ನಮ್ಮ ಸಮಾಜದಲ್ಲಿ ದೇವತೆಯರನ್ನು ಸರಸ್ವತಿ, ಅನ್ನಪೂರ್ಣೇಶ್ವರಿ ಎಂದು ಕರೆಯುತ್ತೇವೆ. ಆದರೆ, ಮೃತ ರೇಣುಕಾಸ್ವಾಮಿ ಪವಿತ್ರಾಗೌಡ ಅವರನ್ನು ಮಂಚಕ್ಕೆ ಕರೆದು, ಮಹಿಳೆಯ ಘನತೆಗೆ ಧಕ್ಕೆ ತಂದಿದ್ದಾರೆ. ರೇಣುಕಾಸ್ವಾಮಿಯ ನಡತೆ, ವ್ಯಕ್ತಿತ್ವವನ್ನು ನೋಡದೆ ಆತನನ್ನು ರಾಷ್ಟ್ರೀಯ ನಾಯಕ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ದರ್ಶನ್ ಅವರನ್ನು ವಿಲನ್ ಆಗಿ ಚಿತ್ರಿಸಲಾಗುತ್ತಿದೆ: ಸಿ.ವಿ.ನಾಗೇಶ್
ಬೆಂಗಳೂರು(ನ.27): ನಟ ದರ್ಶನ್ ಗೆಳತಿ ಪವಿತ್ರಾಗೌಡರನ್ನು ಮಂಚಕ್ಕೆ ಕರೆಯುವ ಮೂಲಕ ಮಹಿಳೆಯನ್ನು ಗೌರವಿಸದೆ ದುರ್ನಡತೆ ತೋರಿರುವ ಚಿತ್ರ ದುರ್ಗದ ರೇಣುಕಾಸ್ವಾಮಿಯನ್ನು ರಾಷ್ಟ್ರೀಯ ನಾಯಕ ಎಂದು ಬಿಂಬಿಸಲಾಗುತ್ತಿದೆ. ಬಣ್ಣದ ಬದುಕಿನಲ್ಲಿ ನಾಯಕನಾಗಿದ್ದರೂ ದರ್ಶನ್ ಅವರನ್ನು ವಿಲನ್‌ನಂತೆ ಕಾಣಲಾಗುತ್ತಿದೆ ಎಂದು ಹಿರಿಯ ವಕೀಲ ಸಿ.ವಿ. ನಾಗೇಶ್ ಹೈಕೋರ್ಟ್ ಮುಂದೆ ಆಕ್ಷೇಪಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ,ಆರ್.ನಾಗರಾಜು, ಎಂ. ಲಕ್ಷ್ಮಣ್, ಅನುಕುಮಾರ್, ಜಗದೀಶ್ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆ ಯನ್ನು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ಪೀಠ ಮಂಗಳವಾರ ನಡೆಸಿತು. ದರ್ಶನ್ ಪರ ಹಿರಿಯ ವಕೀಲ ನಾಗೇಶ್ ಅವರು ಎರಡೂವರೆ ತಾಸು ವಾದ ಮಂಡಿಸಿ, ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ತಂದು ಕೊಲೆ ಮಾಡಲಾಗಿಲ್ಲ. ಕೊಲೆಯಲ್ಲಿ ದರ್ಶನ್ ಪಾತ್ರವಿಲ್ಲ. ತನಿಖೆಯಲ್ಲಿ ಸಾಕಷ್ಟು ಲೋಪಗಳಿವೆ ಎಂದು ವಿವರಿಸಿದರು.
undefined
ರೇಣುಕಾಸ್ವಾಮಿ ಕೊಲೆ ಕೇಸ್: ಜೈಲಿಂದ ಮನೆಗೆ ಹೋಗಲು ವೈದ್ಯರ ಮೇಲೆ ಒತ್ತಡ ಹಾಕಿದ್ರಾ ನಟ ದರ್ಶನ್?
