ಬಲಭೀಮ ಬಳ್ಳಾರಿ ಹುಡುಗನನ್ನು ಮೆಚ್ಚಿಕೊಂಡ ಬಾಲಿವುಡ್ ನಟನ ವೀಡಿಯೋ ವೈರಲ್!

Aug 6, 2023, 4:23 PM IST

ಖಾಸಗಿ ಚಾನೆಲ್ ನ ಹುನರ್ ಬಾಜ್ ದೇಶ್ ಕಿ ಶಾನ್ ಶೋ ನಲ್ಲಿ ಕನ್ನಡದಲ್ಲೆ ಮಾತನಾಡಿ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅಚ್ಚರಿ ಮೂಡಿಸಿದ್ದಾರೆ. ಕರ್ನಾಟಕದ ಬಳ್ಳಾರಿ ಹುಡುಗ ಮಸ್ತಾನ್ ಅಲಿ ಬಲಭೀಮನಂಥಾ ಹುಡುಗನ ಪ್ರಿತಿಭೆಗೆ ಫಿದಾ ಆದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಕನ್ನಡಿಗರ ಪ್ರೀತಿಗೆ ಕಾರಣವಾಗಿದ್ದಾರೆ. ಬಳ್ಳಾರಿ ಹುಡುಗ ಮಸ್ನತಾನ್ ಅಲಿ ಬಾಹುಬಲಿಯಂಥಾ  ಕಸರತ್ತನ್ನು ನೋಡಿ ಕನ್ನಡಿಗ ಎಂದು ತಿಳಿದು ಕನ್ನಡದಲ್ಲೆ ಮಾತನಾಡಿಸಿದ್ದಾರೆ. ಚೆನ್ನಾಗಿದ್ದೀಯಾ ಎಂದು ಕನ್ನಡದಲ್ಲೆ ಕೇಳಿರುವ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕನ್ನಡಿಗನ ಶೌರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.