಪಾತ್ರಗಳು ಆಕೆಗೆ ಜನಪ್ರಿಯತೆ ನೀಡುವ ಜೊತೆಗೆ ಟೀಕೆಗೂ ಗುರಿಯಾಗಿತ್ತು. ಸಿನಿಮೋದ್ಯಮದ ಕೆಲ ವಿಭಾಗಗಳು ಹಾಗೂ ಪ್ರೇಕ್ಷಕರು ಆಕೆಯನ್ನು ಅಶ್ಲೀಲ, ಅಸಭ್ಯ ಎಂದು ಲೇಬಲ್ ಮಾಡಿದ್ದರು. ಇಂತಹ ಶಿಲ್ಪಾ ಶಿರೋಡ್ಕರ್ ಈಗ ಬಿಗ್ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದು, ಆ ಕಾಲದಲ್ಲೇ ಬೋಲ್ಡ್ ಆಗಿದ್ದ ಶಿಲ್ಪಾ ಈ ಕಾಲದ ಬಿಗ್ಬಾಸ್‌ ಮನೆಯಲ್ಲಿ ಹೇಗಿರುತ್ತಾರೆ ಎಂಬುದು ಅಭಿಮಾನಿಗಳ ಕುತೂಹಲವಾಗಿದೆ.

click me!