ದಿನದ ಕಲಾಪ ಮುಗಿದ ಕಾರಣ ನ್ಯಾಯಪೀಠ ವಿಚಾರಣೆಯನ್ನು ನ.28ಕ್ಕೆ ಮುಂದೂಡಿತು. ವಿಚಾರಣೆ ವೇಳೆ ಸಿ.ವಿ.ನಾಗೇಶ್ ವಾದ ಮಂಡಿಸಿ, ನಮ್ಮ ಸಮಾಜದಲ್ಲಿ ದೇವತೆಯರನ್ನು ಸರಸ್ವತಿ, ಅನ್ನಪೂರ್ಣೇಶ್ವರಿ ಎಂದು ಕರೆಯುತ್ತೇವೆ. ಆದರೆ, ಮೃತ ರೇಣುಕಾಸ್ವಾಮಿ ಪವಿತ್ರಾಗೌಡ ಅವರನ್ನು ಮಂಚಕ್ಕೆ ಕರೆದು, ಮಹಿಳೆಯ ಘನತೆಗೆ ಧಕ್ಕೆ ತಂದಿದ್ದಾರೆ. ರೇಣುಕಾಸ್ವಾಮಿಯ ನಡತೆ, ವ್ಯಕ್ತಿತ್ವವನ್ನು ನೋಡದೆ ಆತನನ್ನು ರಾಷ್ಟ್ರೀಯ ನಾಯಕ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ದರ್ಶನ್ ಅವರನ್ನು ವಿಲನ್ ಆಗಿ ಚಿತ್ರಿಸಲಾಗುತ್ತಿದೆ.
ಗೌತಮ್ ಹೆಸರಿನಲ್ಲಿ ರೇಣುಕಾಸ್ವಾಮಿ ಇನ್‌ಸ್ಟಾಗ್ರಾಂನಲ್ಲಿ ಪವಿತ್ರಾಗೌಡಗೆ ಕಳುಹಿಸಿರುವ ಸಂದೇಶ ನೋಡಿದರೆ ಆತನ ವ್ಯಕ್ತಿತ್ವ ಏನೆಂದು ಅರ್ಥ ವಾಗುತ್ತದೆ. ದೋಷಾರೋಪ ಪಟ್ಟಿಯಲ್ಲಿ ದರ್ಶನ್ ಫೋಟೊಗಳನ್ನು ಕಲರ್ ಮಾಡಿ ಹಾಕುವ ಬದಲು ರೇಣುಕಾಸ್ವಾಮಿಯ ಚಿತ್ರ-ಸಂದೇಶಗಳನ್ನು ಹಾಕಿದ್ದರೆ ಚೆನ್ನಾಗಿರುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗದಿಂದ .8 ರಂದು ರೇಣುಕಾಸ್ವಾಮಿಯನ್ನು ಅಪಹರಿಸಿ ಕರೆತಂದು ಮಧ್ಯಾಹ್ನ 1 ಗಂಟೆಯಿಂದ 6 ಗಂಟೆ ನಡುವೆ ಪಟ್ಟಣಗೆರೆಯ ಜಯಣ್ಣ ಷೆಡ್‌ನಲ್ಲಿ ಅಂದೇ ಕೊಲೆ ಮಾಡಲಾಗಿದೆ ಎನ್ನುವುದು ಇಡೀ ಪ್ರಕರಣದ ಆರೋಪ. ಆದರೆ, ಗೆಳೆಯರ ಜೊತೆ ಊಟಕ್ಕೆ ಹೊರ ಹೋಗುತ್ತಿದ್ದೇನೆ. ಮಧ್ಯಾಹ್ನ ಊಟಕ್ಕೆ ಬರುವುದಿಲ್ಲ. ನನ್ನನ್ನು ಯಾರೂ ಅಪಹರಿಸಿಲ್ಲ ಎಂದು ಮೃತನು ಸಾಯುವ ಮುನ್ನ ತಂದೆ-ತಾಯಿಗೆ ಹೇಳಿದ್ದಾರೆ. ಇದರಿಂದ ಬಲ ಪ್ರಯೋಗ ಅಥವಾ ವಂಚನೆಯಿಂದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದಿಲ್ಲ ಎನ್ನುವುದು ತಿಳಿಯುತ್ತದೆ ಎಂದು ನಾಗೇಶ್ ವಾದಿಸಿದರು.
ರೇಣುಕಾಸ್ವಾಮಿ ಮೃತದೇಹವನ್ನು 2024ರ ಜೂ.9ರಂದು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿ ಸಿದ್ದು, ಜೂ.10 ಮತ್ತು 11ರಂದು ಮರಣೋತ್ತರ ಪರೀಕ್ಷೆ ನಡೆಸಿಲ್ಲ. ಶವಪರೀಕ್ಷೆ ವರದಿಯಲ್ಲಿ ರೇಣುಕಾಸ್ವಾಮಿ ಯಾವಾಗ ಸತ್ತಿದ್ದಾರೆ ಎಂದು ವೈದ್ಯರು ಹೇಳಿಲ್ಲ. ಇನ್ನೂ ಕಾಮಾಕ್ಷಿಪಾಳ್ಯ ಠಾಣೆಯ ತನಿಖಾಧಿಕಾರಿಗೆ ಘಟನಾ ಸ್ಥಳದ ಬಗ್ಗೆ ಜೂ.9ರಂದೇ ತಿಳಿದಿತ್ತು. ಆದರೆ, ಜೂ.9, 10 ಮತ್ತು 11ರಂದು ಯಾವುದನ್ನೂ ವಶಕ್ಕೆ ಪಡೆ ಯದೆ, ಜೂ.12ರಂದು ಕೊಲೆಗೆ ಬಳಸಲಾಗಿದೆ ಎನ್ನಲಾದ ಹಗ್ಗ, ಎರಡು ಅಡಿ ಉದ್ದದ ಲಾಟಿ, ಮರದ ಕೊಂಬೆಯನ್ನು ಜಪ್ತಿ ಮಾಡಿದ್ದಾರೆ. ಅಂದರೆ ಪಂಚನಾಮೆಯನ್ನು ವಿಳಂಬವಾಗಿ ಮಾಡಿದ್ದು, ಆ ನಡೆ ಒಪ್ಪತಕ್ಕ ದ್ದಲ್ಲ ಎಂದು ಪ್ರಬಲವಾಗಿ ವಾದಿಸಿದರು.
ದರ್ಶನ್ ವೈದ್ಯಕೀಯ ವರದಿ ಹೈಕೋರ್ಟ್‌ಗೆ ಸಲ್ಲಿಕೆ; ಜೈಲಿಂದ ಹೊರಬಂದ ನಂತರ ದಾಸನ ಹೊಸ ಅಪ್ಡೇಟ್ ಇದು
ತನಿಖಾಧಿಕಾರಿಗಳು ಸುಮಾರು 1,300 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಅದರಲ್ಲಿ 700 ಪುಟಗಳು ಕಾಲ್ ರೆಕಾರ್ಡಿಂಗ್ ವಿವರಗಳೇ ಇವೆ. ದರ್ಶನ್ ಅವರು ತನ್ನ ಮ್ಯಾನೇಜರ್ ಆರ್. ನಾಗರಾಜು, ಗೆಳತಿ ಪವಿತ್ರಾ ಗೌಡ ಜೊತೆ 5 ಬಾರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಮೊದಲ ಬಾರಿಗೆ ಅವರು ಮ್ಯಾನೇ ಜರ್ ಮತ್ತು ಗೆಳತಿಗೆ ಕರೆ ಮಾಡಿರುವುದಲ್ಲ. ಉಳಿದ ಆರೋಪಿಗಳಿಗೆ ದರ್ಶನ್ ಅಥವಾ ಆರೋಪಿಗಳು ದರ್ಶನ್‌ಗೆ ಕರೆ ಮಾಡಿಲ್ಲ. ಇನ್ನೂ ದರ್ಶನ್ ಅವರಿಂದ 37.40 ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡಿದ್ದು, ಅದನ್ನು ಸಾಕ್ಷ್ಯ ನಾಶಕ್ಕೆ ಸಂಗ್ರಹಿಸಿದ್ದರು ಎಂದು ಕತೆ ಹೆಣೆಯಲಾಗಿದೆ.
ಮಾರ್ಚ್‌ನಲ್ಲಿ ದರ್ಶನ್ ರಿಂದ ಪಡೆದಿದ್ದ ಹಣವನ್ನು ಅವರ ಗೆಳೆಯ ಹಿಂದಿರುಗಿಸಿದ್ದರು ಅಷ್ಟೆ. ಪ್ರಕರಣ ಒಟ್ಟು 17 ಮಂದಿಯಲ್ಲಿ 5 ಮಂದಿಗೆ ಜಾಮೀನಾಗಿದೆ. ಇದರಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದವನಿಗೂ ಜಾಮೀನಾಗಿದೆ ಎಂದು ಸಿ.ವಿ.ನಾಗೇಶ್ ವಿವರಿಸಿದರು.